ಮೈಸೂರು: ಕಳೆದ 2 ವಾರದ ಹಿಂದೆ ಸೈಯದ್ ಇಸಾಕ್ ಎಂಬುವವರ ಸಾರ್ವಜನಿಕ ಉಚಿತ ಗ್ರಂಥಾಲಯವು ಮೈಸೂರಿನ ರಾಜೀವ್ ನಗರದಲ್ಲಿ ಬೆಂಕಿಯಲ್ಲಿ ಸುಟ್ಟು ಸಂಪೂರ್ಣ ಬೂದಿಯಾಗಿತ್ತು. ಇದೇ ಸಂದರ್ಭದಲ್ಲಿ ಹಲವು ಜನರು ಈ ಗ್ರಂಥಾಲಯ ನಿರ್ಮಾಣಕ್ಕೆ ಎಂದು ಸುಮಾರು 29 ಲಕ್ಷ ರೂ. ಹಣವನ್ನು ದಾನಿಗಳು ನೀಡಿದ್ದರು. ಆದರೆ, ಈಗ ಗ್ರಂಥಾಲಯ ನಿರ್ಮಾಣಕ್ಕೆ ಸರ್ಕಾರವೇ ಮುಂದಾಗಿರುವ ಕಾರಣ ದಾನಿಗಳು ನೀಡಿರುವ ಹಣ ವಾಪಸ್ ನೀಡುಲಾಗುವುದು ಎಂದು ಫತೇನ್ ಮೀಸ್ಬಾ ತಿಳಿಸಿದ್ದಾರೆ.
ಗ್ರಂಥಾಲಯವು ಸುಟ್ಟು ಹೋದ ಪರಿಣಾಮ, ಅದರ ಮರು ನಿರ್ಮಾಣಕ್ಕೆ ಎಂದು ಮೈಸೂರಿನ ಜನತೆ ಹಾಗೂ ಸೈಯದ್ ಇಸಾಕ್ ಅವರ ಅಭಿಪ್ರಾಯದ ನಡುವೆ ಫತೇನ್ ಮೀಸ್ಬಾ ಎಂಬುವವರು ಕೆಟ್ಟೊ ವೆಬ್ ತಾಣದಲ್ಲಿ ಕ್ರಾಡ್ ಫಂಡಿಂಗ್ ಒಂದು ಪ್ರತ್ಯೇಕ ಖಾತೆಯನ್ನು ತೆಗೆದಿದ್ದರು. ಈ ಮೂಲಕ ಗ್ರಂಥಾಲಯ ನಿರ್ಮಾಣಕ್ಕೆ ಹಣ ಸಂಗ್ರಹಣೆಯನ್ನು ದಾನಿಗಳ ಮೂಲಕ 29 ಲಕ್ಷ. ಹಣ ಸಂಗ್ರಹಿಸಲಾಗಿತ್ತು.
ಆದರೆ, ಈಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಮಹಾನಗರ ಪಾಲಿಕೆ ಹಾಗೂ ಗ್ರಂಥಾಲಯ ನಿರ್ದೇಶನಾಲವು ಗ್ರಂಥಾಲಯ ನಿರ್ಮಾಣ ಮಾಡಲು ಮುಂದಾಗಿದೆ. ಹೀಗಾಗಿ ಫತೇನ್ ಮೀಸ್ಬಾ ಅವರು ದಾನಿಗಳಿಂದ ಸಂಗ್ರಹವಾದ ಹಣವನ್ನು ವಾಪಸ್ ಮಾಡಲು ನಿರ್ಧರಿಸಿದ್ದಾಗಿ ತಮ್ಮ ಟ್ವಿಟರ್ನಲ್ಲಿ ತಿಳಿಸಿದ್ದಾರೆ.