ಮೈಸೂರು: ಈ ಬಾರಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸರ್ಕಾರ ಹಾಗೂ ವಿವಿಧ ಮೂಲಗಳಿಂದ 31 ಕೋಟಿ 08 ಲಕ್ಷದ 88 ಸಾವಿರದ 819 ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡಹಬ್ಬ ದಸರಾಗೆ ಈ ಬಾರಿ 31,08,88,819 ಕೋಟಿ ರೂ. ಸಂಗ್ರಹಿಸಲಾಗಿದೆ. ಅದರಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ದಸರಾಗಳಿಗೆ ಒಟ್ಟು 28 ಕೋಟಿ 74 ಲಕ್ಷದ 49 ಸಾವಿರದ 058 ರೂಪಾಯಿಗಳನ್ನು (28,74,49,058 ಕೋಟಿ) ವ್ಯಯಿಸಿದ್ದು, 1.26 ಕೋಟಿ ರೂಪಾಯಿ ಖರ್ಚಾಗದೇ ಉಳಿದಿದೆ ಎಂದು ಮಾಹಿತಿ ನೀಡಿದರು.
ಸಂಗ್ರಹ ಹಣದ ಮೂಲ: ಅಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ - 10 ಕೋಟಿ ರೂ., ಕಾರ್ಯದರ್ಶಿಗಳು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಿಂದ- 5.5ಕೋಟಿ, ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು-9.5ಕೋಟಿ, ಪ್ರಾಯೋಜಕತ್ವದಿಂದ ದಸರಾ ವಿಶೇಷಾಧಿಕಾರಿಗಳ ಉಳಿತಾಯ, ಖಾತೆಗೆ ಸ್ವೀಕೃತವಾದ ಮೊಬಲಗು 32.5 ಲಕ್ಷ ರೂ., ಟಿಕೇಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ ಸ್ವೀಕೃತವಾದ ಮೊತ್ತ-76.38 ಲಕ್ಷ ರೂ, ಮೈಸೂರು ಅರಮನೆ ಮಂಡಳಿಯಿಂದ ಭರಿಸಲಾದ ವೆಚ್ಚ-5ಕೋಟಿ ರೂಪಾಯಿಗಳು.
ವ್ಯಯಿಸಿದ ಹಣ: ದಸರಾ ಉಪ ಸಮಿತಿಗಳು ಹಾಗೂ ಇತರ ಖರ್ಚು ಜತೆಗೆ ಮೈಸೂರು ರಾಜ ವಂಶಸ್ಥರಿಗೆ ಗೌರವ ಧನವಾಗಿ ಜಿಎಸ್ಟಿ ಸೇರಿ 47 ಲಕ್ಷ ರೂ. ನೀಡಲಾಗಿದೆ. ಒಟ್ಟು 26 ಕೋಟಿ 54 ಲಕ್ಷದ 49 ಸಾವಿರದ 058 ರೂಪಾಯಿ ಹಾಗೂ ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಿಗೆ 2.20 ಲಕ್ಷ ಸೇರಿ ಒಟ್ಟು 28 ಕೋಟಿ 74 ಲಕ್ಷದ 49 ಸಾವಿರದ 058 ರೂಪಾಯಿಗಳು ಖರ್ಚಾಗಿದೆ.
ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ: ದಶಕಗಳಿಂದಲೂ ಮೈಸೂರು ಅರಮನೆಯಲ್ಲಿ ತಾಯಿ ಭುವನೇಶ್ವರಿಗೆ ಪೂಜೆ