ಮೈಸೂರು : ಸ್ವಚ್ಛತೆಗೆ ಆದ್ಯತೆ ನೀಡಿ ಮತ್ತೆ ಸ್ವಚ್ಛ ನಗರಿ ಪ್ರಶಸ್ತಿ ಪಡೆಯಲು ಶ್ರಮಿಸುತ್ತೇನೆ ಎಂದು ಮೈಸೂರು ನೂತನ ಬಿಜೆಪಿ ಮೇಯರ್ ಸುನಂದಾ ಪಾಲನೇತ್ರ ಹೇಳಿದರು.
ಪಾಲಿಕೆಯ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಮೇಯರ್ ಸ್ಥಾನದಿಂದ ವಂಚಿತರಾಗಿ ಕಣ್ಣೀರಿಟ್ಟಿದ್ದು, ಈ ಬಾರಿ ಮೇಯರ್ ಆಗಿ ಆಯ್ಕೆಯಾಗಿರುವುದು ತುಂಬಾ ಸಂತೋಷ ತಂದಿದೆ. ನನ್ನನ್ನು ಮೇಯರ್ ಆಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರು ನಮಗೆ ಶಕ್ತಿ ತುಂಬಿದವರು. ಹಾಗಾಗಿ, ನಾಳೆ ಬಿಎಸ್ವೈ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾನು ಜಿಲ್ಲೆಯ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಸಾಂಸ್ಕೃತಿಕ ನಗರಿಗೆ ಸ್ವಚ್ಛನಗರಿ ಎಂಬ ಪಟ್ಟ ಪಡೆಯಲು ಶ್ರಮಿಸುತ್ತೇನೆ ಎಂದರು.
ಓದಿ: ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ.. ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