ETV Bharat / state

ಪ್ರತಿಯೊಬ್ಬರ ಮೇಲೆ ಮೈಸೂರಿನಲ್ಲಿ 100 ಕ್ಕೂ ಹೆಚ್ಚು ಕೇಸ್​ಗಳಿವೆ: ಪೊಲೀಸ್ ಆಯುಕ್ತ

ನಿತ್ಯ ನಗರದಲ್ಲಿ 5 ಸಾವಿರ ಸಂಚಾರಿ ನಿಯಮ ಉಲ್ಲಂಘನೆ ಕೇಸ್ಗ‌ಳು ದಾಖಲಾಗುತ್ತಿವೆ. ಅದರಲ್ಲಿ 500 ಕೇಸ್‌ಗಳನ್ನು ಮಾತ್ರ ಪೊಲೀಸರು ಹಾಕುತ್ತಾರೆ. ಉಳಿದ 4 ಸಾವಿರದ 500 ಕೇಸ್‌ಗಳು ಸಿಸಿಟಿವಿ ಕ್ಯಾಮರಾ ಹಾಗೂ ತಂತ್ರಜ್ಞಾನದ ಆಧಾರದ ಮೇಲೆ ದಾಖಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

pending traffic violation cases in Mysore
ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ
author img

By

Published : Mar 26, 2021, 4:17 PM IST

ಮೈಸೂರು: ಮೈಸೂರು ನಗರದಲ್ಲಿ 36 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳು ಬಾಕಿ ಇವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಇಂದು ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 2016 ರಿಂದ ಇಲ್ಲಿಯವರೆಗೆ 36 ಲಕ್ಷ ಕೇಸ್ ಗಳು ಬಾಕಿ ಉಳಿದಿವೆ. ಸರ್ಕಾರಕ್ಕೆ ದಂಡದ ರೂಪದಲ್ಲಿ ಬರಬೇಕಾದ ಇಂತಿಷ್ಟು ಆದಾಯ ಕಡಿಮೆಯಾದ ಬಗ್ಗೆ ಆಡಿಟ್‌ನಲ್ಲಿ ಆಕ್ಷೇಪ ಹಾಕಲಾಗಿದೆ ಎಂದು ಹೇಳಿದ್ದಾರೆ.

pending traffic violation cases in Mysore
ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ

ನಿತ್ಯ ನಗರದಲ್ಲಿ 5 ಸಾವಿರ ಸಂಚಾರಿ ನಿಯಮದ ಉಲ್ಲಂಘನೆ ಕೇಸ್‌ಗಳು ದಾಖಲಾಗಿವೆ. ಅದರಲ್ಲಿ 500 ಕೇಸ್‌ಗಳನ್ನು ಮಾತ್ರ ಪೊಲೀಸರು ಹಾಕುತ್ತಾರೆ. ಉಳಿದ 4 ಸಾವಿರದ 500 ಕೇಸ್‌ಗಳು ಸಿಸಿಟಿವಿ ಕ್ಯಾಮರಾ ಹಾಗೂ ತಂತ್ರಜ್ಞಾನದ ಆಧಾರದ ಮೇಲೆ ದಾಖಲಾಗುತ್ತಿದೆ. ಪ್ರತಿಯೊಬ್ಬರ ಮೇಲೆ ಮೈಸೂರಿನಲ್ಲಿ 100 ಕ್ಕೂ ಹೆಚ್ಚು ಕೇಸ್​ಗಳಿವೆ. ಇವರನ್ನು ಒಂದೇ ಬಾರಿ ಕಟ್ಟಿ ಎಂದರೇ ಕಟ್ಟಲು ಸಾಧ್ಯವಿಲ್ಲ. ಆರ್.ಟಿ.ಒ.ಇಲಾಖೆಯ ವೆಬ್​ಸೈಟ್ ಲಿಂಕ್ ಮಾಡುವುದರ ಮೂಲಕ ಬಾಕಿ ಕ್ಲಿಯರೆನ್ಸ್ ಮಾಡುವ ಪ್ರಯತ್ನ ಯಶಸ್ವಿಯಾಗಿದೆ. ಸ್ಥಳದಲ್ಲೇ ದಂಡ ಕಟ್ಟಿ ಎಂದು ಕೇಳುವ ಉದ್ದೇಶ ಇಲಾಖೆಗೂ ಇಲ್ಲ. ಸಾಧ್ಯವಾದಷ್ಟು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಕಡಿಮೆಯಾದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧವಿಲ್ಲ, ಬಿಜೆಪಿ ದುರಾಡಳಿತವೇ ನಮಗೆ ಅಸ್ತ್ರ.. ಸತೀಶ್​ ಜಾರಕಿಹೊಳಿ‌

ರಿಂಗ್ ರಸ್ತೆ ಅಪಘಾತ ಪ್ರಕರಣ:

ಮೈಸೂರಿನ ರಿಂಗ್ ರಸ್ತೆ ಅಪಘಾತ ಪ್ರಕರಣ ಸಂಬಂಧ ಶೀಘ್ರವಾಗಿ ಸ್ಪಂದಿಸಿದ 112 ವಾಹನ ಸಿಬ್ಬಂದಿ ಹಾಗೂ ಇತರರಿಗೆ ಮಾತ್ರ ಪ್ರಶಂಸನಾ ಪತ್ರ ನೀಡಲಾಗಿದೆ. ಸಿಬ್ಬಂದಿಗಳ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಳ್ಳಲು ಪ್ರಶಂಸೆ ಮಾಡಲಾಗಿದೆ. ಘಟನೆ ಸಂಬಂಧ ಸ್ಥಳದಲ್ಲಿದ್ದ ಸಿಬ್ಬಂದಿಗಳ ವಿಚಾರಣೆ ನಡೆಯುತ್ತಿದೆ. ಯಾವುದೇ ಕ್ರಮವಾಗಿಲ್ಲ. ಮುಂದೆ ಇಂತಹ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ನಗರದಲ್ಲಿ ಸ್ವಯಂ ತಪಾಸಣಾ ಕೇಂದ್ರ ಸ್ಥಾಪನೆ ಮಾಡುತ್ತೇವೆ. ಪ್ರಯೋಗಾರ್ಥವಾಗಿ‌ ಒಂದು ತಿಂಗಳ ಕಾಲ ಈ ವ್ಯವಸ್ಥೆ ತರುತ್ತೇವೆ. ಎಷ್ಟು ಮಂದಿ ಸಾರ್ವಜನಿಕರು ಸ್ವತಃ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಾರೆ ನೋಡೋಣ ಎಂದು ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.