ಮೈಸೂರು: ಇದು ಕೊಡಗಲ್ಲ, ಮೈಸೂರು. ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರಿಗೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದರು.
ಕಾರ್ಯಕ್ರಮವೊಂದರಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು 'ಟಿಪ್ಪುವಿನ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದವರನ್ನು ಕಂಡು ಥೂ, ಅಸಹ್ಯ ಅನಿಸುತ್ತಿತ್ತು' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮಣ್ ಅವರು, ಆರ್ಎಸ್ಎಸ್ ರಾಜಕೀಯ ಮಾಡುವುದಕ್ಕೆ ಇಲ್ಲಿಗೆ ಬರಬೇಡಿ, ರಂಗಾಯಣ ಸಾರ್ವಜನಿಕರ ಸ್ವತ್ತು ಎಂದು ಕಿಡಿಕಾರಿದರು.
ರಂಗಾಯಣಕ್ಕೆ ಯಾರೇ ನಿರ್ದೇಶಕರು ಬಂದರೂ ಇಲ್ಲಿನ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ರಾಜಕೀಯ ತರಬಾರದು, ಇದು ಕೊಡಗಲ್ಲ. ಮೈಸೂರು ಎಂದು ಆಕ್ರೋಶ ವ್ಯಕ್ತಪಡಿಸಿದರು.