ETV Bharat / state

2022ರಲ್ಲಿ ಮೈಸೂರು ಜಿಲ್ಲೆಯ ಪ್ರಮುಖ ಘಟನಾವಳಿಗಳ ಸಂಕ್ಷಿಪ್ತ ಹಿನ್ನೋಟ - ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ 2022 ರ ಸಂಕ್ಷಿಪ್ತ ಹಿನ್ನೋಟ ಇಲ್ಲಿದೆ.

Mysore District events in 2022 in retrospect
2022ರ ಮೈಸೂರು ಜಿಲ್ಲೆಯ ಘಟನೆಗಳ ಹಿನ್ನೋಟ
author img

By

Published : Dec 30, 2022, 10:21 PM IST

ಮೈಸೂರು: ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮೈಸೂರು 2022ರಲ್ಲಿ ಹಲವು ವಿಚಾರಗಳಿಗೆ ಸುದ್ದಿಯಾಗಿದೆ. ಹಾಗಾಗಿ ಒಂದು ಬಾರಿ ಅವುಗಳೆಲ್ಲ ರಿವೈಂಡ್‌ ಮಾಡಿಕೊಂಡು ಬರೋಣ.

ಪವರ್ ಸ್ಟಾರ್​ಗೆ ಮರಣೋತ್ತರ ಗೌರವ ಡಾಕ್ಟರೇಟ್​: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾಗಿದ್ದು ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಅನ್ನು ಮೈಸೂರು ವಿಶ್ವ ವಿದ್ಯಾನಿಲಯ ನೀಡಿದ್ದು, ಈ ಗೌರವ ಡಾಕ್ಟರೇಟ್ ಅ​ನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸ್ವೀಕರಿಸಿದರು.

ಪ್ರಧಾನಿ ಭೇಟಿ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 21 ರಂದು ವಿಶ್ವ ಯೋಗ ದಿನದ ಸಲುವಾಗಿ ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಬಾರಿಯ ಅದ್ಧೂರಿ ದಸರಾ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಿದ್ದು ನಂತರ ಒಂಬತ್ತು ದಿನಗಳ ಕಾಲ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ಅರಮನೆ ಮುಂಭಾಗ ಹಾಗೂ ಶರನ್ನವರಾತ್ರಿಯ ಪೂಜೆಗಳು ಅರಮನೆಯ ಒಳಗೆ ರಾಜ ಪರಂಪರೆಯಂತೆ ನಡೆದಿದ್ದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನ ಖಚಿತ ಸಿಂಹಾಸನದಲ್ಲಿ ರಾಜ ಪರಂಪರೆಯಂತೆ ಖಾಸಗಿ ದರ್ಬಾರ್ ನಡೆಸಿದರು.

ಪಾರಂಪರಿಕ ಕಟ್ಟಡಗಳ ಕುಸಿತ: ಸತತವಾಗಿ ಮಳೆಯಿಂದ ಮೈಸೂರಿನ ಹಲವು ಕಡೆ ಪಾರಂಪರಿಕ ಕಟ್ಟಡಗಳು ಕುಸಿದು ಬಿದ್ದಿವೆ. ಪ್ರಮುಖವಾಗಿ ಅಂಬಾ ವಿಲಾಸ ಅರಮನೆಯ ಕೋಟೆಯ ಗೋಡೆ, ಮಹಾರಾಣಿ ಕಾಲೇಜಿನ ಲ್ಯಾಬ್ ಸೇರಿದಂತೆ ಹಲವು ಕಡೆ ಪಾರಂಪರಿಕ ಕಟ್ಟಡಗಳು ಕುಸಿದವು.

ದತ್ತಾತ್ರೇಯನ ಜನನ, ಗೋಪಾಲನ ಮರಣ: ದಸರಾದಲ್ಲಿ ಪಾಲ್ಗೊಳ್ಳಲು ಮೊದಲ ಹಂತದ ಗಜಪಡೆಯಲ್ಲಿ ಆಗಮಿಸಿದ ಲಕ್ಷ್ಮಿ ಎಂಬ ಹೆಣ್ಣು ಆನೆ ಗಂಡು ಮರಿಗೆ ಜನ್ಮ ನೀಡಿದ್ದು ಆ ಮರಿಗೆ ದತ್ತಾತ್ರೇಯ ಎಂಬ ಹೆಸರನ್ನು ಇಡಲಾಯಿತು. ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಾವಿ ಜಂಬೂ ಸವಾರಿಯ ಕ್ಯಾಪ್ಟನ್ ಎಂದು ಕರೆಯಲ್ಪಡುತ್ತಿದ್ದ ಗೋಪಾಲ ಸ್ವಾಮಿ ಆನೆ ಕಾಡಾನೆ ಶಿಬಿರದಲ್ಲಿ ಮರಣ ಹೊಂದಿತು.

ಕುಕ್ಕರ್​ ಸ್ಫೋಟ: ಮಂಗಳೂರಿನ ಆಟೋ ಕುಕ್ಕರ್​ ಸ್ಫೋಟದ ಪ್ರಕರಣದ ಶಂಕಿತ ಆರೋಪಿ ಮೈಸೂರಿನ ಮೇಟಗಳ್ಳಿ ವ್ಯಾಪ್ತಿಯಲ್ಲಿ ಬಾಡಿಗೆ ರೂಮ್ ಪಡೆದು ಕುಕ್ಕರ್‌ನಲ್ಲಿ ಬಾಂಬ್ ತಯಾರಿಕೆ ನಡೆಸಿದ್ದ ಆರೋಪ ಕೇಳಿ ಬಂದಿದ್ದು ಮೈಸೂರಿಗೆ ಮಂಗಳೂರು ಪೋಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ ಆಗಮಿಸಿ ತನಿಖೆ ಕೈಗೊಂಡಿತ್ತು.

ಟಿಪ್ಪು ಎಕ್ಸ್ ಪ್ರೆಸ್​ನ ಮರು ನಾಮಕರಣ: ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್ ಪ್ರೆಸ್ ಎಂದು ಹೆಸರು ಬದಲಾವಣೆ ಮಾಡಲಾಯಿತು. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಟಿಪ್ಪು ನಿಜ ಕನಸುಗಳು ಪುಸ್ತಕ ವಿವಾದ ಹಾಗೂ ಮೈಸೂರಿನಲ್ಲಿ ಬಸ್ ಸ್ಟ್ಯಾಂಡ್‌ಗೆ ಗುಮ್ಮಟ ಮಾದರಿ ವಿವಾದದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ನಡುವಿನ ಜಟಾಪಟಿ ವರ್ಷದ ಕೊನೆಯಲ್ಲಿ ಸುದ್ದಿ ಆದವು.

ಚಿರತೆ ದಾಳಿ: ಮುಖ್ಯವಾಗಿ ಮೈಸೂರಿನ ಟಿ ನರಸೀಪುರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆ ಹಾವಳಿಗೆ ಒಬ್ಬ ಯುವಕ ಮತ್ತು ಯುವತಿ ಬಲಿಯಾಗಿದ್ದರು.

ಇದನ್ನೂ ಓದಿ: ಡಿಸೆಂಬರ್ 31ರ ರಾತ್ರಿ 9 ಗಂಟೆಯ ನಂತರ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.