ETV Bharat / state

ರೈತರ ಬೆಳೆ ಖರೀದಿ ಕೇಂದ್ರಗಳು ನಿಗದಿತ ದಿನಕ್ಕೆ ಪ್ರಾರಂಭವಾಗಬೇಕು - ಕನಿಷ್ಠ ಬೆಂಬಲ ಬೆಲೆ ಯೋಜನೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ ಸಂಬಂಧ ಮೈಸೂರಿನಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಸಭೆ ನಡೆಸಿ, ಖರೀದಿ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದರು.

ಪೂರ್ಣಿಮಾ
author img

By

Published : Nov 6, 2019, 1:55 PM IST

ಮೈಸೂರು: ರೈತರ ಬೆಳೆ ಖರೀದಿಸುವ ಖರೀದಿ ಕೇಂದ್ರಗಳು ನಿಗದಿತ ದಿನಕ್ಕೆ ಪ್ರಾರಂಭವಾಗಬೇಕು. ಇದರಲ್ಲಿ ಗೊಂದಲವಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹೇಳಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಕೊಡಬಾರದು. ಅಂತಹ ಘಟನೆ ಕಂಡುಬಂದರೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು. ರೈತರಿಗೆ ಮಾರಾಟ ಮಾಡಲು ಖರೀದಿ ಕೇಂದ್ರಗಳಿಗೆ ಯಾವ ಯಾವ ದಾಖಲಾತಿ ನೀಡಬೇಕು ಹಾಗೂ ಯಾವ ಸಮಯದಲ್ಲಿ ಪ್ರಾರಂಭವಾಗಲಿದೆ ಮತ್ತು ಬೆಲೆ ನಿಗದಿ ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ರೈತರಿಗೆ ಮಾಹಿತಿ ನೀಡಬೇಕು ಎಂದರು.

mysore DC meeting for farmers crop
ಜಿಲ್ಲಾಧಿಕಾರಿ ಪೂರ್ಣಿಮಾ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಮಾತನಾಡಿ, ಸರ್ಕಾರವು ಈ ವರ್ಷದ ಕನಿಷ್ಠ ಬೆಂಬಲ ನಿಗದಿ ಮಾಡಿದ್ದು, ಅದರ ಪ್ರಕಾರ ರಾಗಿ ಕ್ವಿಂಟಾಲ್​ಗೆ 3150 ರೂ., ಸಾಮಾನ್ಯ ಭತ್ತ ಕ್ವಿಂಟಾಲ್​ಗೆ 1815 ರೂ. ಹಾಗೂ ಗ್ರೇಡ್ ಎ ಭತ್ತ ಕ್ವಿಂಟಾಲ್​ಗೆ 1835 ರೂ. ನಿಗದಿಯಾಗಿದೆ. ಇದರಲ್ಲಿ ಯಾವ ವ್ಯತ್ಯಾಸ ಆಗಬಾರದು ಹಾಗೂ ರೈತರು ತಮ್ಮ ಬೆಳೆಗಳನ್ನು 50 ಕೆಜಿಯ ಹೊಸ ಗೋಣಿ ಚೀಲಗಳಲ್ಲೇ ತರಬೇಕು. ಭತ್ತ ಮತ್ತು ರಾಗಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.

