ETV Bharat / state

ಮೈಸೂರು ಪೊಲೀಸರ ಕಾರ್ಯ ರಾಜ್ಯಕ್ಕೆ ಮಾದರಿ:  ಬೊಮ್ಮಾಯಿ ಮೆಚ್ಚುಗೆ

ಕೊರೊನಾ ಹೋರಾಟದಲ್ಲಿ ಮೈಸೂರು ಜಿಲ್ಲಾ ಪೊಲೀಸರು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ ಅಷ್ಟೂ ನಿಯಮಗಳನ್ನು ಅನುಸರಿಸಿದ್ದಾರೆ. ಇದಕ್ಕೆ ನಾನು ಅಭಿನಂದನೆಯನ್ನು ಅರ್ಪಿಸುತ್ತೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

Basavaraja Bommai
ಬಸವರಾಜ ಬೊಮ್ಮಾಯಿ
author img

By

Published : May 22, 2020, 7:08 PM IST

ಮೈಸೂರು: ಕೊರೊನಾ ಹೋರಾಟದಲ್ಲಿ ಮೈಸೂರು ಜಿಲ್ಲೆಯ ಪಾತ್ರ ಮಹತ್ವದ್ದಾಗಿದೆ. ಇದಕ್ಕೆ ಜಿಲ್ಲೆಯ ಪೊಲೀಸರ ಕಾರ್ಯ ಮಹತ್ವದ್ದು, ರಾಜ್ಯಕ್ಕೆ ಇಲ್ಲಿನ ನಿರ್ವಹಣೆ ಮಾದರಿಯಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಜಿಲ್ಲಾ ಪೊಲೀಸರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪೊಲೀಸರ ಆರೋಗ್ಯ ಬಹಳ ಮುಖ್ಯ, ಹೀಗಾಗಿ ನೀವು ಆರೋಗ್ಯ ಕಾಪಾಡಿಕೊಳ್ಳಬೇಕು. ನಿಮಗೆ ಸಿಗಬೇಕಾದ ಸೌಲಭ್ಯವನ್ನು ನೀಡುವಂತೆ ನಾನೂ ಸಹ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ ಎಂದರು.

Mysore district police Model to the state in Corona fight: Basavaraja Bommai
ಜಿಲ್ಲಾ ಪೊಲೀಸರ ಪ್ರಗತಿ ಪರಿಶೀಲನೆ ಸಭೆ

ಜಿಲ್ಲಾ ಪೊಲೀಸರು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ ಅಷ್ಟೂ ನಿಯಮಗಳನ್ನು ಅನುಸರಿಸಿದ್ದಾರೆ. ಇದಕ್ಕೆ ನಾನು ಅಭಿನಂದನೆಯನ್ನು ಅರ್ಪಿಸುತ್ತೇನೆ. ವಲಸೆ ಕಾರ್ಮಿಕರನ್ನು ಇಲ್ಲಿಂದ ಕಳುಹಿಸುವುದರಿಂದ ಬೇರೆ ರಾಜ್ಯಗಳಿಂದ ಕರೆತರುವುದು ಸೇರಿ ಅವರನ್ನು ಪರೀಕ್ಷೆಗೊಳಪಡಿಸುವ ಕೆಲಸವನ್ನೂ ಪೊಲೀಸ್ ಇಲಾಖೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಬಂದ ಎಲ್ಲ ತಬ್ಲಿಘಿಗಳನ್ನು ಪತ್ತೆ ಹಚ್ಚಿದ ಏಕೈಕ ರಾಜ್ಯ ಕರ್ನಾಟಕ: ರಾಜ್ಯಕ್ಕೆ ಬಂದ ಎಲ್ಲ ತಬ್ಲಿಘಿಗಳನ್ನು ಗುರುತಿಸಿ ಅವರನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವ ಕೆಲಸವನ್ನು ಕರ್ನಾಟಕ ಪೊಲೀಸರು ಮಾಡಿದ್ದಾರೆ. ಜೊತೆಗೆ ಬೇರೆ ರಾಜ್ಯಗಳಲ್ಲಿರುವ ತಬ್ಲಿಘಿಗಳನ್ನು ಪತ್ತೆ ಹಚ್ಚಿ ಅವರ ಬಗ್ಗೆ ಆ ರಾಜ್ಯದವರಿಗೆ ದೂರವಾಣಿ ಸಂಖ್ಯೆ ಸಹಿತ ಮಾಹಿತಿಯನ್ನು ನೀಡಲಾಗಿದೆ. ಇಂತಹ ಕೆಲಸವನ್ನು ಮಾಡಿದ ಏಕೈಕ ರಾಜ್ಯ ಕರ್ನಾಟಕ ಎಂದು ತಿಳಿಸಿದರು.

ಈಗ ಕೆಲವು ಕಡೆ ಕ್ರೈಂಗಳು ಹೆಚ್ಚಿದ್ದರೂ ಅದನ್ನೂ ನಿರ್ವಹಿಸುವುದರ ಜೊತೆಗೆ ಕೊರೊನಾದಂತಹ ಪ್ರಕರಣಗಳಲ್ಲೂ ಯಶಸ್ವಿಯಾಗಿ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ. ಇಂತಹ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.