ಮೈಸೂರು: ನಿತ್ಯ ಸಾವಿರಕ್ಕೂ ಅಧಿಕ ರೋಗಿಗಳು ಇತರ ತಪಾಸಣೆಗೆ ಬರುತ್ತಿದ್ದರು. 250ಕ್ಕೂ ಹೆಚ್ಚು ರೋಗಿಗಳು ವಿವಿಧ ವಿಭಾಗಗಳಲ್ಲಿ ದಾಖಲಾಗುತ್ತಿದ್ದರು. ಆದರೆ, ಕೊರೊನಾ ಸೋಂಕಿನ ಭೀತಿಯಿಂದ ಕೆ.ಆರ್.ಆಸ್ಪತ್ರೆಯಲ್ಲಿ ಗಣನೀಯ ಪ್ರಮಾಣದಲ್ಲಿ ದಾಖಲಾಗುವ ರೋಗಿಗಳ ಸಂಖ್ಯೆ ಕುಸಿತ ಕಂಡಿದೆ ಎಂದು ಕೆ.ಆರ್.ಆಸ್ಪತ್ರೆ ಅಧೀಕ್ಷಕ ಡಾ.ನಂಜುಂಡಸ್ವಾಮಿ ಹೇಳಿದರು.
ಇಲ್ಲಿನ ಕಲ್ಯಾಣಗಿರಿ, ಉದಯಗಿರಿ, ಮಂಡಿ, ಮೊಹಲ್ಲಾ, ಕೆಸರೆ, ಗಾಂಧಿನಗರ ಹಲವು ಪ್ರದೇಶಗಳಿಂದ ನಿತ್ಯ ರೋಗಿಗಳು ಬರುತ್ತಿದ್ದರು. ಕಳೆದ ಒಂದು ವಾರದಿಂದ ನಿತ್ಯ 50ರಿಂದ 70 ರೋಗಿಗಳು ಮಾತ್ರ ದಾಖಲಾಗುತ್ತಿದ್ದಾರೆ ಎಂದರು.
ಶನಿವಾರದಿಂದ ಹೊರ ರೋಗಿಗಳ ವಿಭಾಗ (ಒಪಿಡಿ) ಬಂದ್ ಮಾಡಲಾಗುತ್ತಿದ್ದು, ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೇವೆ ಎಂದರು.