ETV Bharat / state

ಅಸಂಘಟಿತ ಕೂಲಿ ಕಾರ್ಮಿಕರಿಗೆ ಗಂಜಿ ಕೇಂದ್ರ ತೆರೆಯಲು ಮೈಸೂರು ಪಾಲಿಕೆ ನಿರ್ಧಾರ - Mysore greater municipal corporation

ದೇಶಾದ್ಯಂತ ಲಾಕ್​ ಡೌನ್ ಆದೇಶ ಹಿನ್ನೆಲೆ ಹೋಟೆಲ್​ಗಳು ಮುಚ್ಚಿದ್ದು, ನಗರ ವ್ಯಾಪ್ತಿಯಲ್ಲಿ ಅಸಂಘಟಿತ ಕೂಲಿ ಕಾರ್ಮಿಕರಿಗೆ ಆಹಾರ ಸಮಸ್ಯೆ ಉಂಟಾಗಿದೆ. ಹೀಗಾಗಿ ನಗರದ 9 ವಲಯಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

Mysuru Municipality decided to provide Food for Unorganized workers
ಗಂಜಿ ಕೇಂದ್ರ ತೆರೆಯಲು ಮೈಸೂರು ಪಾಲಿಕೆ ನಿರ್ಧಾ
author img

By

Published : Mar 27, 2020, 7:02 PM IST

ಮೈಸೂರು: ಲಾಕ್ ಡೌನ್​ ಹಿನ್ನೆಲೆ ಹೋಟೆಲ್‌ಗಳು ಮುಚ್ಚಿರುವುದರಿಂದ ಅಸಂಘಟಿತ ಕಾರ್ಮಿಕರಿಗೆ ಆಹಾರ ಸಮಸ್ಯೆ ಉಂಟಾಗಿದ್ದು, ಮಹಾನಗರ ಪಾಲಿಕೆ ಗಂಜಿ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ವಲಯವೊಂದರ ವ್ಯಾಪ್ತಿಯಲ್ಲಿ ಲಕ್ಷ್ಮಿಪುರಂನ ಹೊಯ್ಸಳ ಕರ್ನಾಟಕ ಸಂಘ, ಚಾಮುಂಡೇಶ್ವರಿ ಕರಿಮಾರಮ್ಮ ಕಲ್ಯಾಣ ಮಂಟಪ. ವಲಯ ಕಚೇರಿ 2ರಲ್ಲಿ ಅಶೋಕಪುರಂನ ವನಿತಾ ಸದನ ಶಾಲೆ, ಜಯನಗರದ ಇಸ್ಕಾನ್ ದೇವಸ್ಥಾನದ ಎದುರುಗಡೆ ಇರುವ ಸಮುದಾಯ ಭವನ. ವಲಯ ಕಚೇರಿ 3ರಲ್ಲಿ ಶಾರದಾದೇವಿ ನಗರದಲ್ಲಿರುವ ಇಂದಿರಾ ಕ್ಯಾಂಟಿನ್, ಕುವೆಂಪುನಗರದ ಕೆಎಚ್‌ಬಿ ಕಾಂಪ್ಲೆಕ್ಸ್. ವಲಯ 4ರಲ್ಲಿ ಕುಕ್ಕರಹಳ್ಳಿ ಸಮುದಾಯ ಭವನ, ಕುದುರೆಮಾಳದ ಸಮುದಾಯ ಭವನ, ವಲಯ 5ರ ಕುಂಬಾರಕೊಪ್ಪಲಿನ ಮಹಾದೇಶ್ವರ ಸಮುದಾಯ ಭವನ. ವಲಯ 6ರಲ್ಲಿ ಆರ್‌ಎಂಸಿ ಸರ್ಕಲ್, ಕೆ.ಆರ್.ಆಸ್ಪತ್ರೆಯ ಇಂದಿರಾ ಕ್ಯಾಂಟಿನ್, ವಲಯ 7ರ ವ್ಯಾಪ್ತಿಯಲ್ಲಿ ಲಷ್ಕರ್ ಮೊಹಲ್ಲಾದ ಪುಲಿಕೇಶಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ. ವಲಯ 8ರಲ್ಲಿ ಉದಯಗಿರಿಯ ಅಬ್ದುಲ್ ರೆಹಮಾನ್ ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ಸಮುದಾಯ ಭವನ, ಗಾಯಿತ್ರಿಪುರಂ ಜಲಪುರಿ ಸಮುದಾಯ ಭವನ, ವಲಯ 9ರಲ್ಲಿ ಹುಲಿಯಮ್ಮ ದೇವಸ್ಥಾನದ ಹತ್ತಿರವಿರುವ ಸಮುದಾಯ ಭವನ, ಎ.ಕೆ. ಕಾಲೋನಿಯ ಸಮುದಾಯ ಭವನದಲ್ಲಿ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ.

Mysuru Municipality decided to provide Food for Unorganized workers
ಗಂಜಿ ಕೇಂದ್ರಗಳ ವಿವರ

ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಾಸಂಸ್ಥೆಗಳು ಹಾಗೂ ಇತರೆ ವ್ಯಕ್ತಿಗಳು ದೇಣಿಗೆ ರೂಪದಲ್ಲಿ ಗಂಜಿ ಕೇಂದ್ರದ ನಿರ್ವಹಣೆಗೆ ನೀಡುವ ದೇಣಿಗೆಯನ್ನು ಸ್ವೀಕರಿಸಿ ಪ್ರತಿನಿತ್ಯ ಕೋವಿಡ್-19 ನಿರ್ಬಂಧ ಮುಗಿಯುವವರೆಗೆ ಊಟ ಪೂರೈಸಲು ಕ್ರಮ ಕೈಗೊಳ್ಳುವಂತೆ ಆಯಾ ವಲಯ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.