ETV Bharat / state

ರಘು ದೀಕ್ಷಿತ್ - ಸಂಜಿತ್ ಹೆಗ್ಡೆ ಗಾನಸುಧೆ: ಕುಣಿದು ಕುಪ್ಪಳಿಸಿದ ಮೈಸೂರು ಜನತೆ - Raghu Dixit

'ಯುವ ದಸರಾ'ದ ಎರಡನೇ ದಿನ ರಘು ದೀಕ್ಷಿತ್ - ಸಂಜಿತ್ ಹೆಗ್ಡೆ ಗಾನಸುಧೆಗೆ ಯುವ ಸಮೂಹ ಹುಚ್ಚೆದ್ದು ಕುಣಿಯಿತು.

mysuru yuva dasara 2nd day programs
ರಘು ದೀಕ್ಷಿತ್ - ಸಂಜಿತ್ ಹೆಗ್ಡೆ ಗಾನಸುಧೆ
author img

By ETV Bharat Karnataka Team

Published : Oct 20, 2023, 10:10 AM IST

ಮೈಸೂರು: 'ಯುವ ದಸರಾ'ದ ಎರಡನೇ ದಿನದಂದು ಕನ್ನಡ ಚಿತ್ರರಂಗದ ಖ್ಯಾತ ಗಾಯಕರಾದ ರಘು ದೀಕ್ಷಿತ್ ಹಾಗೂ ಸಂಜಿತ್ ಹೆಗ್ಡೆ ಅವರು ತಮ್ಮ ಸಂಗೀತ ಸುಧೆ ಮೂಲಕ ನೆರೆದಿದ್ದ ಯುವ ಸಮೂಹವನ್ನು ರಂಜಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಉಪಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಜನರು ಸಾಕ್ಷಿ ಆಗಿದ್ದರು. ಮೊದಲ ದಿನ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ವೇದಿಕೆಯಲ್ಲಿ ಕಿಚ್ಚು ಹಚ್ಚಿದ್ದು, ಎರಡನೇ ದಿನ ರಘು ದೀಕ್ಷಿತ್ ಹಾಗೂ ಯುವ ಗಾಯಕ ಸಂಜಿತ್ ಹೆಗ್ಡೆ ತಮ್ಮ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರ ಮನಗೆದ್ದರು.

mysuru yuva dasara 2nd day programs
ರಘು ದೀಕ್ಷಿತ್ - ಸಂಜಿತ್ ಹೆಗ್ಡೆ ಗಾನಸುಧೆ

ರಘು ದೀಕ್ಷಿತ್ ಸಂಗೀತ... 'ನಮಸ್ಕಾರ ಮೈಸೂರು' ಎನ್ನುತ್ತಲೇ ರಘು ದೀಕ್ಷಿತ್ ವೇದಿಕೆ ಏರುತ್ತಿದ್ದಂತೆ ಸಭಿಕರು ಶಿಳ್ಳೆ, ಚಪ್ಪಾಳೆ ಮೂಲಕ ಭರ್ಜರಿ ಸ್ವಾಗತ ಕೋರಿದರು. ರಘು ದೀಕ್ಷಿತ್ ದನಿಗೆ ಯುವಕರು ಕೂಡ ದನಿ ಸೇರಿಸಿದರು. ''ಲೋಕದ ಕಾಳಜಿ....'' ಎನ್ನುತ್ತಿದ್ದಂತೆ ಸಭಿಕರು ಹುಚ್ಚೆದ್ದು ಕುಣಿದರು. ಇಡೀ ಗೀತೆ ಮುಗಿಯುವರೆಗೂ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಲೇ ಇದ್ದರು. ನಂತರ 'ಜಸ್ಟ್ ಮಾತ್‌ ಮಾತಲ್ಲಿ' ಸಿನಿಮಾದ 'ಮುಂಜಾನೆ ಮಂಜಲ್ಲಿ' ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಗಾಯನ ಲೋಕವನ್ನೇ ಸೃಷ್ಟಿಸಿದರು. 'ಗುಡು ಗುಡಿಯಾ ಸೇದಿ ನೋಡೋ' ಹಾಗೂ 'ಕೋಡಗನಾ ಕೋಳಿ ನುಂಗಿತ್ತಾ' ಗೀತೆಗೂ ಯುವಕರು ಹುಚ್ಚೆದ್ದು ಸಂಭ್ರಮಿಸಿದರು.

