ETV Bharat / state

ಸಾಂಪ್ರದಾಯಿಕ ಉಡುಗೆ ತೊಟ್ಟು ಬೀದಿಗಿಳಿದ ಅಧಿಕಾರಿ ಸಿಬ್ಬಂದಿ ವರ್ಗ : ಮತದಾನ ಜಾಗೃತಿಗೆ ವಿನೂತನ ಪ್ರಯತ್ನ

author img

By

Published : Mar 27, 2023, 8:39 PM IST

ನಂಜನಗೂಡು ತಾಲೂಕು ಪಂಚಾಯಿತಿ ಅಧಿಕಾರಿಗಳು ವಿಶೇಷವಾಗಿ ಜಾಥ ನಡೆಸುವ ಮೂಲಕ ಯುವ ಮತದಾರರಿಗೆ ಜಾಗೃತಿ ಮೂಡಿಸಿದ್ದಾರೆ.

Nanjangudu Taluk Panchayat Officers
ನಂಜನಗೂಡು ತಾಲೂಕು ಪಂಚಾಯಿತಿ ಅಧಿಕಾರಿಗಳು
ಮತದಾನ ಜಾಗೃತಿಗೆ ವಿನೂತನ ಪ್ರಯತ್ನ

ನಂಜನಗೂಡು (ಮೈಸೂರು) : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸನಿಹವಾಗುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ಉತ್ಸಾಹ ಮೂಡುತ್ತಿದೆ. ಜೊತೆಗೆ ಅಧಿಕಾರಿಗಳಲ್ಲೂ ಜವಾಬ್ದಾರಿ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಚುನಾವಣೆಯ ಕೇಂದ್ರ ಬಿಂದು 18 ವರ್ಷದ ತುಂಬಿದ ಯುವ ಮತದಾರರು ಎಂದರೆ ತಪ್ಪಾಗಲಾರದು. ಈ ಯುವ ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡು ನೂರಕ್ಕೆ ನೂರು ಮತದಾನ ಮಾಡುವಂತೆ ದಕ್ಷಿಣಕಾಶಿ ನಂಜನಗೂಡು ತಾಲೂಕು ಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ವಿನೂತನವಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಸಾಂಪ್ರದಾಯಿಕ ಉಡುಗೆ ತೊಟ್ಟು ಬೈಕ್ ರ್ಯಾಲಿ ಹಾಗೂ ಕಾಲ್ನಡಿಗೆ ಜಾಥ ಹೊರಟ ಅಧಿಕಾರಿಗಳು, ಮತದಾನದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆ ಯುವ ಸಮೂಹಕ್ಕೆ ಮತದಾನದ ಕುರಿತು ತಿಳುವಳಿಕೆಯನ್ನು ಸಹಾ ಹೇಳುವ ಪ್ರಯತ್ನ ಮಾಡಿದ್ದಾರೆ. ನಂಜನಗೂಡು ತಾಲೂಕು ಸ್ವೀಪ್ ಸಮಿತಿಯ ಮೂಲಕ ಮತದಾನದ ಜಾಗೃತಿ ಜಾಥ ಕಾರ್ಯಕ್ರಮ ನಡೆದಿದ್ದು, ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮತದಾನದ ಜಾಗೃತಿ ಜಾಥಾಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಮತ್ತು ತಹಶೀಲ್ದಾರ್ ಶಿವಕುಮಾರ್ ಅವರು ಚಾಲನೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯಾಲಯದಿಂದ ಹೊರಟು ಪಟ್ಟಣದ ಎಂ.ಜಿ ರಸ್ತೆಯ ಮೂಲಕ ಖಾಸಗಿ ಬಸ್ ನಿಲ್ದಾಣದವರೆಗೂ ಬೈಕ್ ರ್ಯಾಲಿ ಮತ್ತು ಕಾಲ್ನಡಿಗೆ ಮೂಲಕ ಜಾಥಾ ನಡೆಸಿ ಅರಿವು ಮೂಡಿಸಲಾಗಿದೆ.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಇಓ ಶ್ರೀನಿವಾಸ್ ಅವರು, ತಾಲೂಕಿನಲ್ಲಿ ಇರುವ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿರುವ ಯುವ ಮತದಾರರಿಂದ ನಾನು ಮತ ಹಾಕುತ್ತೇನೆ ಎಂದು ಆಟೋಗ್ರಾಫ್​ ತೆಗೆದುಕೊಳ್ಳುವ ಅಭಿಯಾನ ಶುರು ಮಾಡುತ್ತೇವೆ. ಪ್ರತಿಯೊಬ್ಬರು ಮತದಾನ ಮಾಡಬೇಕು. ಈ ಕಾರಣದಿಂದ ವಿಕಲಚೇತನರು ಮತ್ತು ವೃದ್ಧರಿಗೆ ಚುನಾವಣಾ ಆಯೋಗದ ಸೂಚನೆ ಮೇರೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡುತ್ತಿದ್ದ ವೃದ್ಧರು ಮತ್ತು ವಿಕಲಚೇತನರಿಗೆ ಈ ಚುನಾವಣೆಯ ವೇಳೆ ಮನೆಯಲ್ಲಿ ಕುಳಿತು ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ತಾಲೂಕಿನಲ್ಲಿರುವ ಐದು ಗಿರಿಜನ ಕಾಲೋನಿಗಳ ಮತದಾರರಿಗೆ ವಿಶೇಷ ಸೌಲಭ್ಯವನ್ನು ನೀಡಲಾಗಿದ್ದು, ಗಿರಿಜನರು ವಾಸ ಮಾಡುವ ಸ್ಥಳದಲ್ಲಿ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಸಹ ಇವರಿಗೂ ಕಲ್ಪಿಸಲಾಗಿದೆ ಎಂದು ಹೇಳಿದರು.

ಮತದಾನದ ಸಂದರ್ಭದಲ್ಲಿ ಮತದಾರರಿಗೆ ಯಾವುದೇ ಕುಂದು ಕೊರತೆಗಳು ಆಗದ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಚುನಾವಣೆ ಆಯೋಗದ ಎಲ್ಲಾ ರೀತಿ ಸಿದ್ಧತೆ ಮಾಡಲಾಗಿದೆ. ಈ ಚುನಾವಣೆಯನ್ನು ಒಂದು ಹಬ್ಬದಂತೆ ಎಲ್ಲಾರು ಸೇರಿ ತಾಲೂಕಿನಲ್ಲಿಆಚರಿಸಬೇಕು. ಮತವನನ್ನು ನಾವು ದಾನ ನೀಡುತ್ತಿದ್ದೇವೆ ಎಂದು ಭಾವಿಸಿ ಯಾವುದೇ ಆಸೆ ಆಮಿಷೆಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದು ಇಓ ಶ್ರೀನಿವಾಸ್​ ಅವರು ಹೇಳಿದರು. ಈ ಜಾಥದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಉಪ ತಹಶೀಲ್ದಾರ್ ಭೈರಯ್ಯ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ :ಅನುಕಂಪದ ಅಲೆಯಲ್ಲಿ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರ.. ಬಿಜೆಪಿ-ಜೆಡಿಎಸ್​ ನಡೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.