ಮೈಸೂರಿನಲ್ಲಿ ಬಂಡಿಪಾಳ್ಯ ಎಪಿಎಂಸಿ, ನಂಜನಗೂಡಿನಲ್ಲಿ ಬಿಳಿಗೆರೆ ಹಾಗೂ ನಂಜನಗೂಡು, ಟಿ.ನರಸೀಪುರದಲ್ಲಿ ಬನ್ನೂರು ಹಾಗೂ ಟಿ.ನರಸೀಪುರ, ಹುಣಸೂರಿನಲ್ಲಿ ರತ್ನಪುರಿ ಹಾಗೂ ಹುಣಸೂರು, ಕೆ.ಆರ್ ನಗರದಲ್ಲಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಹಾಗೂ ಹುಣಸೂರು ಎಪಿಎಂಸಿ, ಹೆಚ್.ಡಿ ಕೋಟೆಯಲ್ಲಿ ಸರಗೂರು ಮತ್ತು ಪಿರಿಯಾಪಟ್ಟಣದಲ್ಲಿ ಬೆಟ್ಟದಪುರ ಹಾಗೂ ಪಿರಿಯಾಪಟ್ಟಣ ಎಪಿಎಂಸಿಗಳಲ್ಲಿ ಭತ್ತ ಮತ್ತು ರಾಗಿ ಖರೀದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Intro:ಖರೀದಿ ಕೇಂದ್ರBody:ಮೈಸೂರು ನ.೫- ರೈತರ ಬೆಳೆ ಖರೀದಿಸುವ ಖರೀದಿ ಕೇಂದ್ರಗಳು ನಿಗಧಿತ ದಿನಕ್ಕೆ ಪ್ರಾರಂಭವಾಗಬೇಕು ಇದರಲ್ಲಿ ಗೊಂದಲವಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ ಸಂಬಂಧ ಸಭೆಯಲ್ಲಿ ಮಾತನಾಡಿದ ಅವರು ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಕೊಡಬಾರದು ಅಂತಹ ಘಟನೆ ಕಂಡುಬಂದರೆ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದು.ರೈತರಿಗೆ ಮಾರಾಟ ಮಾಡಲು ಖರೀದಿ ಕೇಂದ್ರಗಳಿಗೆ ಯಾವ ಯಾವ ದಾಖಲಾತಿ ನೀಡಬೇಕು ಹಾಗೂ ಯಾವ ಸಮಯದಲ್ಲಿ ಪ್ರಾರಂಭವಾಗಲಿದೆ ಮತ್ತು ಬೆಲೆ ನಿಗದಿ ಎಷ್ಟಿದೆ ಎಂಬುದನ್ನು ಸಂಪೂರ್ಣವಾಗಿ ರೈತರಿಗೆ ನೀಡಬೇಕು ಎಂದು ತಿಳಿಸಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಾದ ಪಿ.ಶಿವಣ್ಣ ಅವರು ಮಾತನಾಡಿ, ಸರ್ಕಾರವು ಈ ವರ್ಷದ ಕನಿಷ್ಠ ಬೆಂಬಲ ನಿಗಧಿ ಮಾಡಿದ್ದು ಅದರ ಪ್ರಕಾರ ರಾಗಿ ಕ್ವಿಂಟಾಲ್ ಗೆ ೩೧೫೦ ರೂ. ಸಾಮಾನ್ಯ ಭತ್ತ ಕ್ವಿಂಟಾಲ್ ೧೮೧೫ ರೂ. ಹಾಗೂ ಗ್ರೇಡ್ ಎ ಭತ್ತ ಕ್ವಿಂಟಾಲ್ ಗೆ ೧೮೩೫ ರೂ. ಗಳು ನಿಗದಿಯಾಗಿದೆ ಇದರಲ್ಲಿ ಯಾವ ವ್ಯತ್ಯಾಸ ಆಗಬಾರದು ಹಾಗೂ ರೈತರು ತಮ್ಮ ಬೆಳೆಗಳನ್ನು ೫೦ ಕೆ.ಜಿ ಯ ಹೊಸ ಗೋಣಿ ಚೀಲಗಳಲ್ಲೇ ತರಬೇಕು. ಭತ್ತ ಮತ್ತು ರಾಗಿ ಉತ್ತಮ ಗುಣಮಟ್ಟದಲ್ಲಿ ಕೂಡಿರಬೇಕು ಎಂದು ತಿಳಿಸಿದರು.
ಮೈಸೂರಿನಲ್ಲಿ ಬಂಡಿಪಾಳ್ಯ ಎಪಿಎಂಸಿ, ನಂಜನಗೂಡಿನಲ್ಲಿ ಬಿಳಿಗೆರೆ ಹಾಗೂ ನಂಜನಗೂಡು, ಟಿ.ನರಸೀಪುರದಲ್ಲಿ ಬನ್ನೂರು ಹಾಗೂ ಟಿ.ನರಸೀಪುರ, ಹುಣಸೂರಿನಲ್ಲಿ ರತ್ನಪುರಿ ಹಾಗೂ ಹುಣಸೂರು, ಕೆ.ಆರ್ ನಗರದಲ್ಲಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಹಾಗೂ ಹುಣಸೂರು ಎಪಿಎಂಸಿ, ಹೆಚ್.ಡಿ ಕೋಟೆಯಲ್ಲಿ ಸರಗೂರು ಮತ್ತು ಪಿರಿಯಾಪಟ್ಟಣದಲ್ಲಿ ಬೆಟ್ಟದಪುರ ಹಾಗೂ ಪಿರಿಯಾಪಟ್ಟಣ ಎಪಿಎಂಸಿಗಳಲ್ಲಿ ಭತ್ತ ಮತ್ತು ರಾಗಿ ಖರೀದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಖರೀದಿ ಏಜೆನ್ಸಿಯಾಗಿದ್ದು ಖರೀದಿ ಮಾಡಿದ ಒಂದು ವಾರದೊಳಗೆ ರೈತರಿಗೆ ಹಣ ಪಾವತಿ ಮಾಡಬೇಕಾಗಲಿದೆ ಹಾಗಾಗಿ ರೈತರ ಬ್ಯಾಂಕ್ ಮಾಹಿತಿ ಸಂಪೂರ್ಣವಾಗಿ ತೆಗೆದುಕೊಳ್ಳಬೇಕು. ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಮಾಡುವಾಗ ಆಧಾರ್ ಕಾರ್ಡ್, ಆರ್.ಟಿ. ಸಿ, ಬ್ಯಾಂಕ್ ಮಾಹಿತಿಯನ್ನು ಕೊಡಲಾಗುವ ಸಾಫ್ಟ್‌ವೇರ್ ಗೆ ಅಪ್ ಲೋಡ್ ಮಾಡಬೇಕು ಎಂದು ತಿಳಿಸಿದರು.
ಮಾರಾಟ ಮಾಡಲು ಬರುವ ರೈತರಿಗೆ ಖರೀದಿ ಕೇಂದ್ರಗಳಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಹಾಗೂ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಡಲು ಎಪಿಎಂಸಿ ಕ್ರಮವಹಿಸಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಮಹಾಂತೇಶಪ, ಎಫ್.ಸಿ.ಐ ಏರಿಯಾ ಮ್ಯಾನೇಜರ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ರೀಜಿನಲ್ ಮ್ಯಾನೇಜರ್  ಹಾಗೂ ಎಪಿಎಂಸಿ ಅಧಿಕಾರಿಗಳು ಉಪಸ್ಥಿತರಿದ್ದರು.Conclusion:ಖರೀದಿ ಕೇಂದ್ರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.