ETV Bharat / state

ಮೈಸೂರು: ಲಾಕ್​ಡೌನ್ ಹಿನ್ನಲೆ ಕಡಿಮೆಯಾದ ಸಾಂಕ್ರಾಮಿಕ ರೋಗಗಳು

ಕಳೆದ ಜನವರಿಯಿಂದ ಆಗಸ್ಟ್​ವರೆಗೆ ಲಾಕ್​ಡೌನ್ ಹಿನ್ನಲೆಯಲ್ಲಿ ಜನರ ಓಡಾಟ ಕಡಿಮೆಯಾಗಿದ್ದು, ಪರಿಸರ ಸ್ವಚ್ಛವಾಗಿರುವ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಕಡಿಮೆಯಾಗಿವೆ.

jeep
jeep
author img

By

Published : Oct 25, 2020, 3:34 PM IST

ಮೈಸೂರು: ಲಾಕ್​ಡೌನ್ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗಗಳ ಪ್ರಮಾಣ ಕಡಿಮೆಯಾಗಿದ್ದು, ಈ ವರ್ಷ ಮಲೇರಿಯಾ, ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಖ್ಯೆ ಕಡಿಮೆಯಾಗಿದೆ.

ಕಳೆದ ಜನವರಿಯಿಂದ ಆಗಸ್ಟ್​ವರೆಗೆ ಲಾಕ್​ಡೌನ್ ಹಿನ್ನಲೆಯಲ್ಲಿ ಜನರ ಓಡಾಟ ಕಡಿಮೆಯಾಗಿದ್ದು, ಪರಿಸರ ಸ್ವಚ್ಛವಾಗಿರುವ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್ ಗುನ್ಯಾದಂತಹ ಕಾಯಿಲೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಇದೆ.

ಕಡಿಮೆಯಾದ ಸಾಂಕ್ರಾಮಿಕ ರೋಗಗಳು

ಚಿಕನ್ ಗುನ್ಯಾ: ಇದು ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಯಿಂದ ಹರಡುತ್ತದೆ. ಈ ಕಾಯಿಲೆಗೆ ವ್ಯಾಕ್ಸಿನ್ ಇಲ್ಲದ ಕಾರಣ ಇದು ಉಳಿದುಕೊಂಡಿದೆ. ಚಿಕನ್ ಗುನ್ಯಾ ಸೊಳ್ಳೆಯಿಂದ ಹರಡುವ ರೋಗವಾಗಿದ್ದು ಇದು ಒಬ್ಬ ವ್ಯಕ್ತಿಯಿಂದ ಒಬ್ಬ ವ್ಯಕ್ತಿಗೆ ಹರಡುವ ಕಾಯಿಲೆಯಾದೆ. 2007-08ರಲ್ಲಿ ಶೇ 80ರಷ್ಟು ಜನರಲ್ಲಿ ಈ ರೋಗ ಕಂಡುಬಂದಿದ್ದು, ಈಗ ಈ ರೋಗ ಹತೋಟಿಯಲ್ಲಿದೆ. ಕಳೆದ ಜನವರಿಯಿಂದ ಆಗಸ್ಟ್​ವರೆಗೆ ಮೈಸೂರು ಜಿಲ್ಲೆಯಲ್ಲಿ ಕೇವಲ 13 ಚಿಕನ್ ಗುನ್ಯಾ ಪ್ರಕರಣಗಳು ಮಾತ್ರ ಕಂಡು ಬಂದಿದೆ. ಸೊಳ್ಳೆಗಳು ಕೊಳಚೆ ನೀರಿನಲ್ಲಿ ಕೂತು ಮನುಷ್ಯನಿಗೆ ಕಚ್ಚಿದಾಗ ಈ ರೋಗ ಬರುತ್ತದೆ. ಮಾನ್ಸೂನ್ ಅವಧಿಯಲ್ಲಿ ಈ ರೋಗ ಹೆಚ್ಚಾಗಿದ್ದು, ಲಾಕ್​ಡೌನ್ ಹಿನ್ನಲೆಯಲ್ಲಿ ಚಿಕನ್ ಗುನ್ಯಾ ಪ್ರಕರಣಗಳು ಕಡಿಮೆಯಾಗಿದೆ.

ಮಲೇರಿಯಾ: ಮೈಸೂರು ಜಿಲ್ಲೆಯಲ್ಲಿ 2018ರಲ್ಲಿ 7-8 ಮಲೇರಿಯಾ ಪ್ರಕರಣಗಳು ಮಾತ್ರ ಕಂಡು ಬಂದಿದ್ದು, 2019-20ರಲ್ಲಿ ಆಗಸ್ಟ್​ವರೆಗೆ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಆದರೂ ರೋಗಲಕ್ಷಣಗಳು ಕಂಡು ಬಂದ ತಕ್ಷಣ ಪರೀಕ್ಷೆ ನಡೆಸಿದ್ದು, ಅದರಲ್ಲೂ ಸಹ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಆದ್ದರಿಂದ ಮೈಸೂರು ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆ ಎಂದು ಕರೆಯುತ್ತಾರೆ.

ಡೆಂಗ್ಯೂ: ಡೆಂಗ್ಯೂ ವರ್ಷ ಪೂರ್ತಿ ಇರುವ ಸಾಂಕ್ರಾಮಿಕ ರೋಗವಾಗಿದ್ದು, ಮೈಸೂರು ಜಿಲ್ಲೆಯಲ್ಲಿ 2013, 2017ರಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ಈ ಸಂದರ್ಭದಲ್ಲಿ 1000 ಜನರಿಗೆ ಡೆಂಗ್ಯೂ ಬಂದಿದ್ದು, ಇಬ್ಬರು ಸಾವನ್ನಪ್ಪಿದ್ದರು. 2020 ಜನವರಿಯಿಂದ ಆಗಸ್ಟ್​ವರೆಗೆ 23 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಕ್​ಡೌನ್​ನಿಂದ ಮಾಲಿನ್ಯ ಇಲ್ಲದ ಕಾರಣ ಸೊಳ್ಳೆಗಳು ಹೆಚ್ಚು ಇಲ್ಲದೆ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗಿದೆ ಆದರೂ ಮಳೆಗಾಲ‌ ಆದ್ದರಿಂದ ಇನ್ನು ಮುಂದೆ ಸೊಳ್ಳೆಗಳಿಂದ ರಕ್ಷಣೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ.

ಈ ವರ್ಷ ಮೈಸೂರು ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳಾದ ಚಿಕನ್ ಗುನ್ಯಾ, ಮಲೇರಿಯಾ ಹಾಗೂ ಡೆಂಗ್ಯೂದಂತಹ ಪ್ರಕರಣಗಳು ಲಾಕ್​ಡೌನ್ ಹಿನ್ನಲೆಯಲ್ಲಿ ಕಡಿಮೆಯಾಗಿದೆ. ಆದರೂ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸಿಲಾಗಿದೆ ಎಂದು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರಾದ ಡಾ.ಚಿದಂಬರಂ ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.