ETV Bharat / state

ಆಹ್ವಾನ ಪತ್ರ ಕೊಡುವ ನೆಪದಲ್ಲಿ ಬಂದ ಅಪರಿಚಿತರು: ದಂಪತಿಗೆ ಚಾಕುವಿನಿಂದ ಇರಿದು ಪರಾರಿ - ತಂದೆ ತಾಯಿ ಮೇಲೆ ಹಲ್ಲೆ

ಮಗನನ್ನು ಹುಡುಕಿಕೊಂಡು ಬಂದು ತಂದೆ ತಾಯಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಅಪರಿಚಿತರು.

strangers stabbed couple and escaped
ದಂಪತಿಗೆ ಚಾಕುವಿನಿಂದ ಇರಿದು ಪರಾರಿ
author img

By

Published : Aug 17, 2023, 12:29 PM IST

ಮೈಸೂರು: ಹೊಸಮನೆಯ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು, ಚಿನ್ನದ ವ್ಯಾಪಾರಿಯನ್ನು ಅವರ ಮನೆಯಲ್ಲೇ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ಹೂಟಗಳ್ಳಿ ಕೆ ಎಚ್ ಬಿ ಕಾಲೊನಿಯಲ್ಲಿ ನಡೆದಿದೆ. ಜ್ಯುವೆಲ್ಲರಿ ಮಾಲೀಕ ಬಾಬುರಾಮ್ ಮತ್ತು ಆತನ ಹೆಂಡತಿ ಕಮಲಬಾಯಿ ಇಬ್ಬರು ಇರಿತಕ್ಕೊಳಗಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇರಿತಕ್ಕೆ ಒಳಗಾದ ಇಬ್ಬರಿಂದ ಮಾಹಿತಿ ಪಡೆದಿದ್ದಾರೆ.

ಬುಧವಾರ ಮಧ್ಯಾಹ್ನ ಒಬ್ಬ ಪುರುಷ ಹಾಗೂ ಮಹಿಳೆ ಜ್ಯುವೆಲ್ಲರಿ ಮಾಲೀಕ ಬಾಬುರಾಮ್ ಅವರ ಹೂಟಗಳ್ಳಿಯ ಕೆ ಎಚ್ ಬಿ ಕಾಲೊನಿಯ ನಿವಾಸಕ್ಕೆ ಆಗಮಿಸಿದ್ದಾರೆ. ಬಂದವರು ಅವರ ಮನೆಯ ಮುಂಭಾಗದ ಕಾಲಿಂಗ್ ಬೆಲ್ ಮಾಡಿ, ನಿಮ್ಮ ಮಗ ಹರೀಶನಿಗೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡಬೇಕು. ಅವನನ್ನು ಕರೆಯಿರಿ ಎಂದು ಹೇಳಿದ್ದಾರೆ. ಆಗ ಬಾಬುರಾಮ್​ ಮಗ ಮನೆಯಲ್ಲಿ ಇಲ್ಲ ಎಂದಿದ್ದಾರೆ. ಮನೆಯ ಹೊರಭಾಗದಲ್ಲೇ ನಿಂತಿದ್ದ ಇಬ್ಬರು, ಮಗ ಮನೆಯಲ್ಲಿ ಇಲ್ಲ ಎಂದು ಹೇಳಿದಾಗ, ನಮಗೆ ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾರೆ.

ಆಗ ನೀರು ತರಲು ಹೋದ ಬಾಬುರಾಮ್​ ಜೊತೆಯಲ್ಲೇ ಮನೆಗೆ ನುಗ್ಗಿದ ಮಹಿಳೆ ಮತ್ತು ಪುರುಷ ನಿಮ್ಮ ಮಗ ಎಲ್ಲಿ ಎಂದು ಮತ್ತೆ ಕೇಳಿದ್ದಾರೆ. ಆತ ಮನೆಯಲ್ಲಿ ಇಲ್ಲ ಎಂದು ಮತ್ತೆ ಬಾಬುರಾಮ್ ಹೇಳಿದಾಗ, ಅವರ ಮೇಲೆ ಚಾಕುವಿನಿಂದ ಹಲ್ಲೇ ಮಾಡಿದ್ದಾರೆ. ಬಿಡಿಸಲು ಬಂದ ಹೆಂಡತಿ ಕಮಲಬಾಯಿ ಅವರಿಗೂ ಚೂರಿ ಇರಿದಿದ್ದಾರೆ. ಕಮಲಬಾಯಿ ಅವರು ಕೂಗಿಕೊಂಡಿದ್ದು, ಆಗ ಜನ ಸೇರುತ್ತಾರೆ ಎಂದು ಹೆದರಿ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಜಯನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ. ಇವರು ಮಗ ಹರೀಶನನ್ನು ಕೊಲೆ ಮಾಡುವ ಉದ್ದೇಶದಿಂದಲೇ ದ್ವಿಚಕ್ರ ವಾಹನದಲ್ಲಿ ಬಂದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಬಾಬುರಾಮ್ ಮನೆಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರವಾರ: ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ, ಆರೋಪಿ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.