ಮೈಸೂರು: ಅರಮನೆ ಸಾಕಾನೆಗಳನ್ನು ಗುಜರಾತ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಅರಮನೆ ಹಾಗೂ ಸರ್ಕಾರದ ನಡುವೆ ಪತ್ರ ವ್ಯವಹಾರ ನಡೆದಿದ್ದು, ಆನೆಗಳನ್ನ ಅರಮನೆಯಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯವು ಕೇಳಿ ಬಂದಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್, ಆನೆಗಳ ನಿರ್ವಹಣೆಗಾಗಿ ನಾವು ಪ್ರತಿ ತಿಂಗಳು ಅರಮನೆ ಆಡಳಿತ ಮಂಡಳಿಗೆ ಹಣ ಭರಿಸುತ್ತೇವೆ. ಇಲ್ಲವಾದರೆ ಭಿಕ್ಷೆ ಬೇಡಿ ಆನೆಗಳನ್ನು ಉಳಿಸಿಕೊಳ್ಳುತ್ತೇವೆ, ಆದರೆ ಗುಜರಾತ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.
ಸರ್ಕಾರ ಎಲ್ಲೆಲ್ಲೋ ದುಡ್ಡು ಚೆಲ್ಲುತ್ತೆ. ಅಂತಹ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ಅರಮನೆ ಆನೆಗಳನ್ನು ಅರಮನೆಯಲ್ಲಿಯೇ ಉಳಿಸಿಕೊಳ್ಳಲು ಮುಂದಾಗಬೇಕು. ಅರಮನೆಯಲ್ಲಿ ಆನೆಗಳಿದ್ದರೆ ಗೌರವ. ಇಲ್ಲಿನ ಆನೆಗಳನ್ನು ಬೇರೆ ರಾಜ್ಯಕ್ಕೆ ಕಳುಹಿಸುವ ನಿರ್ಧಾರ ಕೈ ಬಿಡಬೇಕು ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
(ಶೀಘ್ರದಲ್ಲಿ ಅರಮನೆ ಆನೆಗಳು ಗುಜರಾತ್ಗೆ ಶಿಫ್ಟ್ : ಡಿಸಿಎಫ್ ಕಾರಿಕಾಳನ್)