ETV Bharat / state

ಮೈಸೂರು ಪೊಲೀಸರ ಭರ್ಜರಿ ಬೇಟೆ: ಗಾಂಜಾ‌, ಛರಸ್, ಮಟ್ಕಾ ದಂಧೆ ಮಾಡುತ್ತಿದ್ದವರ ಬಂಧನ

ನಗರದಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆ ಮೇಲೆ ಕಣ್ಣಿಟ್ಟಿದ್ದ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಸುಮಾರು 33,330 ರೂ ವಶಪಡಿಸಿಕೊಳ್ಳಲಾಗಿದೆ.

Etv Bharat
ವಿವಿಧ ಅಪರಾಧಿ ಪ್ರಕರಣಗಳು
author img

By

Published : Dec 24, 2022, 7:34 AM IST

ಮೈಸೂರು: ನಗರ ಪೊಲೀಸರು ವಷಾಂತ್ಯದಲ್ಲಿ ಭರ್ಜರಿ ಬೇಟೆ ಆಡಿದ್ದು, ವಿವಿಧ ಪ್ರಕರಣಗಳಿಂದ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ನಗರದಲ್ಲಿ ಗಾಂಜಾ, ಛರಸ್​ ಮಾರಾಟ, ಮನೆ ಕಳ್ಳತನ ಮತ್ತು ಮಟ್ಕಾ ದಂಧೆ ಮಾಡುತ್ತಿದ್ದವರಿಗೆ ಬೇಡಿ ತೊಡಿಸಿದ್ದಾರೆ.

ಡಿ.15ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಉದಯಗಿರಿ ಠಾಣಾ ವ್ಯಾಪ್ತಿಯ ರಾಜೀವ್ ನಗರ 2ನೇ ಹಂತದ ಸೈಯದ್ ಅಬ್ದುಲ್ ರೆಹಮಾನ್ ರಸ್ತೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, ಆತನ ವಶದಲ್ಲಿದ್ದ ಅಂದಾಜು ರೂ. 70 ಸಾವಿರ ರೂ. ಮೌಲ್ಯದ 1 ಕೆ.ಜಿ. 160 ಗ್ರಾಂ ಗಾಂಜಾ, ತೂಕದ ಯಂತ್ರ, 1,850 ನಗದು ಹಣ ಮತ್ತು ಒಂದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಛರಸ್​ ವಶ: ಡಿ.19ರಂದು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮೈಸೂರು ನಗರ ಆಲನಹಳ್ಳಿ ಠಾಣಾ ವ್ಯಾಪ್ತಿಯ ತಿ. ನರಸೀಪುರ ಮುಖ್ಯರಸ್ತೆಯ ಆಲನಹಳ್ಳಿ ಕೆರೆಗೆ ಹೊಂದಿಕೊಂಡಂತೆ ಇರುವ ಅರಳಿಮರದ ಬಳಿ ಒಬ್ಬ ಆರೋಪಿಯನ್ನು ಬಂಧಿಸಿ, ಆತನ ವಶದಲ್ಲಿದ್ದ ಅಂದಾಜು 3.50 ಲಕ್ಷ ರೂ.ಮೌಲ್ಯದ 126 ಗ್ರಾಂ ಛರಸ್, ತೂಕದ ಯಂತ್ರ ಮತ್ತು ಒಂದು ದ್ವಿ ಚಕ್ರ ವಾಹನವನ್ನು ವಶ ಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ ದಂಧೆ 9 ಜನರ ಬಂಧನ: ಮಟ್ಕಾ ದಂಧೆ ನಡೆಸುತ್ತಿದ್ದ ಒಟ್ಟು 9 ಆರೋಪಿಗಳ ಬಂಧಿಸಿ, 33,330 ರೂ.ನಗದು ಮತ್ತು ದಾಖಲಾತಿಗಳು ವಶ ಪಡಿಸಿಕೊಳ್ಳಲಾಗಿದೆ. ಡಿ.12ರಂದು ಉದಯಗಿರಿ ಠಾಣಾ ವ್ಯಾಪ್ತಿಯ ಗೌಸಿಯಾನಗರದ ಸಿ ಬ್ಲಾಕಕ್​ನ ಸುಲ್ತಾನ್ ರಸ್ತೆಯಲ್ಲಿರುವ ಖದೀರ್ ಕೇರಂ ಬೋರ್ಡ್ ಕ್ಲಬ್ ಮುಂಭಾಗ ಮಟ್ಕಾ ದಂಧೆ ನಡೆಸುತ್ತಿದ್ದ 4 ಆರೋಪಿಗಳನ್ನು ಬಂಧಿಸಿ 18,110 ರೂ. ನಗದು ಹಣ ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉದಯಗಿರಿ ಠಾಣಾ ಸರಹದ್ದಿನ ಗೌಸಿಯಾ ನಗರ ಸಿ ಬ್ಲಾಕ್, ಸುಲ್ತಾನ ರಸ್ತೆಯಲ್ಲಿರುವ ಇಮ್ರಾನ್ ಟೀ ಸ್ಟಾಲ್ ಮುಂಭಾಗ ಮಟ್ಕಾ ದಂಧೆ ನಡೆಸುತ್ತಿದ್ದ 03 ಆಸಾಮಿಗಳನ್ನು ಬಂಧಿಸಿದ್ದು 10,640 ರೂ. ನಗದು ಹಣ ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ನರಸಿಂಹರಾಜ ಠಾಣಾ ವ್ಯಾಪ್ತಿಯ ಬಿ.ಬಿ.ಕೇರಿಯ ಮಂಟೇಸ್ವಾಮಿ ದೇವಸ್ಥಾನದ ರಸ್ತೆಯ 1ನೇ ಕ್ರಾಸ್​ನಲ್ಲಿರುವ ಮನೆಯೊಂದರ ಮುಂಭಾಗ ಮಟ್ಕಾ ದಂಧೆ ನಡೆಸುತ್ತಿದ್ದ 2 ಆರೋಪಿಗಳನ್ನು ಬಂಧಿಸಿ, 4,580 ರೂ. ವಶಕ್ಕೆ ಪಡೆದಿದ್ದಾರೆ.

ಇಬ್ಬರು ಮನೆಗಳ್ಳರ ಬಂಧನ: ನ.22ರಂದು ನಗರ ಸಿಸಿಬಿ ಪೊಲೀಸರು ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು, ಆತನು ನೀಡಿದ ಮಾಹಿತಿ ಮೇರೆಗೆ ಡಿ.06ರಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ವಿಚಾರಣಾ ವೇಳೆ ಮೈಸೂರು ನಗರ ಸೇರಿದಂತೆ ವಿವಿಧ ಜಿಲ್ಲಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 07 ಪ್ರಕರಣಗಳಿಗೆ ಸಂಬಂಧಪಟ್ಟಂತೆ 10 ಲಕ್ಷ ರೂ. ಮೌಲ್ಯದ 136 ಗ್ರಾಂ ಚಿನ್ನಾಭರಣ, 1 ದ್ವಿ ಚಕ್ರ ವಾಹನ, 3 ಮಾರುತಿ 800 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಹಾವೇರಿ: ನಾಲ್ವರು ಅಂತಾರಾಜ್ಯ ಡಕಾಯಿತರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.