ETV Bharat / state

ಮಹಾ ಸಾಹಸ:  ಮಗನ ಔಷಧಕ್ಕಾಗಿ 300 ಕಿ.ಮೀ ಸೈಕಲ್ ಸವಾರಿ ಮಾಡಿದ ತಂದೆ..

ಸಕಾಲದಲ್ಲಿ ಯಾರೂ ನೆರವಿಗೆ ಬಾರದ ಕಾರಣ ಆನಂದ್ ತಮ್ಮ ಹಳೆಯ ಸೈಕಲ್​ನಲ್ಲಿಯೇ ತೆರಳಿ ಔಷಧ ತರಲು ನಿರ್ಧರಿಸಿ ಮೇ 23ರಂದು ಬನ್ನೂರು, ಮಳವಳ್ಳಿ, ಕನಕಪುರ ಮಾರ್ಗದ ಮೂಲಕ ಹೊರಟಿದ್ದಾರೆ. ಮಾರ್ಗಮಧ್ಯೆ ಲಾಕ್‌ಡೌನ್ ಇರುವ ಪರಿಣಾಮ ಪೊಲೀಸರ ಲಾಠಿ‌ ಏಟು ಸಹ ಬಿದ್ದರೂ ಜಗ್ಗದೇ ತನ್ನ ಮಗನಿಗಾಗಿ ಹಗಲು ರಾತ್ರಿ ಎನ್ನದೇ ಸೈಕಲ್​​ನಲ್ಲಿಯೇ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯನ್ನು ತಲುಪಿದ್ದಾರೆ.

Mysore
300 ಕಿ.ಮೀ ಕ್ರಮಿಸಿ ಔಷಧಿ ತರುವಲ್ಲಿ ಯಶಸ್ವಿಯಾದ ತಂದೆ
author img

By

Published : May 31, 2021, 2:52 PM IST

Updated : May 31, 2021, 10:11 PM IST

ಮೈಸೂರು: ಲಾಕ್‌ಡೌನ್ ನಿಂದ ಬಸ್ ಸಂಚಾರ ಇಲ್ಲದ ‌ಕಾರಣ‌ ಸ್ನೇಹಿತರ ಬೈಕ್‌ ಕೇಳಿದರೂ ಕೊಡಲಿಲ್ಲ. ಕೊನೆಗೆ ದಾರಿ ಕಾಣದೇ ತನ್ನ ಹಳೆಯ ಸೈಕಲ್‌ ಏರಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಗನಿಗೆ ಔಷಧ ತೆಗೆದುಕೊಂಡು ಪುನಃ ಗ್ರಾಮಕ್ಕೆ ಸೈಕಲ್​​ನಲ್ಲಿಯೇ ವಾಪಸ್ ಆಗಿದ್ದಾರೆ. ಸೈಕಲ್‌ನಲ್ಲಿ‌ಯೇ 300 ಕಿ.ಮೀ ಕ್ರಮಿಸಿ ಔಷಧ ತರುವಲ್ಲಿ ಯಶಸ್ವಿಯಾದ ತಂದೆಯ ಕತೆಯಿದು.

ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಗಾಣಿಗನ ಕೊಪ್ಪಲು ಗ್ರಾಮದ ನಿವಾಸಿ ಆನಂದ್ (45) ಇವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದಾರೆ‌. ಇವರಿಗೆ ಭೈರೇಶ್ ಎಂಬ ವಿಶೇಷ ಚೇತನ ಮಗನಿದ್ದಾನೆ. ಇವನು ಹುಟ್ಟಿದ 6 ತಿಂಗಳಿನಲ್ಲೇ ಮಗು ಮಾನಸಿಕ ವಿಶೇಷ ಚೇತನ ಎಂಬುವುದು ಕುಟುಂಬದವರಿಗೆ ತಿಳಿದಿದೆ. ಕಳೆದ 10 ವರ್ಷಗಳಿಂದ ಭೈರೇಶ್​​ಗೆ ಬೆಂಗಳೂರಿನ ನಿಮಾನ್ಸ್​​ನಲ್ಲಿ‌ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದು, ಔಷಧದಿಂದಲೇ ಮಗನ ಆರೋಗ್ಯ ಹತೋಟಿಯಲ್ಲಿರುತ್ತದೆ.

ಮಗನ ಔಷಧಕ್ಕಾಗಿ 300 ಕಿ.ಮೀ ಸೈಕಲ್ ಸವಾರಿ ಮಾಡಿದ ತಂದೆ

ಔಷಧಿ ಇಲ್ಲವಾದಲ್ಲಿ ಮಗನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಇದನ್ನರಿತಿದ್ದ ತಂದೆ ಆನಂದ್ ಪ್ರತಿ ಬಾರಿ ತಪ್ಪದೆ ಔಷಧಿಯನ್ನು ಬೆಂಗಳೂರಿನಿಂದ 2 ತಿಂಗಳಿಗಾಗುವಷ್ಟು ತರುತ್ತಿದ್ದರು. ಕ್ರಮೇಣ ಕೋವಿಡ್ ಹೆಚ್ಚಳದ ಪರಿಣಾಮ‌ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇತ್ತ ಮಗುವಿಗೆ ನೀಡುತ್ತಿದ್ದ ಔಷಧ ಮುಗಿಯುತ್ತಾ ಬಂದಿದೆ. ಹಾಗಾಗಿ ತಂದೆ ತನ್ನ ಸಂಬಂಧಿಕರು, ಸ್ನೇಹಿತರ ಮತ್ತು ಪರಿಚಯಸ್ಥರ ಸಹಾಯ ಕೇಳಿದ್ದಾರೆ.

