ETV Bharat / state

ಅಂಗಾಂಗ ದಾನದಿಂದ ಐವರಿಗೆ ಜೀವದಾನ.. ತಂದೆಯ ಸಾವಿನ ನೋವಲ್ಲೂ ಮಾನವೀಯತೆ ಮೆರೆದ ಮಕ್ಕಳು - ಮೆದುಳು ನಿಷ್ಕ್ರಿಯ

ತಂದೆಯ ಸಾವಿನಲ್ಲೂ ಮಕ್ಕಳು ಐವರಿಗೆ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

Organ Donation In Mysore
ತಂದೆಯ ಸಾವಿನಲ್ಲೂ ಸಾರ್ಥಕತೆ ತೋರಿದ ಮಕ್ಕಳು
author img

By

Published : Oct 27, 2022, 6:44 PM IST

ಮೈಸೂರು: ತಂದೆಯ ಸಾವಿನ ನೋವಲ್ಲೂ ಅವರ ಅಂಗಾಂಗ ದಾನ ಮಾಡುವ ಮೂಲಕ ಮಕ್ಕಳು ಮಾನವೀಯತೆ ಮೆರೆದಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಗಂಜಿಗೆರೆ ಕೊಪ್ಪಲು ಗ್ರಾಮದ ರೈತ ಮೊಗಣ್ಣೆಗೌಡ (67 ವರ್ಷ) ಇದ್ದಕ್ಕಿದ್ದಂತೆ ವಿಪರೀತ ತಲೆನೋವು ಕಾಣಿಸಿಕೊಂಡು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಮೆದುಳಿಗೆ ಸ್ಟ್ರೋಕ್ ಆಗಿ, ಮೊಗಣ್ಣೆಗೌಡ ಕೋಮಾಗೆ ಜಾರಿದ್ದರು. ವೈದ್ಯರು ಪರೀಕ್ಷೆ ಮಾಡಿದಾಗ ಮೊಗಣ್ಣೆಗೌಡ ಅವರ ಮೆದುಳು ನಿಷ್ಕ್ರಿಯಗೊಂಡಿರುವ ವಿಚಾರ ಗೊತ್ತಾಗಿತ್ತು. ಇದನ್ನು ಅವರ ಮಕ್ಕಳಿಗೆ ವೈದ್ಯರು ಮನವರಿಕೆ ಮಾಡಿದ್ದರು.

Organ Donation In Mysore
ರೈತ ಮೊಗಣ್ಣೆಗೌಡ

ತಂದೆ ಉಳಿಯುವುದಿಲ್ಲ ಎಂದು ಗೊತ್ತಾದಾಗ ಅವರ ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಅನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಅದು ಐವರು ರೋಗಿಗಳಿಗೆ ಹೊಸ ಜೀವನ ನೀಡಲು ಸಾಧ್ಯವಾಗಿದೆ. ತಂದೆಯ ಸಾವಿನಲ್ಲೂ ಅವರ ಮಕ್ಕಳ ಈ ಮಾನವೀಯ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾಸನಾಂಬೆ ದೇಗುಲ ದರ್ಶನ ಸಂಪನ್ನ.. ಮುಂದಿನ ವರ್ಷದ ದರ್ಶನ ಸಮಯ ಇಂದೇ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.