ETV Bharat / state

ವಿಶೇಷ: ಹುಲಿಗಳ ಸಂತತಿಗೆ ನೆಚ್ಚಿನ ತಾಣ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ

ದೇಶದಲ್ಲೇ ಹುಲಿ ಸಂತತಿಯ ಪ್ರಮುಖ ತಾಣ ಎಂದರೆ ಅದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ. ಇಲ್ಲಿ ಅತಿ ಹೆಚ್ಚು ಹುಲಿಗಳು ಕಂಡುಬರುತ್ತವೆ. ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯಾದ ಇಂದು ಈ ಬಗ್ಗೆ ಒಂದಿಷ್ಟು ಸಂಗತಿಗಳ ಬಗ್ಗೆ ತಿಳಿಯೋಣ.

Nagarahole Tiger Protected Area in Mysuru
ಹುಲಿಗಳ ಸಂತತಿಗೆ ನೆಚ್ಚಿನ ತಾಣ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ
author img

By

Published : Jul 29, 2020, 3:30 PM IST

ಮೈಸೂರು: ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವುದು ಮೈಸೂರು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ. 2018-19ರ ಹುಲಿ ಗಣತಿಯ ಪ್ರಕಾರ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ 2ನೇ ರಾಜ್ಯವಾಗಿದೆ.

Nagarahole Tiger Protected Area in Mysuru
ಹುಲಿಗಳ ಸಂತತಿಗೆ ನೆಚ್ಚಿನ ತಾಣ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ

ರಾಜ್ಯದಲ್ಲಿ ಒಟ್ಟು 524 ಹುಲಿಗಳಿದ್ದು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 127 ಹುಲಿಗಳಿವೆ. ಬಂಡೀಪುರದಲ್ಲಿ 160 ಹುಲಿಗಳಿವೆ. ಅಂದರೆ ದೇಶದ ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹುಲಿಗಳು ಬಂಡೀಪುರ, ನಾಗರಹೊಳೆ ಪ್ರದೇಶದಲ್ಲಿವೆ. ಇದಕ್ಕೆ ಪ್ರಮುಖ ಕಾರಣ ಬಂಡೀಪುರ, ನಾಗರಹೊಳೆ ಹುಲಿಗಳ ವಾಸಸ್ಥಾನಕ್ಕೆ ಹಾಗೂ ಸಂತಾನಾಭಿವೃದ್ಧಿಗೆ ಸೂಕ್ತ ಪ್ರದೇಶವಾಗಿರುವುದು. ಹಾಗೆಯೇ ಇಲ್ಲಿ ಹುಲಿಗಳ ಸಂರಕ್ಷಣೆಗಾಗಿ ಅತಿ ಹೆಚ್ಚು ಕ್ರಮಗಳನ್ನು ಕೈಗೊಂಡಿದ್ದು ಸಂತತಿ ಹೆಚ್ಚಲು ಕಾರಣವಾಗಿದೆ.

ನಾಗರಹೊಳೆಯಲ್ಲಿ 200 ಚದರ ಕಿಲೋಮೀಟರ್ ಬಫರ್ ವಲಯ ಸೇರಿ ಒಟ್ಟು 843 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಹುಲಿ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. 2020 ರ ಏಪ್ರಿಲ್‌ನಲ್ಲಿ ಕ್ಯಾಮರಾ ಟ್ರ್ಯಾಪ್ ಮೂಲಕ ಹುಲಿ ಗಣತಿ ನಡೆಸಲಾಗಿದ್ದು, ಈ ಬಾರಿ ಎಷ್ಟು ಹುಲಿಗಲಿವೆ? ಎಂಬುದು 2 ತಿಂಗಳಿನಲ್ಲಿ ತಿಳಿಯಲಿದೆ. ಜೊತೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ವಾಸಿಸಲು ಕಾರಣ, ಇವುಗಳಿಗೆ ಪ್ರಮುಖ ಆಹಾರವಾದ ಜಿಂಕೆ ಮತ್ತು ಕಡವೆಗಳು ಹೆಚ್ಚು ಇರುವುದು. ಜೊತೆಗೆ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹುಲಿಗಳನ್ನು ಕೊಲ್ಲದ ರೀತಿಯಲ್ಲಿ 54 ಹುಲಿ ಭೇಟೆ ನಿಗ್ರಹ ಶಿಬಿರಗಳಿದ್ದು, ಪ್ರತಿ ಶಿಬಿರಕ್ಕೆ 4 ಜನ ಸಿಬ್ಬಂದಿಗಳನ್ನು ನೇಮಿಸಲಾಗದೆ ಎಂದು ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ವಿವರಿಸುತ್ತಾರೆ.

ವರ್ಷ ವರ್ಷಕ್ಕೆ ಹುಲಿ ಸಂತತಿ ಹೆಚ್ಚಳ:

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರತಿವರ್ಷ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 2006ರಲ್ಲಿ ಈ ಪ್ರದೇಶದಲ್ಲಿ ಕೇವಲ 44 ಹುಲಿಗಳಿದ್ದವು. 2010 ರಲ್ಲಿ 45, 2014ರಲ್ಲಿ 72, 2017ರಲ್ಲಿ 110 ಹಾಗೂ 2019ರಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 127 ಹುಲಿಗಳಿವೆ. 2019ರ ಗಣತಿ ಪ್ರಕಾರ, 526 ಹುಲಿಗಳನ್ನು ಹೊಂದಿರುವ ಮೂಲಕ ಮಧ್ಯಪ್ರದೇಶ ಮೊದಲ‌ ಸ್ಥಾನದಲ್ಲಿದ್ದರೆ, 447 ಹುಲಿಗಳನ್ನು ಹೊಂದುವ ಮೂಲಕ ಉತ್ತರಾಖಂಡ ಮೂರನೇ ಸ್ಥಾನ ಪಡೆದಿದೆ.

ಸಫಾರಿಯಲ್ಲಿ ಅತಿ ಹೆಚ್ಚು ಹುಲಿಗಳ ದರ್ಶನ

ದೇಶದಲ್ಲೇ ಪ್ರಮುಖ ಸಫಾರಿ ತಾಣಗಳಾದ ನಾಗರಹೊಳೆ ಹಾಗೂ ಬಂಡೀಪುರ ಸಫಾರಿಗೆ ಬರುವ ಜನರಿಗೆ ಅತಿ ಹೆಚ್ಚು ಹುಲಿಗಳ ದರ್ಶನವಾಗುತ್ತದೆ. ಇಲ್ಲಿ ಹುಲಿ ತನ್ನ ಮರಿಗಳೊಂದಿಗೆ ಓಡಾಡುತ್ತಿರುವುದು, ನೀರು ಕುಡಿಯುವುದು ಸೇರಿದಂತೆ ಹೆಣ್ಣು ಮತ್ತು ಗಂಡು ಹುಲಿಗಳ ಜೊತೆಜೊತೆಯಾಗಿ ಓಡಾಟ ನೋಡಲು ಸಿಗುವುದರಿಂದ ಹೆಚ್ಚು ಮಂದಿ ಸಫಾರಿ ಮಾಡಲು ಇಲ್ಲಿಗೆ ಬರುತ್ತಾರೆ. ಜೊತೆಗೆ ದೇಶ-ವಿದೇಶದ ವೈಲ್ಡ್ ಲೈಫ್ ಫೋಟೋಗ್ರಾಫರ್ ವಾರಗಟ್ಟಲೆ ಇಲ್ಲಿಯೇ ಇದ್ದು, ಫೋಟೋ ತೆಗೆಯುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.