ETV Bharat / state

ದೇವರಾಜ ಮಾರುಕಟ್ಟೆಯ ಪ್ರತಿ ಅಂಗಡಿಗೆ ಸಿಸಿಟಿವಿ ಕಡ್ಡಾಯ: ಕಾರಣ?

author img

By

Published : May 22, 2019, 1:02 PM IST

ನಗರದಲ್ಲಿರುವ ದೇವರಾಜ ಮಾರುಕಟ್ಟೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ನಗರ ಭದ್ರತಾ ತಂಡದ ಪೊಲೀಸ್​ ಮುಖ್ಯಸ್ಥರ ಜೊತೆ ಸೇರಿ ಭೇಟಿ ನೀಡಿ ವರ್ತಕರ ಜೊತೆ ಚರ್ಚೆ ನಡೆಸಿದ್ದು, ಸಿಸಿಟಿವಿ ಕ್ಯಾಮರಾ ಅಳವಡಿಕೆ ಕುರಿತು ಚರ್ಚಿಸಿದ್ದಾರೆ.

devraj market

ಮೈಸೂರು: ಶ್ರೀಲಂಕಾ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದೇವರಾಜ ಮಾರುಕಟ್ಟೆಗೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ವ್ಯಾಪಾರಸ್ಥರ ಜೊತೆ ಸಭೆ ನಡೆಸಿದ್ದಾರೆ.

ನಗರದಲ್ಲಿರುವ ದೇವರಾಜ ಮಾರುಕಟ್ಟೆ ಜನನಿಬಿಡ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಸೂಕ್ತ ಭದ್ರತೆ ಇಲ್ಲ ಎಂದು ಗುಪ್ತಚರ ಇಲಾಖೆ ವರದಿ ನೀಡಿತ್ತು. ಅಲ್ಲದೇ ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಅಧಿಕಾರಿಗಳು, ನಗರ ಭದ್ರತಾ ತಂಡದ ಪೊಲೀಸ್​ ಮುಖ್ಯಸ್ಥರ ಜೊತೆ ಸೇರಿ ಮಾರುಕಟ್ಟೆಗೆ ಭೇಟಿ ನೀಡಿ ವರ್ತಕರ ಜೊತೆ ಚರ್ಚೆ ನಡೆಸಿದ್ದಾರೆ.

ಪ್ರತಿ ಅಂಗಡಿಯ ಮಾಲೀಕರು ಅಂಗಡಿಯ ಒಳಗೆ ಹಾಗೂ ಹೊರಗೆ ಸಿಸಿಟಿವಿ ಅಳವಡಿಸಬೇಕು ಎಂದು ತಿಳಿಸಿದ್ದು, ಈ ಬಗ್ಗೆ ದೇವರಾಜ ಮಾರುಕಟ್ಟೆ ಸಮಿತಿಯ ಪದಾಧಿಕಾರಿಗಳು ಸಭೆ ಸೇರಿ ತಿರ್ಮಾನ ಕೈಗೊಳ್ಳುವ ಬಗ್ಗೆ ಚರ್ಚಿಸಲಿದ್ದಾರೆ.

ಭದ್ರತೆಯೇ ಇಲ್ಲ:
ದೇವರಾಜ ಮಾರುಕಟ್ಟೆಯಲ್ಲಿ ಅಂದಾಜು 2000 ಅಂಗಡಿಗಳಿದ್ದು, ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿಯ ಭದ್ರತೆಗೆ ಇಬ್ಬರು ಸೆಕ್ಯುರಿಟಿ ಗಾರ್ಡ್​ನೇಮಿಸಲಾಗಿದೆ. ಇಲ್ಲಿ ಯಾವುದೇ ರೀತಿಯಾದ ಸುರಕ್ಷತೆ ಇಲ್ಲ. ಈ ಮಾರುಕಟ್ಟೆಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಗುಪ್ತಚರ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆ ನಡೆಸಿದ್ದಾರೆ.

