ಮೈಸೂರು : ಇನ್ನು ಒಂದು ತಿಂಗಳೊಳಗೆ ಜಿಲ್ಲೆಯನ್ನ ಕೊರೊನಾ ಮುಕ್ತ ಮಾಡಬೇಕೆಂಬ ಪಣ ಇದೆ. ಕೊರೊನಾ ಮುಕ್ತ ಮಾಡಿ ವೈದ್ಯರ ದಿನದಂದು ವೈದ್ಯರ ಸೇವೆ ಸ್ಮರಣೆ ಮಾಡೋಣ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಕರ್ತರಿಗೆ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು ಜಾಸ್ತಿಯಾಗುತ್ತಿರುವುದರಿಂದ ಜನರು ಆತಂಕ ಪಡಬೇಡಿ.
ನಮ್ಮಲ್ಲಿ ಟೆಸ್ಟಿಂಗ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಎಲ್ಲ ಅಂಕಿ- ಅಂಶಗಳನ್ನು ವಾರ್ ರೂಮ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಬೆಂಗಳೂರು ನಂತರ ಮೈಸೂರಿನಲ್ಲೇ ಹೆಚ್ಚಿನ ಅಂಕಿ-ಅಂಶಗಳನ್ನು ನೀಡುತ್ತಿದ್ದೇವೆ. ಪಾಸಿಟಿವ್ ಹೆಚ್ಚಳಕ್ಕೆ ಜನತೆ ಆತಂಕ ಪಡಬೇಡಿ. ಕೊರೊನಾ ವಿರುದ್ಧ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿ. ಕೊರೊನಾ ಮುಕ್ತ ಜಿಲ್ಲೆ ಮಾಡಿ ಘೋಷಣೆಯನ್ನ ವೈದ್ಯರ ದಿನದಂದು ವೈದ್ಯರಿಗೆ ಅರ್ಪಿಸೋಣ ಎಂದರು.
ನಾಳೆಯ ಲಾಕ್‌ಡೌನ್ ಬಗ್ಗೆ ಗೊಂದಲ ಬೇಡ. ತೀರಾ ಅಗತ್ಯವಿದ್ದರೆ ಮಾತ್ರ ಹೊರ ಬನ್ನಿ. ಆದಷ್ಟು ಜನತಾ ಕಪ್ಯೂ೯ ನಿಯಮ ಪಾಲನೆ ಮಾಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಓದಿ: ತಾಕತ್ತಿದ್ದರೆ ಡೀಸಿಯನ್ನು ವರ್ಗಾವಣೆ ಮಾಡಿ ತೋರಿಸು: ಪ್ರತಾಪ್ ಸಿಂಹಗೆ ಜಿ.ಟಿ ದೇವೇಗೌಡ ಸವಾಲು