ETV Bharat / state

ಈವರೆಗೆ 12 ಬಾರಿ ಅಡಚಣೆ ಎದುರಿಸಿದ ಮೈಸೂರು ದಸರಾ ಮಹೋತ್ಸವ; ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಇತಿಹಾಸವೇ ಬೇರೆ - Mysore Dasara Mahotsav News

ವಿಶ್ವವಿಖ್ಯಾತ ದಸರಾ ಮಹೋತ್ಸವವು 1970ರಿಂದ ಇಲ್ಲಿಯವರೆಗೂ 12 ಬಾರಿ ಅಡಚಣೆ ಎದುರಿಸಿದೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 44 ವರ್ಷಗಳ ಕಾಲ ದಸರಾ ಮಹೋತ್ಸವವನ್ನು ಯಾವುದೇ ಅಡೆತಡೆ ಇಲ್ಲದೇ ನೆರವೇರಿಸಿದ್ದಾರೆ ಅನ್ನೋದನ್ನು ಯಾರೂ ಮರೆಯುವಂತಿಲ್ಲ.

Mysore Dasara Mahotsav;  History of Nalwadi Krishnaraja Wadiyar
ನಾಲ್ವಡಿ ಕೃಷ್ಣರಾಜ ಒಡೆಯರ್
author img

By

Published : Oct 24, 2020, 6:55 PM IST

ಮೈಸೂರು: ಇವತ್ತು ಮೈಸೂರು ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಹಲವು ವಿಶೇಷತೆಗಳಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ಅದಕ್ಕೆ ದೀರ್ಘಕಾಲದವರೆಗೆ ಆಡಳಿತ ಮಾಡಿದ ಮಹಾರಾಜರು ಕಾರಣಕರ್ತರಾಗುತ್ತಾರೆ. ಈ ಸಾಲಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹ ಸೇರುತ್ತಾರೆ.

Mysore Dasara Mahotsav;  History of Nalwadi Krishnaraja Wadiyar
ನಾಲ್ವಡಿ ಕೃಷ್ಣರಾಜ ಒಡೆಯರ್

ವಿಶ್ವವಿಖ್ಯಾತ ದಸರಾ ಮಹೋತ್ಸವ ಇದ್ದುದರಿಂದ ಅಂತಹ ರಾಜ ಮಹಾರಾಜರನ್ನು ನೆನೆಯುವುದಕ್ಕೆ ಇದೊಂದು ಸಕಾಲ. ಇನ್ನು ಅನಿರೀಕ್ಷಿತವಾಗಿ ಕೂಡಿಬಂದ ಎಷ್ಟೋ ಸಮಸ್ಯೆಗಳಿಂದ ಎಷ್ಟೋ ಸಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಿಕೊಂಡು ಬರಲಾಗಿದೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಡಳಿತಾವಧಿಯಲ್ಲಿ ಇಂತಹ ಸರಳತೆಗೆ ಎಲ್ಲಿ ಅವಕಾಶ ಮಾಡಿಕೊಟ್ಟಿಲ್ಲ ಅನ್ನೋದನ್ನು ಈಗ ನೆನೆಪು ಮಾಡಿಕೊಳ್ಳಬೇಕು.

ವಿಶ್ವವಿಖ್ಯಾತ ದಸರಾ ಮಹೋತ್ಸವವು 1970ರಿಂದ ಇಲ್ಲಿಯವರೆಗೂ 12 ಬಾರಿ ಅಡಚಣೆ ಎದುರಿಸಿದೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 44 ವರ್ಷಗಳ ಕಾಲ ದಸರಾ ಮಹೋತ್ಸವವನ್ನು ಯಾವುದೇ ಅಡೆತಡೆ ಇಲ್ಲದೇ ನೆರವೇರಿಸಿದ್ದಾರೆ ಅನ್ನೋದನ್ನು ಯಾರೂ ಮರೆಯುವಂತಿಲ್ಲ.

Mysore Dasara Mahotsav;  History of Nalwadi Krishnaraja Wadiyar
ನಾಲ್ವಡಿ ಕೃಷ್ಣರಾಜ ಒಡೆಯರ್

ಹೌದು, ಕೊರೊನಾ ಹಾವಳಿ‌ಯಿಂದ ಈ ಸಾರಿ ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಿರುವುದು ತಮಗೆಲ್ಲ ತಿಳಿದಿದೆ. ಸ್ವಲ್ಪ ಹಿಂದಕ್ಕೆ ಹೋದರೆ, ಅಂದರೆ, ಡಾ.ರಾಜ್​ಕುಮಾರ್ ಅಪಹರಣವಾದಾಗ, ಬರಗಾಲ ಬಂದಾಗಲೂ‌ ಕೂಡ ಸರಳವಾಗಿಯೇ ದಸರಾ ನಡೆದಿದೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಅವಧಿಯಲ್ಲಿ ಯಾವುದೇ ತೊಂದರೆ ಇಲ್ಲದೆ ಸತತ 44 ವರ್ಷಗಳ ಕಾಲ ನಿರಂತರ ಅದ್ಧೂರಿ ದಸರಾ ಆಚರಿಸಿದ್ದಾರೆ.

1970 ರಿಂದ ಈಚೆಗೆ 12ಕ್ಕೂ ಹೆಚ್ಚು ಬಾರಿ ದಸರಾದಲ್ಲಿ ಸಂಕಷ್ಟಗಳನ್ನು ಎದುರಿಸಲಾಗಿದೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 44 ವರ್ಷಗಳ ಕಾಲ ಒಮ್ಮೆಯೂ ಬರ, ರೋಗ-ರುಜಿನ ಕಾಣದೆ ಅದ್ಧೂರಿಯಾಗಿ ದಸರಾ ಜರುಗಿದೆ.

ನಾಲ್ಕು ದಶಕಗಳ ಅದ್ಧೂರಿ ಹಾಗೂ ವೈಭವದ ದಸರಾ ಆಚರಿಸುವ ಮೂಲಕ ಎಲ್ಲೆಡೆ ಪರಂಪರೆಯನ್ನ ಪಸರಿಸಿದ್ದರು. ನಾಲ್ವಡಿಯವರ ಕಾಲದಲ್ಲಿ ಅದ್ಧೂರಿಯ ಜಂಬೂ ಸವಾರಿ ಮೆರವಣಿಗೆ ನೋಡಲು ನಾಡಿನಾದ್ಯಂತ ಸಾವಿರಾರು ಜನ ಬರುತ್ತಿದ್ದರು. 10ನೇ ವರ್ಷಕ್ಕೆ ಪಟ್ಟಕ್ಕೇರಿದ್ದ ಪುಟ್ಟ ನಾಲ್ವಡಿಯವರ ಆಳ್ವಿಕೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಜೆಗಳಿಗಾಗಿ ಪ್ರಜಾಡಳಿತ ನೀಡಿದ್ದರು. ಮೈಸೂರಿನ ಪಾರಂಪರಿಕ ತಜ್ಞರಾದ ಈಚನೂರು ಕುಮಾರ್ ಅವರು, ನಾಲ್ವಡಿ ಅವರ ಗೋಲ್ಡನ್ ಇರಾ ನೆನಪು ಮಾಡಿಕೊಂಡಿದ್ದು ಹೀಗೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.