ಮೈಸೂರು: ಇದೇ ಜುಲೈ 19 ರಿಂದ ಮೈಸೂರಿನಿಂದ ದೇಶದ ಇತರ ಮೂರು ನಗರಗಳಿಗೆ ವಿಮಾನ ಹಾರಾಟ ಮರು ಆರಂಭವಾಗಲಿದೆ.
ದೇಶದ ಹಲವಾರು ನಗರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಯೋಜನೆಯಾದ ಉಡಾನ್-3ಯ ಭಾಗವಾಗಿ ಈಗಾಗಲೇ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈ ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರ ಮುಂದುವರೆದ ಭಾಗವಾಗಿ ಇದೇ ತಿಂಗಳ ಜುಲೈ 19 ರಿಂದ ಮೈಸೂರಿನಿಂದ ಕೊಚ್ಚಿ ಗೋವಾ ಹಾಗೂ ಹೈದರಾಬಾದ್‌ಗೆ ವಿಮಾನ ಸೇವೆ ಆರಂಭವಾಗಲಿದೆ.
ವಿಮಾನ ವೇಳಾ ಪಟ್ಟಿ ವಿವರ:
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ 8:15 ಕ್ಕೆ ಕೊಚ್ಚಿಗೆ ಹೊರಡುವ ವಿಮಾನ 9:45ಕ್ಕೆ ಕೊಚ್ಚಿ ತಲುಪಲಿದೆ. ಅದೇ ರೀತಿ ಕೊಚ್ಚಿಯಿಂದ 10:10 ಕ್ಕೆ ಹೊರಡುವ ವಿಮಾನ 11:40 ಕ್ಕೆ ಮೈಸೂರು ವಿಮಾನ ನಿಲ್ದಾಣವನ್ನು ತಲುಪಲಿದೆ.ಮೈಸೂರಿನಿಂದ 3:29 ಕ್ಕೆ ಹೊರಡುವ ವಿಮಾನ 4:50 ಕ್ಕೆ ಗೋವಾ ತಲುಪಲಿದೆ. ಗೋವಾದಿಂದ 5:20 ಕ್ಕೆ ಹೊರಡುವ ವಿಮಾನ 6:50ಕ್ಕೆ ಮೈಸೂರು ತಲುಪಲಿದೆ.ಇನ್ನೂ ಮೈಸೂರಿನಿಂದ ರಾತ್ರಿ 7:20 ಕ್ಕೆ ಹೊರಡುವ ವಿಮಾನ 9:05 ಕ್ಕೆ ಹೈದರಾಬಾದ್ ತಲುಪಲಿದೆ.ಅದೇ ರೀತಿ ಮರುದಿನ 6:05 ಕ್ಕೆ ಹೈದರಾಬಾದ್ ನಿಂದ ಹೊರಡುವ ವಿಮಾನ 7:50ಕ್ಕೆ ಮೈಸೂರಿಗೆ ವಾಪಾಸ್ಸಾಗಲಿದೆ.
ಈ ಮೂರು ವಿಮಾನಗಳು ಕೇರಳ, ಗೋವಾ, ಆಂಧ್ರ ಹಾಗೂ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸಲಿದ್ದು, ಈ ವಿಮಾನಯಾನ ಆರಂಭದಿಂದ ಬೆಂಗಳೂರು ಮೈಸೂರು ನಡುವೆ ಸಂಚರಿಸುವ ವಿಮಾನಯಾನದ ವೇಳೆ ಕೂಡ ಬದಲಾಗಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ , ಅಲಯನ್ಸ್ ಇಯರ್ ಸಂಸ್ಥೆಯ ವಿಮಾನಗಳು ಸಂಚರಿಸಲಿವೆ.