ಮೈಸೂರು: ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ನಲ್ಲಿ ದಿನದ 3 ಹೊತ್ತು ಉಚಿತ ಆಹಾರ ನೀಡಲಾಗುತ್ತಿದ್ದು, ಪಾರ್ಸೆಲ್ಗೆ ಮಾತ್ರ ವ್ಯವಸ್ಥೆ ಇದೆ.
ಮೈಸೂರು ನಗರದ ಕೆ.ಆರ್ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಿಜವಾಗಿಯೂ ಹಸಿದವರ ಪಾಲಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ. ಆಸ್ಪತ್ರೆಗೆ ಬರುವ ಬಡ ರೋಗಿಗಳ ಜೊತೆ ಬರುವ ಜನರು ಆಸ್ಪತ್ರೆ ಒಳಗೆ ಹೋಗುವ ಹಾಗಿಲ್ಲ. ಇದೇ ಆವರಣದಲ್ಲಿರುವ ಜನರಿಗೆ ಹೊಟ್ಟೆ ತುಂಬಿಸುವ ಕೆಲಸದ ಜೊತೆಗೆ ಆಸ್ಪತ್ರೆ ಬಳಿಯ ಕೂಲಿ ಕೆಲಸಗಾರರು, ಭಿಕ್ಷುಕರಿಗೆ ಈ ಇಂದಿರಾ ಕ್ಯಾಂಟೀನ್ ಆಧಾರವಾಗಿದೆ.
ಓದಿ:18-44 ವಯೋಮಾನದವರಿಗೆ ಕೋವಿಡ್ ಲಸಿಕೆ ಹಂಚಿಕೆ ಮುಂದೂಡಲು ಸರ್ಕಾರದ ಚಿಂತನೆ
ಪಾರ್ಸೆಲ್ ಕೊಡುತ್ತಿರುವ ಬಗ್ಗೆ ಮಾತನಾಡಿರುವ ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ಸಂತೋಷ್, ನಿತ್ಯ ಆಸ್ಪತ್ರೆಗೆ ನೂರಾರು ಸಂಖ್ಯೆಯ ರೋಗಿಗಳು ಸಂಬಂಧಿಕರು ಬರುತ್ತಾರೆ. ಕೆ.ಆರ್. ಆಸ್ಪತ್ರೆ ಒಳಗೆ ಇಂದಿರಾ ಕ್ಯಾಂಟೀನ್ ಇರುವ ಕಾರಣ ಕೋವಿಡ್ ಹಾಗೂ ಸ್ವಚ್ಚತೆ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಲಾಗಿದೆ ಎಂದಿದ್ದಾರೆ.