ಮೈಸೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ ಪ್ಲಾಸ್ಟಿಕ್ ಹಾಗೂ ಸಿಂಥೆಟಿಕ್ ಬಾವುಟವನ್ನು ಹಾರಿಸಬಾರದು. ಖಾದಿ ಬಾವುಟವನ್ನೇ ಕೇಂದ್ರ ಸರ್ಕಾರ ಹಾರಿಸಬೇಕು ಎಂದು ಒತ್ತಾಯಿಸಿ ನಾಗರಿಕ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿವೃತ್ತದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿ, ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಸ್ವಾತಂತ್ರ್ಯ ಉದ್ಯಾನವನದ ವೇದಿಕೆ ಬಳಿ ಪ್ರತಿಭಟನಾಕಾರರು ಆಗಮಿಸಿದರು. ಅಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ದಿನೇ ದಿನೇ ದುರಾಡಳಿತವನ್ನು ಹೆಚ್ಚಳ ಮಾಡುತ್ತಿದೆ. ಎಲ್ಲ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ. ಈಗ ಬಾವುಟದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ, ದೀನಬಂಧು ಸಂಸ್ಥೆ ಮುಖ್ಯಸ್ಥ ಜಯದೇವ್ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು.
ಇದನ್ನೂ ಓದಿ: ತ್ರಿವರ್ಣ ಧ್ವಜವನ್ನು ಸಾಮಾಜಿಕ ಮಾಧ್ಯಮಗಳ ಡಿಪಿಯಾಗಿ ಬಳಸಿ: ಪ್ರಧಾನಿ ಮೋದಿ ಕರೆ