ಮೈಸೂರು: ಇನ್ಮುಂದೆ ಪ್ರತಿ ಮಂಗಳವಾರ ಎಂದಿನಂತೆ ಮೃಗಾಲಯ ಬಂದ್ ಆಗಲಿದ್ದು, ಭಾನುವಾರ ಮೃಗಾಲಯ ತೆರೆಯಲಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಹಣಾಧಿಕಾರಿ ಅಜಿತ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಆದೇಶಾನುಸಾರ ಜುಲೈ 7 ರಿಂದ 26ರವರೆಗೆ ನಾಲ್ಕು ಭಾನುವಾರಗಳಂದು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನ ವೀಕ್ಷಣೆಗೆ ನಿರ್ಬಂಧಗೊಳಿಸಿ, ಪ್ರತಿ ಮಂಗಳವಾರದಂದು ವೀಕ್ಷಣೆಗೆ ತೆರೆಯಲಾಗಿತ್ತು.
ಸರ್ಕಾರವು ಕೋವಿಡ್-19 ಅನ್ ಲಾಕ್ ಮಾರ್ಗಸೂಚಿಯನ್ನು ಜುಲೈ 30 ಆದೇಶದಂತೆ ಯಥಾಪ್ರಕಾರ ಮೃಗಾಲಯದ ವಾರದ ರಜೆಯಾದ ಮಂಗಳವಾರದಂದು ಮೃಗಾಲಯವನ್ನು ವೀಕ್ಷಕರ ವೀಕ್ಷಣೆಗೆ ನಿರ್ಬಂಧಗೊಳಿಸಿ, ಆಗಸ್ಟ್ 2 ರಿಂದ ಪ್ರತಿ ಭಾನುವಾರ ವೀಕ್ಷಣೆಗೆ ತೆರೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.