ETV Bharat / state

ಮೈಸೂರು ದಸರಾ-2023: ಗಜಪಡೆ ಪರಿವಾರದ ವಾಸ್ತವ್ಯಕ್ಕೆ ಅರಮನೆ ಆವರಣದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ - temporary accommodation for elephants

ಮೈಸೂರು ದಸರಾಕ್ಕೆ ಆಗಮಿಸುವ ಗಜಪಡೆ ಮತ್ತು ಮಾವುತರ ಕುಟುಂಬಸ್ಥರಿಗೆ ವಾಸ್ತವ್ಯ ಹೂಡಲು ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

Etv Bharat
Etv Bharat
author img

By ETV Bharat Karnataka Team

Published : Aug 23, 2023, 6:24 PM IST

ಗಜಪಡೆ ಪರಿವಾರದ ವಾಸ್ತವ್ಯಕ್ಕೆ ಅರಮನೆ ಆವರಣದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ

ಮೈಸೂರು : ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು ಒಂದೂವರೆ ತಿಂಗಳಷ್ಟೇ ಬಾಕಿ ಇದೆ. ಈ ಸಂಬಂಧ ಜಿಲ್ಲಾಡಳಿತ ವಿವಿಧ ಸಿದ್ಧತೆಗಳನ್ನು ನಡೆಸುತ್ತಿದೆ. ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸುವ ಗಜಪಡೆ, ಮಾವುತರು ಹಾಗೂ ಕಾವಾಡಿಗಳ ಕುಟುಂಬ ವಾಸ್ತವ್ಯ ಹೂಡಲು ಅರಮನೆಯ ಆವರಣದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಾರಿಯ ದಸರಾಗೆ 45 ದಿನ ಬಾಕಿ ಇದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ದಸರಾ ನಿಮಿತ್ತ ಸೆಪ್ಟೆಂಬರ್ 1ರಂದು ಗಜಪಯಣದ ಮೂಲಕ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸಲಿವೆ. ಸೆಪ್ಟೆಂಬರ್ 4ರಂದು ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಗುವುದು. ಅಕ್ಟೋಬರ್ 15ರಿಂದ ಅಕ್ಟೋಬರ್ 24ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ಅಲ್ಲಿಯವರೆಗೆ ಗಜಪಡೆಗಳು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಶೆಡ್​ಗಳಲ್ಲಿ ವಾಸ್ತವ್ಯ ಹೂಡಲಿವೆ. ಆನೆಗಳ ಜೊತೆ ಆಗಮಿಸಲಿರುವ ಮಾವುತರು, ಕಾವಾಡಿಗರ ಪರಿವಾರಕ್ಕೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಆನೆಗಳಿಗೆ ಒಟ್ಟು 6 ಶೆಡ್​ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಮೊದಲ ಹಂತದಲ್ಲಿ ಬರುವ 9 ಗಜಪಡೆ ಹಾಗೂ ಎರಡನೇ ಹಂತದಲ್ಲಿ ಬರುವ 5 ಗಜಪಡೆಗಳಿಗಾಗಿ ಶೆಡ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಶೆಡ್​ಗಳ ಸುತ್ತಮುತ್ತ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದೆ. ಗಜಪಡೆಗೆ ಪ್ರತಿನಿತ್ಯ ತಾಲೀಮು, ವಿಶೇಷ ಆಹಾರ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : Mysuru Dasara: ಮೈಸೂರು ದಸರಾ: ಗಜಪಯಣಕ್ಕೂ ಮುನ್ನವೇ 16 ಉಪಸಮಿತಿ ರಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.