ಸಂಜಿತ್ ಹೆಗ್ಡೆ ಗೀತಗಾಯನ: ಯುವಕ ಸಂಜಿತ್ ಹೆಗ್ಡೆ ಜೇಮ್ಸ್ ಸಿನಿಮಾ ಸಾಂಗ್​ನಿಂದ ನೆರೆದಿದ್ದ ಪ್ರೇಕ್ಷಕರಲ್ಲಿ ಜೋಶ್ ತುಂಬಿತು. ತಾಯಿಗೆ ತಕ್ಕ ಮಗ ಸಿನಿಮಾದ ಮರಳಿ ಮನಸಾಗಿದೆ ಹಾಡು ಹಾಡುತ್ತಿದ್ದಂತೆ ಯುವಕರು ಕೋರಸ್ ಕೊಟ್ಟರು. ಮಳೆಯೇ ಮಳೆಯೇ ಗಾಯನವಂತೂ ಯುವಜನರನ್ನು ಪ್ರೀತಿಯಲ್ಲಿ ತೇಲುವಂತೆ ಮಾಡಿತು. ನಡುವೆ ಅಂತರವಿರಲಿ ಸಿನಿಮಾದ ಶಾಕುಂತ್ಲೆ ಸಿಕ್ಕಳು ಸುಮ್‌ ಸುಮ್ನೆ ನಕ್ಕಳು ಗೀತೆಗೆ ಯುವಪಡೆ ಹುಚ್ಚೆದ್ದು ಕುಣಿಯಿತು. ತಾವು ಸಹ ಈ ಗೀತೆಯನ್ನು ಹಾಡುವುದರ ಮೂಲಕ ಸಂಜಿತ್ ಹೆಗ್ಡೆ ಅವರಿಗೆ ಸಾಥ್ ಕೊಟ್ಟರು.

ಇದನ್ನೂ ಓದಿ: ತಮನ್ನಾ ಆಕರ್ಷಕ ಭಂಗಿಗೆ ಮನಸೋತ ಅಭಿಮಾನಿಗಳು: ಭಾಟಿಯಾ ಫೈಯರ್​ ಲುಕ್​ಗೆ ಫ್ಯಾನ್ಸ್ ಫಿದಾ

ಜಂಟಲ್ ಮ್ಯಾನ್ ಸಿನಿಮಾದ ಬೆಳಕಿನ ಕವಿತೆ ಹಾಡಿಗೂ ಯುವ ಜನರು ಜೋರಾಗಿ ಕೂಗಿ ಸಂಭ್ರಮಿಸಿದರು. ಅದೇ ರೀತಿ ಹಾಯಾಗಿದೆ ಎದೆಯೊಳಗೆ ಗೀತೆಯಂತೂ ಯುವಕರ ಎದೆಯಲ್ಲಿ ಪ್ರೇಮ ಕಾವ್ಯ ಬರೆಯಿತು. ಹೀಗೆ ಜನಪ್ರಿಯ ಹಾಡುಗಳು 'ಯುವ ದಸರಾ' ಕಾರ್ಯಕ್ರಮದಲ್ಲಿ ಸದ್ದು ಮಾಡಿದ್ದು, ಮೊಬೈಲ್‌ ಫ್ಲ್ಯಾಶ್ ಲೈಟ್ ಆನ್ ಮಾಡಿ ಯುವ ಜನತೆ ಸಂಭ್ರಮಿಸಿದರು. ಸ್ಯಾಂಡಲ್​​ವುಡ್​ನ ವಿವಿಧ ಕಲಾವಿದರು ಕಾರ್ಯಕ್ರಮದಲ್ಲಿ ಜೊತೆಗೂಡಿ ಮೈಸೂರು ಜನತೆಯನ್ನು ರಂಜಿಸಿ ನಾಡಹಬ್ಬ ಮೈಸೂರು ದಸರಾಗೆ ಶುಭ ಕೋರಿದರು.

ಇದನ್ನೂ ಓದಿ: ಟೈಗರ್​​ ಥೀಮ್​ ಡ್ರೆಸ್​ ತೊಟ್ಟ ಭೂಮಿ ಪಡ್ನೇಕರ್ ಸಲ್ವಾರ್​ ಸೂಟ್​ನಲ್ಲಿ ರಾಶಿ ಖನ್ನಾ: ಹೀಗಿವೆ ನಟಿಮಣಿಯರ ಆಕರ್ಷಕ ಫೋಟೋಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.