ETV Bharat / state

ವೃದ್ಧೆಯ ಚಿನ್ನದ ಸರ ಕದ್ದು ಸರಗಳ್ಳರು ಎಸ್ಕೇಪ್​​​ - mysore gold chain steal news

ಚಂದ್ರಮ್ಮ ಎಂಬುವವರು ವಾಯು ವಿಹಾರಕ್ಕೆ ಹೋಗುತ್ತಿರುವಾಗ ಪಲ್ಸರ್ ಬೈಕ್​ನಲ್ಲಿ ಬಂದ ಸರಗಳ್ಳರು, 1.50 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಮ್ಮ
ಚಂದ್ರಮ್ಮ
author img

By

Published : Jan 10, 2021, 7:07 PM IST

Updated : Jan 10, 2021, 7:22 PM IST

ಮೈಸೂರು: ವಾಯು ವಿಹಾರಕ್ಕೆ ತೆರಳಿದ್ದ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಸರಗಳ್ಳರು ಕದ್ದು ಪರಾರಿಯಾಗಿರುವ ಘಟನೆ ತಿ.ನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್​ನಲ್ಲಿ ನಡೆದಿದೆ.

ಚಿನ್ನದ ಸರ ಕದ್ದು ಸರಗಳ್ಳರು ಎಸ್ಕೇಪ್​​​

ಹೌಸಿಂಗ್ ಬೋರ್ಡ್​ನ ನಿವಾಸಿ ಮಲ್ಲಪ್ಪ ಎಂಬುವರ ಪತ್ನಿ ಚಂದ್ರಮ್ಮ ವಾಯು ವಿಹಾರಕ್ಕೆ ಹೋಗುತ್ತಿದ್ದಾಗ ಪಲ್ಸರ್ ಬೈಕ್​ನಲ್ಲಿ ಬಂದ ಸರಗಳ್ಳರು, 1.50 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಿಷ್ಯಂತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ರಸ್ತೆ ವಿಭಜಕದ ಮೇಲೆ ಪ್ರಾಣಬಿಟ್ಟ ವ್ಯಕ್ತಿ

ದಿನೇ ದಿನೆ ನರಸೀಪುರ ಪಟ್ಟಣದಾದ್ಯಂತ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿವೆ. ಕೂಡಲೇ ಪೊಲೀಸ್ ಇಲಾಖೆ ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕಬೇಕು. ಮಹಿಳೆಯರು ವಾಕಿಂಗ್ ಹೋಗುವಾಗ ಬೆಲೆ ಬಾಳುವ ವಸ್ತುಗಳನ್ನು ಹಾಕಿಕೊಂಡು ಹೋಗಬೇಡಿ ಎನ್ನುತ್ತಾರೆ ಚಂದ್ರಮ್ಮ.

Last Updated : Jan 10, 2021, 7:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.