ETV Bharat / state

ಹುಕ್ಕಾ-ಬಾರ್ ನಲ್ಲಿ ಸಿಕ್ಕಿಬಿದ್ದ ಅಪ್ರಾಪ್ತರು: ಅಧಿಕಾರಿಗಳಿಗೆ ಶಾಕ್ - Shock to officers trapped in hookah bar in minors mysore

ದಾಳಿ ಮಾಡುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮತ್ತೊಂದು ಅಂಗಡಿ ಬಾಗಿಲು ಲಾಕ್ ಮಾಡಲಾಗಿತ್ತು. ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೇಯರ್ ಸುನಂದ ಫಾಲನೇತ್ರ, ಟೀನೇಜ್ ಮಕ್ಕಳು ಈ ದುಶ್ಚಟಕ್ಕೆ ಬಲಿಯಾಗಲು ಬಿಡುವುದಿಲ್ಲ. ಮಾಲೀಕರು ಹಾಗೂ ಜಾಗ ಬಾಡಿಗೆ ಕೊಟ್ಟವರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು ಹೇಳಿದ್ದಾರೆ.

Shock to officers trapped in hookah bar in minors mysore
ಹುಕ್ಕಾ ಬಾರ್ ನಲ್ಲಿ ಸಿಕ್ಕಿಬಿದ್ದ ಅಪ್ರಾಪ್ತರು, ಅಧಿಕಾರಿಗಳಿಗೆ ಶಾಕ್
author img

By

Published : Feb 23, 2022, 9:00 PM IST

ಮೈಸೂರು: ಹುಕ್ಕಾ ಬಾರ್‌ಗಳ ಮೇಲೆ ಮೈಸೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಆರೋಗ್ಯಾಧಿಕಾರಿ ತಂಡ ದಾಳಿ, ನಡೆಸಿ ಬಾರ್‌ಗಳಲ್ಲಿ ಇದ್ದ ಅಪ್ರಾಪ್ತರನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಹುಕ್ಕಾ ಬಾರ್ ನಲ್ಲಿ ಸಿಕ್ಕಿಬಿದ್ದ ಅಪ್ರಾಪ್ತರು, ಅಧಿಕಾರಿಗಳಿಗೆ ಶಾಕ್

ಮೈಸೂರು ನಗರದಲ್ಲಿ ಹುಕ್ಕಾ ಬಾರ್‌ಗಳ ತಲೆ ಎತ್ತುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ, ಮೇಯರ್ ಸುನಂದ ಫಾಲನೇತ್ರದಲ್ಲಿ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಆರೋಗ್ಯಾಧಿಕಾರಿ ತಂಡ ದಾಳಿ ನಡೆಸಿದಾಗ, ಅಪ್ರಾಪ್ತರು ಹುಕ್ಕಾ ಸೇದುತ್ತಾ ಕುಳಿತಿರುವುದನ್ನು ಕಂಡು, ಕ್ಷಣಕಾಲ ಅಧಿಕಾರಿಗಳು ದಂಗಾದರು.

ದಾಳಿ ವೇಳೆ ಬಹುತೇಕ 18 ವರ್ಷಕ್ಕೂ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳೇ ಇದ್ದದ್ದು ಅಚ್ಚರಿ ತಂದಿದೆ. ದಾಳಿ ವೇಳೆ ಅಧಿಕಾರಿಗಳು ಎಂದು ತಿಳಿಯದೇ ಮಕ್ಕಳು ಪ್ರಶ್ನಿಸಲು ಮುಂದಾಗಿದ್ದಾರೆ. ಆಗ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ.

ದಾಳಿ ಮಾಡುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮತ್ತೊಂದು ಅಂಗಡಿ ಬಾಗಿಲು ಲಾಕ್ ಮಾಡಲಾಗಿತ್ತು. ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೇಯರ್ ಸುನಂದ ಫಾಲನೇತ್ರ, ಟೀನೇಜ್ ಮಕ್ಕಳು ಈ ದುಶ್ಚಟಕ್ಕೆ ಬಲಿಯಾಗಲು ಬಿಡುವುದಿಲ್ಲ. ಮಾಲೀಕರು ಹಾಗೂ ಜಾಗ ಬಾಡಿಗೆ ಕೊಟ್ಟವರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಗೋವುಗಳ ಅಕ್ರಮ ಸಾಗಾಟ ಅಡ್ಡಿಪಡಿಸಿದವರ ಮೇಲೆ ಹಲ್ಲೆ, ಪೊಲೀಸರ ಲಾಠಿಚಾರ್ಜ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.