ಮೈಸೂರು: ವಕೀಲರ ಸಂಘದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ವಕೀಲರ ಸಂಘ ಗಾಂಧಿ ಪ್ರತಿಮೆಯ ಮುಂದೆ ಇಂದು ಪ್ರತಿಭಟನೆ ನಡೆಸಿದೆ.
ಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದ ನಳಿನಿ ಪರ ವಕೀಲರ ಸಂಘ ವಕಾಲತ್ತು ವಹಿಸಲು ಹಿಂದೆ ಸರಿದಿತ್ತು. ಇದಕ್ಕೆ ಸಂಬಂಧಿಸಿದಂತೆ ನಿನ್ನೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮೈಸೂರು ಬಾರ್ ಕೌನ್ಸಿಲ್ ಈ ನಿರ್ಧಾರ ತೆಗೆದುಕೊಂಡಿರುವುದು ಉದ್ಧಟತನ. ಕೂಡಲೇ ಈ ಬಹಿಷ್ಕಾರವನ್ನು ವಾಪಸ್ ಪಡೆಯಬೇಕು ಎಂದಿದ್ದರು. ಅಲ್ಲದೇ ಮೈಸೂರು ವಕೀಲರ ಬಗ್ಗೆ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡಿಸಿ ಇಂದು ನ್ಯಾಯಲಯದ ಮುಂಭಾಗ ವಕೀಲರ ಸಂಘ ಪ್ರತಿಭಟನೆ ನಡೆಸಿತು.