ಮೈಸೂರು: ಕೃಷಿ ಹೊಂಡ ನಿರ್ಮಾಣದ ಅನುದಾನ ಬಿಡುಗಡೆಗಾಗಿ 20 ಸಾವಿರ ರೂ. ಲಂಚವನ್ನು ಪಡೆಯುತ್ತಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪೊಲೀಸರು ಬಂಧಿಸಿದ್ದಾರೆ.
ಬನ್ನೂರು ಬಳಿಯ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಚಂದ್ರೇಶ್, ಎಸಿಬಿ ಬಲೆಗೆ ಬಿದ್ದವ. ಯಾಚೇನಹಳ್ಳಿ ಗ್ರಾಮದ ನಿವಾಸಿ ಹೇಮಂತ್ ಕುಮಾರ್ ಎಂಬವರು ಕೃಷಿ ಗುಂಡಿ ನಿರ್ಮಾಣಕ್ಕೆ ಸರ್ಕಾರದ ಅನುದಾನಕ್ಕಾಗಿ ಅರ್ಜಿ ಹಾಕಿದ್ದರು. ಅನುದಾನದ ಹಣ ಬಿಡುಗಡೆಯಾಗಬೇಕಾದರೆ ಪಿಡಿಒ ಚಂದ್ರೇಶ್ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡುವುದಾಗಿ ಹೇಳಿ ಬಂದ ಹೇಮಂತ್, ಎಸಿಬಿ ಡಿಎಸ್ಪಿ ಪರಶುರಾಮಪ್ಪ ಅವರಿಗೆ ದೂರು ನೀಡಿದ್ದರು.
ನಂತರ ಕಾರ್ಯಾಚರಣೆ ನಡೆಸಿದ ಎಸಿಬಿ ಪೊಲೀಸರು, ಪಿಡಿಒರನ್ನು ಖೆಡ್ಡಕ್ಕೆ ಬೀಳಿಸಿದ್ದಾರೆ.