ETV Bharat / state

ಬಿಜೆಪಿ, ಆರ್​ಎಸ್ಎಸ್, ಹಿಂದೂ ಮಹಾಸಭಾದಿಂದ ದೇಶಕ್ಕೆ ಮೂರು ಕಾಸಿನ ತ್ಯಾಗವಿಲ್ಲ: ಸಿದ್ದರಾಮಯ್ಯ

author img

By

Published : Feb 3, 2020, 9:01 AM IST

ಆರ್​ಎಸ್ಎಸ್, ಬಿಜೆಪಿ ಹಾಗೂ ಹಿಂದುಮಹಾಸಭಾದಿಂದ ದೇಶಕ್ಕೆ ಮೂರು ಕಾಸಿನ ತ್ಯಾಗವಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು‌.

NRC, CAA, NPR National seminar
ಎನ್ ಆರ್ ಸಿ, ಸಿಎಎ, ಎನ್​ಪಿಆರ್ ರಾಷ್ಟ್ರೀಯ ವಿಚಾರ ಸಂಕಿರಣ

ಮೈಸೂರು: ಆರ್​ಎಸ್ಎಸ್, ಬಿಜೆಪಿ ಹಾಗೂ ಹಿಂದುಮಹಾಸಭಾದಿಂದ ದೇಶಕ್ಕೆ ಮೂರು ಕಾಸಿನ ತ್ಯಾಗವಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು‌.

ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ನಿಂದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಎನ್ ಪಿಆರ್, ಸಿಎಎ, ಎನ್ ಆರ್ ಸಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರ್​ಎಸ್ಎಸ್ ಮುಖಂಡ ಸಂತೋಷ್ ಅವರು, ಮೈಸೂರಿನಲ್ಲಿ ನಡೆದ ಸಿಎಎ ಜಾಗೃತಿ ಸಮಾವೇಶದಲ್ಲಿ ಪ್ರಚೋದನಕಾರಿ ಹಾಗೂ ತಪ್ಪು ಮಾಹಿತಿಗಳನ್ನು ನೀಡಿದ್ದಾರೆ. ಅದಕ್ಕಾಗಿ ನಮ್ಮ ಕಾರ್ಯಕರ್ತರಿಗೆ ವಾಸ್ತವತೆ ತಿಳಿಸಿ, ಗೊಂದಲಗಳಿಗೆ ಒಳಗಾಗದಂತೆ ಜಾಗೃತಿ‌ ಮೂಡಿಸಿ ಜನರ ಬಳಿ ತೆರಳುವಂತೆ ಸೂಚನೆ ನೀಡಲಾಗಿದೆ ಎಂದರು.

ಪ್ರಧಾನಿ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಶಾ ಅವರು ಪೌರತ್ವ ಕಾಯಿದೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ನಾವು ಆರ್​ಎಸ್ಎಸ್ ವಿರೋಧಿಗಳಲ್ಲ. ಆದರೆ, ಅವರು ಸಾಮಾಜಿಕ ಬೇರನ್ನು ಅಲುಗಾಡಿಸುತ್ತಿದ್ದಾರೆ. ಅದಕ್ಕೆ, ಅವರ ಕ್ರಮಗಳನ್ನು ವಿರೋಧ ಮಾಡುತ್ತಿದ್ದೇವೆ. ದೇಶ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಆದರೆ, ದೇಶವನ್ನು ಜಾತಿ-ಧರ್ಮದ ಆಧಾರದ ಮೇಲೆ ಒಡೆಯಲು ಯತ್ನಿಸಿದ್ದಾರೆ ಎಂದು ಕಿಡಿಕಾರಿದರು.

ಗಾಂಧೀಜಿ ಕೊಂದವರನ್ನ ದೇವರು ಅಂತ ಪೂಜೆ ಮಾಡ್ತಾರೆ. ಅಂತವರಿಗೆ ದೇಶದ ಕಾನೂನಿನ ಮೇಲೆ ಗೌರವವಿಲ್ಲ. ‌ಮಾನವೀಯತೆ ಇಲ್ಲದ ಕ್ರೂರತ್ವದ ಸರ್ಕಾರ ಬಿಜೆಪಿಯವರದು. ನಿರುದ್ಯೋಗ, ಕೃಷಿ, ಬೆಲೆ ಏರಿಕೆ ಇದರ ಬಗ್ಗೆ ಮಾತನಾಡದೇ ದೇಶದ ಜನರನ್ನ ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ. ಮುಸ್ಲಿಮರನ್ನು ಪ್ರಚೋದಿಸುವ ಮೂಲಕ ದೇಶ ಒಡೆಯೋ ಹುನ್ನಾರ ಆರ್​ಎಸ್ಎಸ್​ ನವರದ್ದು ಎಂದು ಟೀಕಿಸಿದರು.

ಮೂಲ‌ ಸಂವಿಧಾನ ಬದಲಾವಣೆ ಮಾಡಲು ಯಾವ ಸಂಸತ್ತಿಗೂ ಅವಕಾಶವಿಲ್ಲ. ಎನ್ಆರ್​ಸಿ, ಎನ್​ಪಿಆರ್, ಸಿಎಎ ಜಾರಿ ಮಾಡಿ ಅಂತ ಮೋದಿ ಅವರಿಗೆ ಜನರೇನಾದ್ರೂ ಕೇಳಿಕೊಂಡಿದ್ರಾ ಎಂದು ಪ್ರಶ್ನಿಸಿದರು. ಯಾವುದೇ ಧರ್ಮ ಹಾಗೂ ಜಾತಿ ಆಧಾರದ ಮೇಲೆ ಸಂವಿಧಾನ ರಚನೆಯಾಗಿಲ್ಲ. ಜಾತ್ಯತೀತ ಒಕ್ಕೂಟದ ಆಧಾರದ ಮೇಲೆ ಸಂವಿಧಾನ ರಚನೆಯಾಗಿದೆ‌. ಸಂವಿಧಾನದ ನೇರ ಬದಲಾವಣೆ ಅಸಾಧ್ಯ. ಅದಕ್ಕಾಗಿ ಎನ್​ಸಿಆರ್, ಸಿಎಎ, ಎನ್ ಪಿಆರ್ ಜಾರಿ ಮೂಲಕ ಸಂವಿಧಾನ ಬದಲಾವಣೆ ಮಾಡಲು ಯತ್ನಿಸುತ್ತಿದ್ದೆ‌. ಆದರೆ, ಇದ್ಯಾವುದು ಸಾಧ್ಯವಿಲ್ಲ ಎಂದು ನಾನು ಸವಾಲು ಬೇಕಾದರೂ ಹಾಕುತ್ತೇನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸುಪ್ರೀಂಕೋರ್ಟ್ ನ ನಿವೃತ್ತಿ ನ್ಯಾಯಾಧೀಶ ಗೋಪಾಲಗೌಡ ಅವರು ಉದ್ಘಾಟನಾ ಭಾಷಣ ಮಾಡಿದರು. ನಂತರ ರಾಜ್ಯದ ನಿವೃತ್ತ ಅಡ್ವೋಕೆಟ್ ಜನರಲ್ ರವಿವರ್ಮಾಕುಮಾರ್ ಅವರು ಭಾಷಣ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.