ETV Bharat / state

ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ: ತನ್ವೀರ್ ಸೇಠ್​​​ - Karnataka political development

ಇತಿಹಾಸವನ್ನು ತಿರುಚುವಂತಹ ಕೆಲಸಕ್ಕೆ ಯಾರೂ ಕೈ ಹಾಕಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

no-one-can-distort-history
author img

By

Published : Oct 31, 2019, 7:53 PM IST

ಮೈಸೂರು: ಇತಿಹಾಸ ತಿರುಚುವಂತಹ ಕೆಲಸವನ್ನು ಯಾರು ಮಾಡಲು ಆಗುವುದಿಲ್ಲ. ಆ ಕೆಲಸಕ್ಕೆ ಯಾರೂ ಕೈ ಹಾಕಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಪಠ್ಯದಲ್ಲಿ ಟಿಪ್ಪು ಪಾಠ ತೆಗೆಯುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸರ್ಕಾರ ಬರಲಿ ಹೋರಾಟಗಾರರ ಇತಿಹಾಸ ತಿರುಚಬಾರದು. ಟಿಪ್ಪು ಜಯಂತಿ ವಿಚಾರ ಜನರನ್ನು ದಾರಿ ತಪ್ಪಿಸುವಂತಹದು. ಇದು ಹೆಚ್ಚಿನ ದಿನ ನಿಲ್ಲುವುದಿಲ್ಲ ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್

ಒಂದು ಕಡೆ ಜಮ್ಮು ವಿಚಾರ, ಮತ್ತೊಂದು ಕಡೆ ಇನ್ನೊಂದು ಮಾತನಾಡ್ತಾರೆ. ಇದು ಜನರನ್ನು ದಾರಿ ತಪ್ಪಿಸುವ ಆಡಳಿತ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Intro:ಮೈಸೂರು: ಟಿಪ್ಪು ವಿಚಾರ ಜನರನ್ನು ದಾರಿ ತಪ್ಪಿಸುವಂತಹ ಕೆಲಸ‌. ಇದು ಹೆಚ್ಚಿನ ದಿನ ನಿಲ್ಲುವುದಿಲ್ಲ ಇತಿಹಾಸವನ್ನು ತಿರುಚುವಂತಹ ಕೆಲಸವನ್ನು ಯಾರು ಮಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.Body:

ಪಠ್ಯದಲ್ಲಿ ಟಿಪ್ಪು ಪಾಠವನ್ನು ತೆಗೆಯುವ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ತನ್ವೀರ್ ಸೇಠ್ ಇತಿಹಾಸವನ್ನು ತಿರಿಚುವಂತಹ ಕೆಲಸವನ್ನು ಯಾರು ಮಾಡಲು ಆಗುವುದಿಲ್ಲ.
ನಮ್ಮ‌ ಸರ್ಕಾರ ಬರಲಿ ಅಥವಾ ಬೇರೆ ಸರ್ಕಾರ ಬರಲಿ, ಕೆಲವು ಪ್ರಶ್ನೆ ಮಾಡುವುದಕ್ಕೆ, ದ್ವಂಸ ಮಾಡುವಂತಹ, ಲೂಟಿ ಮಾಡುವಂತಹದಲ್ಲಿ ಯಾರ ಕೈವಾಡ ಇರುವಂತಹದನ್ನು ತಿಳಿಸಲಿ, ಇತಿಹಾಸವನ್ನು ಅವರೆ ತಿಳಿಸಲಿ,
ಎನಾಗುತ್ತೆ ಎಂದರೆ ಅಲ್ಪ ಸಂಖ್ಯಾತನಾದ ನಾನು ಇದಕ್ಕೆ ಉತ್ತರ ಕೊಡಬೇಕು ಎನ್ನುವುದಲ್ಲಾ, ಒಟ್ಟಾರೆ ನಾನು ಹೇಳುವಂತಹದ್ದು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಯಾರು ಯಾರು ಪ್ರಯತ್ನ ಮಾಡಿದ್ದಾರೆ ಅವರಿಗೆಲ್ಲಾ ನಾನು ನಮನ ಸಲ್ಲಿಸುತ್ತೇನೆ.
ಅವರ ಆ ಪ್ರಯತ್ನ ನಮಗೆ ನೆಮ್ಮದಿ ತಂದು ಕೊಟ್ಟಿದೆ. ಪ್ರತ್ಯೇಕವಾದ ನಮ್ಮ‌ ರಾಷ್ಟ್ರ ವಿಶ್ವಮಟ್ಟದಲ್ಲಿ‌ ಬೆಳೆಯುವುದಕ್ಕೆ ಅವಕಾಶವಾಗಿದೆ. ಇವತ್ತು ನಾನಾ ಜಾತಿ ನಾನಾ ಧರ್ಮ, ವಿವಿಧವಾದ ಆಕಾರಗಳಲ್ಲಿ ದೇವರನ್ನು ಪೂಜಿಸುವ ಸಂಸ್ಕೃತಿ ಹಾಗೂ ನಾನಾ ಭಾಷೆಗಳಿದ್ದರು ಒಟ್ಟಿಗೆ ಇದ್ದು, ದೇಶದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಬೇಕು.
ಒಂದು ಕಡೆ ಜಮ್ಮು ವಿಚಾರ, ಇನ್ನೊಂದು ಕಡೆ ಇನ್ನೊಂದು ಮಾತನಾಡುತ್ತಾರೆ. ಇದು ಜನರನ್ನು ದಾರಿ ತಪ್ಪಿಸುವ ಆಡಳಿತ ಏನಿದೆ ಇದು ಹೆಚ್ಚಿನ ದಿನ ನಿಲ್ಲದೆ ಇರುವಂತಹದ್ದು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.