ಮೈಸೂರು.. ಪ್ರವಾಸಿ ತಾಣಗಳಲ್ಲಿ ಕಠಿಣ ನಿರ್ಬಂಧ ಸದ್ಯಕ್ಕಿಲ್ಲ: ಸಚಿವ ಸೋಮಶೇಖರ್ - ಸಚಿವ ಸೋಮಶೇಖರ್ ಸುದ್ದಿ, ಮೈಸೂರು ಬಂದ್ ಸುದ್ದಿ
ಮೈಸೂರಿನ ಪ್ರವಾಸಿತಾಣಗಳಲ್ಲಿ ಕಠಿಣ ನಿರ್ಬಂಧ ಸದ್ಯಕ್ಕಿಲ್ಲ ಎಂದು ಎಸ್ಟಿ ಸೋಮಶೇಖರ್ ತಿಳಿಸಿದ್ದಾರೆ.
![ಮೈಸೂರು.. ಪ್ರವಾಸಿ ತಾಣಗಳಲ್ಲಿ ಕಠಿಣ ನಿರ್ಬಂಧ ಸದ್ಯಕ್ಕಿಲ್ಲ: ಸಚಿವ ಸೋಮಶೇಖರ್ Somashekhar reaction on strict action in Mysore tourist places, Minister Someshekar news, Mysore bundh news, Mysore corona cases, ಮೈಸೂರು ಪ್ರವಾಸಿ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೋಮಶೇಖರ್ ಪ್ರತಿಕ್ರಿಯೆ, ಸಚಿವ ಸೋಮಶೇಖರ್ ಸುದ್ದಿ, ಮೈಸೂರು ಬಂದ್ ಸುದ್ದಿ, ಮೈಸೂರು ಕೊರೊನಾ ಪ್ರಕರಣಗಳು,](https://etvbharatimages.akamaized.net/etvbharat/prod-images/768-512-14242593-thumbnail-3x2-sss.jpg?imwidth=3840)
ಮೈಸೂರು: ಮೈಸೂರಿನ ಪ್ರವಾಸಿತಾಣಗಳಲ್ಲಿ ಕಠಿಣ ನಿರ್ಬಂಧ ಸದ್ಯಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿಯ ಆಧರಾದ ಮೇಲೆ ಕೆಲವು ಕ್ರಮಗಳನ್ನು ಕೈಗೊಳ್ಳುತ್ತೇವೆ. ಪ್ರವಾಸಿತಾಣಗಳನ್ನು ಬಂದ್ ಮಾಡುವಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ. ಕಠಿಣ ನಿರ್ಬಂಧಗಳ ಅವಶ್ಯಕತೆಯೂ ಸದ್ಯಕ್ಕೆ ಕಾಣುತ್ತಿಲ್ಲ ಎಂದರು.
ಓದಿ: ವೀಕೆಂಡ್ ಕರ್ಫ್ಯೂ ಬೇಕೋ ಬೇಡವೋ ಎಂದು ಕೋವಿಡ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ: ಸಿಎಂ ಬೊಮ್ಮಾಯಿ
ಮೈಸೂರು ಜಿಲ್ಲೆಯಲ್ಲಿ ಶಾಲೆಗಳ ಬಂದ್ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆಯಾ ಶಾಲೆಗಳ ಪರಿಸ್ಥಿತಿಗನುಣವಾಗಿ ಡಿಡಿಪಿಐ ನಿರ್ಧಾರ ಮಾಡುತ್ತಾರೆ. ಸ್ಥಳೀಯ ಶಾಸಕರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಾಮೂಹಿಕವಾಗಿ ಶಾಲೆಗಳ ಬಂದ್ ಮಾಡುವ ಪ್ರಸ್ತಾಪ ಇಲ್ಲ ಎಂದು ತಿಳಿಸಿದರು.
ಓದಿ: ಇದೆಂಥಾ ಅಚ್ಚರಿ!!.. ಮಂಗಳೂರು ಆಸ್ಪತ್ರೆಯಲ್ಲಿ ಸಾವು.. ಆ್ಯಂಬುಲನ್ಸ್ನಲ್ಲಿ ಸಾಗಿಸುವಾಗ ಕಣ್ಣುಬಿಟ್ಟ!
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