ETV Bharat / state

ಜಂಬೂಸವಾರಿಗೆ ಸಕಲ ಸಿದ್ಧತೆ ನಡೆದಿದೆ: ಡಿಸಿಎಫ್ ಸೌರವ್ ಕುಮಾರ್ - mysore dasara 2023

ಜಗತ್ಪ್ರಸಿದ್ಧ ಮೈಸೂರು ಜಂಬೂಸವಾರಿಯಲ್ಲಿ ಗಜಪಡೆಗಳ ಸಿದ್ಧತೆಗಳ ಕುರಿತು ಡಿಸಿಎಫ್ ಸೌರವ್ ಕುಮಾರ್​ 'ಈಟಿವಿ ಭಾರತ'ದ ಜತೆ ಮಾತನಾಡಿದರು.

ಡಿಸಿಎಫ್ ಸೌರವ್ ಕುಮಾರ್​ ಸಂದರ್ಶನ
ಡಿಸಿಎಫ್ ಸೌರವ್ ಕುಮಾರ್​ ಸಂದರ್ಶನ
author img

By ETV Bharat Karnataka Team

Published : Oct 19, 2023, 7:44 PM IST

Updated : Oct 19, 2023, 9:37 PM IST

ಡಿಸಿಎಫ್ ಸೌರವ್ ಕುಮಾರ್​ ಸಂದರ್ಶನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ವಿಜಯ ದಶಮಿಯ ದಿನ ನಡೆಯಲಿರುವ ಮೆರವಣಿಗೆಗೆ ಗಜಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಈಗಾಗಲೇ ಮರದ ಅಂಬಾರಿ, ಕುಶಾಲತೋಪು ತಾಲೀಮು, ಮರಳು ಮೂಟೆ ತಾಲೀಮು, ಜಂಬೂಸವಾರಿ ಪುಷ್ಪಾರ್ಚನೆ ತಾಲೀಮು ಸೇರಿದಂತೆ ಎಲ್ಲ ಬಗೆಯ ತಾಲೀಮುಗಳನ್ನು ಮಾಡಲಾಗಿದೆ. ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಎಲ್ಲಾ ಆನೆಗಳು ಸಿದ್ದವಾಗಿವೆ ಎಂದು ಡಿಸಿಎಫ್ ಸೌರವ್ ಕುಮಾರ್ ಮಾಹಿತಿ ನೀಡಿದರು.

ಮರದ ಅಂಬಾರಿ ತಾಲೀಮಿನಲ್ಲಿ ಅಭಿಮನ್ಯು, ಮಹೇಂದ್ರ, ಧನಂಜಯ ಆನೆಗಳಿಗೆ ತಾಲೀಮು ಮಾಡಲಾಗಿದೆ. ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಇತರ ಎರಡು ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿವೆ. ಭೀಮ ಮತ್ತು ಧನಂಜಯ ಅರಮನೆಯ ಶರನ್ನವರಾತ್ರಿಯ ಪೂಜೆಯಲ್ಲಿ ಪಟ್ಟದ ಆನೆಯಾಗಿ ಪಾಲ್ಗೊಂಡಿವೆ. ಅವುಗಳು ಸಹ ತಾಲೀಮಿನಲ್ಲಿ ಭಾಗವಹಿಸಿವೆ ಎಂದರು.

ಜಂಬೂಸವಾರಿ ಮೆರವಣಿಗೆ ಸಂಜೆ ನಡೆಯುವುದರಿಂದ ದೀಪಾಲಂಕಾರದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಚೆಸ್ಕಾಂ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಸದ್ಯ ಎಲ್ಲಾ ಆನೆಗಳಿಗೂ ವಿಶೇಷ ಆಹಾರ ನೀಡಲಾಗುತ್ತಿದೆ. ಎಲ್ಲವೂ ಆರೋಗ್ಯವಾಗಿವೆ. ಚಿನ್ನದ ಅಂಬಾರಿ ಇಡುವ ಆನೆಯ ಬೆನ್ನಿನ ಮೇಲೆ ಕಟ್ಟುವ ನಮ್ದಾ ಹಾಗೂ ಗಾದಿಯೂ ತಯಾರಾಗಿದೆ. ಜಂಬೂಸವಾರಿಗೆ ಅರಣ್ಯ ಇಲಾಖೆಯವರು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಡಿಸಿಎಫ್ ತಿಳಿಸಿದರು.

ಪ್ರತಿದಿನ ಗಜಪಡೆ ತಾಲೀಮಿನಲ್ಲಿ ಕೆಲವರು ಕೆಟ್ಟ ರೀತಿಯಲ್ಲಿ ವರ್ತಿಸುವುದನ್ನು ನೋಡಿದ್ದೇವೆ. ಆದರೆ ಗಜಪಡೆಯೊಂದಿಗೆ ಜನ ಜಾಗರೂಕತೆಯಿಂದ ವರ್ತಿಸಿ, ದೂರದಿಂದಲೇ ಅಂಬಾರಿ ವೀಕ್ಷಿಸಿ ಎಂದು ಡಿಸಿಎಫ್ ಮನವಿ ಮಾಡಿದರು.

ಈಗಾಗಲೇ ಅಶ್ವಪಡೆ ಮತ್ತು ಗಜಪಡೆಗಳಿಗೆ ಮೂರು ಹಂತದ ಕುಶಾಲತೋಪು ತಾಲೀಮು ನಡೆಸಲಾಗಿದೆ. ಅ.11 ರಂದು ಮೊದಲ ಹಂತದ ತಾಲೀಮು ನಡೆಸಲಾಗಿತ್ತು. ಅ.17ನೇ ತಾರೀಖಿನಂದು ಅಂತಿಮ ಹಂತದ ಕುಶಾಲತೋಪು ತಾಲೀಮ ನಡೆಸಲಾಗಿತ್ತು. ಇದರಲ್ಲಿ 14 ಆನೆಗಳು, 43 ಅಶ್ವದಳ ಭಾಗಿಯಾಗಿದ್ದವು. ಪೊಲೀಸರು, ಅಶ್ವಾರೋಹಿದಳ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದರಲ್ಲಿದ್ದರು.

ಇದನ್ನೂ ಓದಿ: ಮೈಸೂರು ದಸರಾ 2023: ಗಜಪಡೆಗೆ ಜಂಬೂಸವಾರಿ ಪುಷ್ಪಾರ್ಚನೆ ತಾಲೀಮು.. ವಿಡಿಯೋ ನೋಡಿ

Last Updated : Oct 19, 2023, 9:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.