ETV Bharat / state

ಮೈಸೂರಿನಲ್ಲಿ ಎಂಜಿನಿಯರ್ ನಿಗೂಢ ಸಾವು: ಕೊಲೆ ಶಂಕೆ - ಕ್ತಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ಇಂಧನ ಅಭಿವೃದ್ಧಿ ನಿಯಮಿತದಲ್ಲಿ ಸೋಲಾರ್ ಎನರ್ಜಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ, ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಅವರನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತರ ಪತ್ನಿ, ಮಗ ಹಾಗೂ ಮನೆ ಕೆಲಸಗಾರರ ಮೇಲೆ ಅನುಮಾನ ವ್ಯಕ್ತವಾಗಿದೆ.

ಮೈಸೂರು
ಮೈಸೂರು
author img

By

Published : Nov 29, 2022, 12:59 PM IST

ಮೈಸೂರು: ಬೆಂಗಳೂರಿನ ಕರ್ನಾಟಕ ನವೀಕರಿಸಹುದಾದ ಇಂಧನ ಅಭಿವೃದ್ಧಿ ನಿಯಮಿತದಲ್ಲಿ ಸೋಲಾರ್ ಎನರ್ಜಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ, ನಿಗೂಢವಾಗಿ ತಮ್ಮ ಮನೆಯಲ್ಲೇ ಸಾವಿಗೀಡಾಗಿರುವ ಘಟನೆ ನಗರದ ಭೋಗದಿ 2ನೇ ಹಂತದ ಬಳಿ ನಡೆದಿದೆ. ಡಿ ಕೆ ದಿನೇಶ್ ಕುಮಾರ್ (50) ಮೃತ ವ್ಯಕ್ತಿ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಮೈಸೂರಿನಲ್ಲಿ ಕುಟುಂಬದ ಜೊತೆ ನಗರದ ಬೋಗಾದಿ 2ನೇ ಹಂತದ ನಿರ್ಮಿತಿ ಕೇಂದ್ರದ ಬಳಿ ಮನೆ ಮಾಡಿಕೊಂಡು, ಪತ್ನಿ ಮತ್ತು 12 ವರ್ಷದ ಮಗನೊಂದಿಗೆ ವಾಸವಿದ್ದರು. ಭಾನುವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ದಿನೇಶ್ ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ಕೆಲಸಗಾರರು ಸೇರಿಸಿದ್ದರು.

ಇದರ ಜೊತೆಗೆ ಮನೆಯಲ್ಲೇ ಇದ್ದ ಪತ್ನಿ ಹಾಗೂ ಪುತ್ರ ಸಹ ಅಸ್ವಸ್ಥಗೊಂಡಿದ್ದು, ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆಗೆ ಕರೆತರುವ ಹೊತ್ತಿಗೆ ದಿನೇಶ್ ಕುಮಾರ್ ಮೃತಪಟ್ಟಿದ್ದು, ದೇಹ ಉಬ್ಬಿಕೊಂಡ ಸ್ಥಿತಿಯಲ್ಲಿತ್ತು. ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ತುಮಕೂರಲ್ಲಿ ಕಾರಿನ ಹಾರನ್ ಕಿರಿಕಿರಿ.. ಚಾಲಕನಿಗೆ ಡ್ರಾಗರ್​ನಿಂದ ಚುಚ್ಚಿ ಕೊಲೆ ಯತ್ನ

ಅಸಹಜ ಸಾವು ಪ್ರಕರಣ ದಾಖಲು: ಡಿ ಕೆ ದಿನೇಶ್ ಕುಮಾರ್ ಅವರ ಮೃತದೇಹ ಉಬ್ಬಿಕೊಂಡಿದ್ದು, ಬಾಯಲ್ಲಿ ರಕ್ತ ಬಂದಿದೆ. ದೇಹದ ಕೆಲವು ಭಾಗಗಳಿಗೆ ಗಾಯವಾಗಿದೆ. ಇದರಿಂದ ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ತನಿಖೆ ಮಾಡಬೇಕೆಂದು ಮೃತ ದಿನೇಶ್ ಕುಮಾರ್ ಅಕ್ಕನ ಮಗ ನಾರಾಯಣ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಮೃತರ ಪತ್ನಿ, ಮಗ ಹಾಗೂ ಮನೆ ಕೆಲಸಗಾರರ ಮೇಲೆ ಅನುಮಾನ ಇದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.