ಮೈಸೂರು : ತರಕಾರಿ, ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋಗಲು ಹೆದರಿಕೆಯೇ?ಕೊರೊನಾ ಸೋಂಕು ಅಂಟಿಕೊಳ್ಳುವ ಭೀತಿಯೇ? ಹಾಗಿದ್ರೆ ಚಿಂತೆ ಮಾಡಬೇಡಿ, ಮೈಸೂರಿನ ಜನತೆಗೆ ಹಾಪ್‌ಕಾಮ್ಸ್ ಸಲ್ಯೂಷನ್ ಕೊಟ್ಟಿದೆ.
ಹಾಪ್ಕಾಮ್ಸ್ನಲ್ಲಿ ಆನ್ಲೈನ್ನಲ್ಲಿ ಬುಕ್ ಮಾಡಿದ್ರೆ ಸಾಕು ನಿಮ್ಮ ಮನೆಬಾಗಿಲಿಗೇ ಬರುತ್ತೆ ತಾಜಾ ತರಕಾರಿ, ಹಣ್ಣು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾಪ್‌ಕಾಮ್ಸ್ ಕೇಂದ್ರದಿಂದ ತರಕಾರಿ, ಹಣ್ಣು ಖರೀದಿಸಲು ಇನ್ಮುಂದೆ ಮಾರುಕಟ್ಟೆಗೆ ಹೋಗಬೇಕಾದ್ದಿಲ್ಲ. ಮಿನಿಮಮ್ 200 ರೂ. ಆರ್ಡರ್ ಮಾಡಿದ್ರೆ ಸಾಕು ನಿಮ್ಮ ಮನೆ ಬಾಗಿಲಿಗೆ ಹಣ್ಣು, ತರಕಾರಿ ಮಾರುಕಟ್ಟೆಗಿಂತಲೂ ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗಲಿದೆ.
ಇದಕ್ಕೆ ನೀವು ಮಾಡಬೇಕಾಗಿದ್ದು ಇಷ್ಟೇ.. : ಪ್ಲೇ ಸ್ಟೋರ್ಗೆ ಹೋಗಿ HOPCOMS online ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡ್ರೆ ಸಾಕು ಆರ್ಡರ್ ಬುಕ್ ಮಾಡಬಹುದಾಗಿದೆ. ಇಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ತರಕಾರಿ ಸಿಗಲಿದೆ. ತೋಟಗಾರಿಕೆ ಇಲಾಖೆ, ಹಾಪ್‌ಕಾಮ್ಸ್ ವತಿಯಿಂದ ನೂತನ ಯೋಜನೆ ಪ್ರಾರಂಭಿಸಲಾಗಿದ್ದು, ತರಕಾರಿ, ಹಣ್ಣು ಖರೀದಿಸಲು ಮಾರುಕಟ್ಟೆಗೆ ಹೋಗಲು ಹೆದರುತ್ತಿದ್ದವರಿಗೆ ನಿರಾಳವಾಗಿದೆ.
ಈಗಾಗಲೇ 1 ಸಾವಿರಕ್ಕೂ ಹೆಚ್ಚು ಗ್ರಾಹಕರು ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ರೈತರಿಗೂ ಸೂಕ್ತಬೆಲೆ, ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ತರಕಾರಿ, ಹಣ್ಣು ಸಿಗಲಿದೆ. ಕೊರೊನಾಗೆ ಸೆಡ್ಡು ಹೊಡೆದು ಗ್ರಾಹಕರಿಗೆ ಹಾಗೂ ರೈತರಿಗೆ ನೆರವಾಗುವ ದೃಷ್ಟಿಯಿಂದ ಹಾಪ್‌ಕಾಮ್ಸ್ ಆನ್ಲೈನ್ ಆ್ಯಪ್ ಮಾಡಲಾಗಿದೆ.