ETV Bharat / state

ಎಲ್ಲೆಂದರಲ್ಲಿ ಕಸ ಹಾಕಿದ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ ಮೈಸೂರು ಪಾಲಿಕೆ - Penalties for shop owners who litter on the road in Mysore

ಬಿಲ್‌ಗಳು, ಮೊಬೈಲ್ ಬಾಕ್ಸ್ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ ಸುರಿಯಲಾಗಿತ್ತು. ಪರಿಶೀಲನೆ ಸಂದರ್ಭದಲ್ಲಿ ಮೊಬೈಲ್ ಬಿಲ್‌ ಅನ್ನು ಗಮನಿಸಿದ ಅಧಿಕಾರಿಗಳು, ತ್ಯಾಜ್ಯವನ್ನು ವಾಪಸ್ಸು ಆಯಾ ಮಳಿಗೆಯ ಮುಂದೆ ಹಾಕಿದ್ದಾರೆ.

Penalties for shop owners who litter on the road in Mysore
ಎಲ್ಲೆಂದರಲ್ಲಿ ಕಸ ಹಾಕಿದ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ ಮೈಸೂರು ಪಾಲಿಕೆ
author img

By

Published : Jan 18, 2021, 3:13 PM IST

ಮೈಸೂರು : ಮೈಸೂರು ಮಹಾನಗರ ಪಾಲಿಕೆಯ ನಿಯಮವನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಕಸ ಹಾಕಿದ ಎರಡು ಮೊಬೈಲ್ ಮಾರಾಟ ಮಳಿಗೆಗಳಿಗೆ ನಗರ ಪಾಲಿಕೆ ದಂಡ ವಿಧಿಸಿದೆ.

ಪ್ರಸ್ತುತ ಸ್ವಚ್ಛ ಸರ್ವೇಕ್ಷಣ- 2021ರ ಸರ್ವೇ ಕಾರ್ಯಗಳ ಅಂಗವಾಗಿ ಪಾಲಿಕೆಯ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳು ಪ್ರತಿದಿನ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ವೇಳೆಯಲ್ಲಿ ಸೋಮವಾರ ಜೋನ್-3 ರ ವ್ಯಾಪ್ತಿಗೆ ಒಳಪಡುವ ವಾರ್ಡ್‌-47 ರ ಕುವೆಂಪು ನಗರದ ಅಕ್ಷಯ ಭಂಡಾರ್‌ನಲ್ಲಿರುವ ಸಂಗೀತ ಹಾಗೂ ಪೂರ್ವಿಕ ಮೊಬೈಲ್ ಮಳಿಗೆಗಳ ಹೆಸರಿನ ಬಿಲ್‌ಗಳು, ಮೊಬೈಲ್ ಬಾಕ್ಸ್ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ ಸುರಿಯಲಾಗಿತ್ತು.

Penalties for shop owners who litter on the road in Mysore
ಎಲ್ಲೆಂದರಲ್ಲಿ ಕಸ ಹಾಕಿದ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸಿದ ಮೈಸೂರು ಪಾಲಿಕೆ

ಪರಿಶೀಲನೆ ಸಂದರ್ಭದಲ್ಲಿ ಮೊಬೈಲ್ ಬಿಲ್‌ ಅನ್ನು ಗಮನಿಸಿದ ಅಧಿಕಾರಿಗಳು, ತ್ಯಾಜ್ಯವನ್ನು ವಾಪಸ್ಸು ಆಯಾ ಮಳಿಗೆಯ ಮುಂದೆ ಹಾಕಿದ್ದಾರೆ. ನಂತರ ಎರಡೂ ಮಳಿಗೆಗಳಿಗೂ 1 ಸಾವಿರ ರೂ. ದಂಡ ವಿಧಿಸಿ, ಇಂತಹ ಬೇಜವಾಬ್ದಾರಿತನ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ; ಚನ್ನಪಟ್ಟಣಕ್ಕೆ ಸಿಪಿವೈ ಆಗಮನ: ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ

ಕಸ ಹಾಕಲೆಂದು ಪಾಲಿಕೆಯಿಂದ ನಿಗದಿತ ಸ್ಥಳ ಗುರುತಿಸಲಾಗಿದೆ. ಪ್ರತಿದಿನವೂ ಕಸ ವಿಲೇವಾರಿ ಮಾಡಲು ಪೌರಕಾರ್ಮಿಕ ಸಿಂಬ್ಬಂದಿ ಶ್ರಮವಹಿಸುತ್ತಾರೆ. ಆದರೆ ಕೆಲವರು ಎಲ್ಲೆಂದರಲ್ಲಿ ಕಸ ಹಾಕುವುದರಿಂದ ನಗರವನ್ನು ಸ್ವಚ್ಛವಾಗಿಡಲು ಸಾಧ್ಯವಿಲ್ಲ. ಹಾಗಾಗಿ ಇನ್ನು ಮುಂದೆ ಇಂತಹ ಘಟನೆ ನಡೆಯಬಾರದೆಂದು ಎರಡು ಮಳಿಗೆಗಳಿಗೆ ದಂಡ ವಿಧಿಸಲಾಗಿದೆ ಎಂದು ವಲಯ 3 ರ ಆಯುಕ್ತ ಟಿ.ಎಸ್. ಸತ್ಯಮೂರ್ತಿ ಮಾಹಿತಿ ನೀಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.