ETV Bharat / state

ಅತ್ಯಾಚಾರ ಆರೋಪ ಪ್ರಕರಣ, ಪ್ರಾಧ್ಯಾಪಕರಿಬ್ಬರಿಗೂ ನೋಟಿಸ್ ನೀಡಲು ಚಿಂತನೆ : ಕುಲಸಚಿವ ಆರ್. ಶಿವಪ್ಪ - ಮೈಸೂರು ವಿಶ್ವವಿದ್ಯಾಲಯ ಅತ್ಯಾಚಾರ ಪ್ರಕರಣ

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ‌ ಮೇಲೆ‌ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆ ಪ್ರೊ.ರಾಮಚಂದ್ರ ಹಾಗೂ ಪ್ರೊ‌.ಲೋಲಾಕ್ಷಿ ಅವರಿಗೆ ಪ್ರಕರಣ ಸಂಬಂಧ ಕಾರಣ ಕೇಳಿ ನೋಟಿಸ್​ ನೀಡಲಾಗುವುದು..

notice-to-mysore-university-lecturer-regarding-rape-case
ಶಿವಪ್ಪ
author img

By

Published : Aug 6, 2021, 3:42 PM IST

ಮೈಸೂರು : ಇಬ್ಬರ ವೈಯಕ್ತಿಕ ವಿಚಾರದಿಂದ ವಿಶ್ವವಿದ್ಯಾನಿಲಯದ ಹೆಸರು ಕೆಡುತ್ತಿದೆ. ಆದ್ದರಿಂದ ಪ್ರಾಧ್ಯಾಪಕರಿಬ್ಬರಿಗೂ ನೋಟಿಸ್ ನೀಡಲು ಚಿಂತನೆ ಮಾಡಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಆರ್.ಶಿವಪ್ಪ ಹೇಳಿದರು.

ಅತ್ಯಾಚಾರ ಆರೋಪ ಪ್ರಕರಣ ಕುರಿತು ಕುಲಸಚಿವ ಆರ್​. ಶಿವಪ್ಪ ಪ್ರತಿಕ್ರಿಯೆ

ಕ್ರಾಫರ್ಡ್ ಭವನದ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರೊ.ರಾಮಚಂದ್ರ ಹಾಗೂ ಪ್ರೊ‌.ಲೋಲಾಕ್ಷಿ ಇವರಿಬ್ಬರ ಪ್ರಕರಣ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮುಜುಗರ ತಂದಿದೆ. ಈ ಸಂಬಂಧ ಕಾರಣ ಕೇಳಿ ಇಬ್ಬರಿಗೂ ನೋಟಿಸ್ ನೀಡಲಾಗುವುದು, ಇದರ ಬಗ್ಗೆ ಕುಲಪತಿ ಅವರೊಂದಿಗೆ ಚರ್ಚೆ ಮಾಡುತ್ತೀವಿ ಎಂದು ತಿಳಿಸಿದರು.

ಲೋಲಾಕ್ಷಿ ಅವರಿಗೆ ಮೈಸೂರು ವಿವಿಗೆ ಪತ್ರ ಕೊಟ್ಟು ಮುಂದುವರೆಯಲು ತಿಳಿಸಿದ್ದೆವು. ಆದರೆ, ಈವರೆಗೆ ಯಾವುದೇ ಪತ್ರ ಬಂದಿಲ್ಲ. ಆದರೆ, ಮಾಧ್ಯಮಗಳಲ್ಲಿ ವಿವಿ ಹೆಸರು ನೋಡಿ ಬೇಸರವಾಗುತ್ತಿದೆ. ಮುಂದಿನ ತಿಂಗಳು ನ್ಯಾಕ್ ಕಮಿಟಿ ವಿವಿಗೆ ಭೇಟಿ ಕೊಡುತ್ತಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.