ETV Bharat / state

ಹಕ್ಕಿಜ್ವರ ತಡೆಗೆ ಮೈಸೂರು ಅರಣ್ಯ ಇಲಾಖೆಯಿಂದ ಅಲರ್ಟ್​​​ - ಮೈಸೂರಿನಲ್ಲಿನ ಕೆರೆ

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಎರಡು ಪಕ್ಷಿಗಳು ಮೃತಪಟ್ಟಿದ್ದವು. ಅವುಗಳ ಕಳೇಬರವನ್ನು ಬೆಂಗಳೂರು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಕ್ಷಿಗಳು ಹಕ್ಕಿಜ್ವರದಿಂದ ಮೃತಪಟ್ಟಿಲ್ಲವೆಂಬುದು ದೃಢವಾಗಿದೆ. ಮೈಸೂರಿನಲ್ಲಿನ ಕೆರೆಗಳಿಗೆ ಬರುವ ಪಕ್ಷಿಗಳ ಮೇಲೆ ನಿಗಾ ವಹಿಸಲಾಗಿದೆ.

Mysore Forest Department alert for Bird flu
ಹಕ್ಕಿಜ್ವರ ತಡೆಗೆ ಮೈಸೂರು ಅರಣ್ಯ ಇಲಾಖೆ ಅಲರ್ಟ್​​​
author img

By

Published : Jan 5, 2021, 3:36 PM IST

ಮೈಸೂರು: ಹಿಮಾಚಲಪ್ರದೇಶ, ಪಂಜಾಬ್, ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಗುಜರಾತ್, ರಾಜಸ್ಥಾನ ಸೇರಿದಂತೆ ರಾಜ್ಯಗಳಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ಮೈಸೂರಿನ ಅರಣ್ಯ ಇಲಾಖೆ ಅಲರ್ಟ್​​​ ಆಗಿದೆ.

ಮೈಸೂರಿನ ಅರಣ್ಯ ಭವನ ಕಚೇರಿಯಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರದ ಅರಣ್ಯ ಇಲಾಖೆ ಹಕ್ಕಿಜ್ವರದ ಬಗ್ಗೆ ಮಾರ್ಗದರ್ಶನ ಹಾಗೂ ನಿರ್ದೇಶನ ನೀಡಿದೆ. ಸತ್ತ ಹಕ್ಕಿಗಳ ಕಳೇಬರವನ್ನು ಮುಟ್ಟುವ ಮುನ್ನ ಸುರಕ್ಷತೆ ಕೈಗೊಳ್ಳುವಂತೆ ಸೂಚನೆ ನೀಡಿದೆ‌ ಎಂದರು.

ಹಕ್ಕಿಜ್ವರ ತಡೆಗೆ ಮೈಸೂರು ಅರಣ್ಯ ಇಲಾಖೆ ಅಲರ್ಟ್​​​

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಎರಡು ಪಕ್ಷಿಗಳು ಮೃತಪಟ್ಟಿದ್ದವು. ಅವುಗಳ ಕಳೇಬರವನ್ನು ಬೆಂಗಳೂರು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಕ್ಷಿಗಳು ಹಕ್ಕಿಜ್ವರದಿಂದ ಮೃತಪಟ್ಟಿಲ್ಲವೆಂದು ಹೇಳಲಾಗಿದೆ. ಮೈಸೂರಿನಲ್ಲಿನ ಕೆರೆಗಳಿಗೆ ಬರುವ ಪಕ್ಷಿಗಳ ಮೇಲೆ ನಿಗಾ ವಹಿಸಲಾಗಿದೆ. ಆ ದಿನದ ಅಪ್ಡೇಟ್​​​ಗಳನ್ನು ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

ರಂಗನತಿಟ್ಟು ಹಾಗೂ ಕೊಕ್ಕರೆ ಬೆಳ್ಳೂರಿನ ಪಕ್ಷಿ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮೃಗಾಲಯ ತೆರೆಯಬೇಕೋ ಅಥವಾ ಬೇಡವೋ ಎಂಬುವುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಭಾರತದಲ್ಲಿ ಮತ್ತೆ ಹಕ್ಕಿ ಜ್ವರ: ಇದು ಹೇಗೆ ಹರಡುತ್ತದೆ, ಮುಂಜಾಗ್ರತಾ ಕ್ರಮಗಳೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.