ಆದರೆ, ಕೋವಿಡ್ ಪರಿಣಾಮ ಯಾರು ಸಹ ನೆರವಿಗೆ ಬಾರದ ಕಾರಣ ಆನಂದ್ ತನ್ನ ಮಗನಿಗೆ ಔಷಧ ತರಲು ತಮ್ಮ ಹಳೆಯ ಸೈಕಲ್​ನಲ್ಲಿಯೇ ತೆರಳಿ ಮೇ 23ರಂದು ಬನ್ನೂರು, ಮಳವಳ್ಳಿ, ಕನಕಪುರ ಮಾರ್ಗದ ಮೂಲಕ ಹೊರಟಿದ್ದಾರೆ. ಮಾರ್ಗದ ಮಧ್ಯೆ ಲಾಕ್‌ಡೌನ್ ಇರುವ ಪರಿಣಾಮ ಪೊಲೀಸರ ಲಾಠಿ‌ ಏಟು ಸಹ ಬಿದ್ದರೂ ಇದ್ಯಾವುದಕ್ಕೂ ಜಗ್ಗದೇ ತನ್ನ ಮಗನಿಗಾಗಿ ಹಗಲು ರಾತ್ರಿಯನ್ನದೆ ಸೈಕಲ್ ನಲ್ಲಿಯೇ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯನ್ನು ತಲುಪಿದ್ದಾರೆ.

ಯಾವು‍ದೇ ವಾಹನವಿಲ್ಲದೇ ಹಳೆಯ ಸೈಕಲ್‌ನಲ್ಲಿಯೇ ತನ್ನ ಗ್ರಾಮದಿಂದ ಬಂದಿರುವುದಾಗಿ ತಿಳಿದ ವೈದ್ಯರು ಆನಂದ್​​ಗೆ ಔಷಧದ ಜೊತೆಗೆ ಡಾಕ್ಟರ್ ಟೋನಿ 1000.ರೂ ಕೊಟ್ಟು ಜೋಪಾನವಾಗಿ ತನ್ನ ಗ್ರಾಮಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಅದರಂತೆ ಮೇ 25ಕ್ಕೆ ಬೆಂಗಳೂರಿನಿಂದ ಹೊರಟು ಮೇ 26ರ ಸಂಜೆ ತನ್ನ ಗ್ರಾಮಕ್ಕೆ ಹಿಂತಿರುಗಿದ್ದಾರೆ.

ತನ್ನ ಮಗನಿಗೆ ಔಷಧ ತರಲು ತಂದೆ ಆನಂದ್ ಸಾಹಸವನ್ನೇ ಮಾಡಿದ್ದಾರೆ. ಒಟ್ಟು 300.ಕಿ.ಮೀ ದೂರವನ್ನು ಸೈಕಲ್​ನಲ್ಲಿಯೇ ಕ್ರಮಿಸಿ ಔಷಧ ತರುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಮಗನ ಮುಖವನ್ನು ನೋಡಿ ನನ್ನ ಆಯಾಸ ಎಲ್ಲ ಮರೆತು ಹೋಯಿತು ಎಂದು ಈಟಿವಿ ಭಾರತಕ್ಕೆ ಆನಂದ್​ ದೂರವಾಣಿಯ ಮೂಲಕ ತಿಳಿಸಿದ್ದಾರೆ.

ಇಂದು ತಂದೆ- ತಾಯಿಯನ್ನು ಮಕ್ಕಳು ಸಾಕುವಲ್ಲಿ ಅಸಡ್ಡೆ ಮಾಡುತ್ತಾರೆ. ಆದರೆ, ತಂದೆ ತಾಯಿಗಳು‌ ಅವರು ಎಷ್ಟೇ ಕಡು ಬಡವರಾಗಿದ್ದರೂ ಸಹ ತಮ್ಮ ಮಕ್ಕಳಿಗೆ ಯಾವುದೇ ರೀತಿ ಕುಂದುಕೊರತೆಯಾಗದಂತೆ ಸಾಕುತ್ತಾರೆ.‌ ಒಬ್ಬ ವಿಶೇಷ ಚೇತನ ಮಗನನ್ನು ಸುರಕ್ಷಿತವಾಗಿ ಸಾಕುತ್ತಿರುವ ಆನಂದ್ ಎಲ್ಲಾ ಪೋಷಕರಿಗೆ ಮಾದರಿ‌ಯಾಗಬಲ್ಲರು.‌

ಇದನ್ನೂ ಓದಿ: ಅಧಿಕಾರಿಗಳೊಂದಿಗೆ ಚರ್ಚಿಸಿ ಲಾಕ್ಡೌನ್​ ವಿಸ್ತರಣೆ ಬಗ್ಗೆ ನಿರ್ಧಾರ : ಸಿಎಂ ಬಿಎಸ್​ವೈ

Last Updated : May 31, 2021, 10:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.