Intro:ಮೈಸೂರು: ಶ್ರೀಲಂಕಾ ಬಾಂಬ್ ಸ್ಫೋಟದ ಹಿನ್ನಲೆಯಲ್ಲಿ ನೆನ್ನೆ ದೇವರಾಜ ಮಾರುಕಟ್ಟೆಗೆ ಅಧಿಕಾರಿಗಳು ಹಾಗೂ ಭದ್ರತೆ ಸಿಬ್ಬಂದಿಗಳು ಭದ್ರತೆ ಪರಿಶೀಲನೆ ನಡೆಸಿ ವ್ಯಾಪಾರಸ್ಥರ ಜೊತೆ ಸಭೆ ನಡೆಸಿದರು.
Body:

ಮೈಸೂರಿನ ಅತ್ಯಂತ ಜನನಿಬಿಡ ಪ್ರದೇಶವಾದ ದೇವರಾಜ ಮಾರುಕಟ್ಟೆಯಲ್ಲಿ ಪ್ರತಿದಿನವೂ ದಿನದ ೨೪ ಗಂಟೆಯು ಜನ ಇರುವ ಪ್ರದೇಶವಾಗಿದ್ದು ಈ ಪ್ರದೇಶದಲ್ಲಿ ಸೂಕ್ತ ಭದ್ರತೆ ಇಲ್ಲ ಎಂದು ಗುಪ್ತಚರ ಇಲಾಖೆ ನೀಡಿದ ವರಿದಿ ಹಿನ್ನಲೆಯಲ್ಲಿ ಹಾಗೂ ಶ್ರೀಲಂಕಾದಲ್ಲಿ ನಡದೆ ಬಾಂಬ್ ಸ್ಫೋಟದ ಹಿನ್ನಲೆಯಲ್ಲಿ ನೆನ್ನೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನಗರದ ಭದ್ರತಾ ತಂಡದ ಪೋಲಿಸ್ ಮುಖ್ಯಸ್ಥರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಎಲ್ಲಾ ವರ್ತಕರ ಜೊತೆ ಚರ್ಚೆ ಮಾಡಿ ಪ್ರತಿಯೊಂದು ಅಂಗಡಿಯ ಮಾಲೀಕ ಅಂಗಡಿಯ ಒಳಗೆ ಹಾಗೂ ಹೊರಗೆ ಸಿಸಿಟಿವಿ ಅಳವಡಿಸಬೇಕು ಎಂದು ತಿಳಿಸಿದ್ದು ಈ ಬಗ್ಗೆ ದೇವರಾಜ ಮಾರುಕಟ್ಟೆ ಸಮಿತಿಯ ಪದಾಧಿಕಾರಿಗಳು ಇದೇ ಶನಿವಾರ ಸಭೆ ಸೇರಿ ತಿರ್ಮಾನ ಕೈಗೊಳ್ಳುವ ಬಗ್ಗೆ ಚರ್ಚಿಸಲಿದ್ದಾರೆ.

ಭದ್ರತೆಯೇ ಇಲ್ಲ:- ದೇವರಾಜ ಮಾರುಕಟ್ಟೆಯಲ್ಲಿ ಅಂದಾಜು ೨೦೦೦ ಅಂಗಡಿಗಳಿದ್ದು ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ.
ಆದರೆ ಇಲ್ಲಿಯ ಭದ್ರತೆಯನ್ನು ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳು ನೋಡಿಕೊಳ್ಳುತ್ತಾರೆ. ಯಾವ ವ್ಯಕ್ತಿ ಯಾವಾಗ ಬೇಕಾದರೂ ಬಂದು ಏನನ್ನಾದರೂ ಬೇಕಾದರೂ ಇಟ್ಟು ಹೋಗುವಷ್ಟು ಸಲೀಸಾಗಿ ಇರುವ ಈ ಮಾರುಕಟ್ಟೆಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಗುಪ್ತಚರ ಇಲಾಖೆ ಎಚ್ಚರಿಸಿದ್ದು ಈ ಹಿನ್ನಲೆಯಲ್ಲಿ ನೆನ್ನೆಯ ಸಭೆ ವಿಶೇಷತೆ ಪಡೆದಿದೆ.Conclusion:null

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.