ETV Bharat / state

ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್ - ವಿಕ್ರಮಾದಿತ್ಯ ಸಿಂಹಾಸನ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗುತ್ತಿದ್ದಂತೆ ನಗರದ ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಹಾಗೂ ರಾಜವಂಶಸ್ಥರ ಖಾಸಗಿ ದರ್ಬಾರ್‌ಗೆ ಚಾಲನೆ ನೀಡಲಾಗಿದೆ.

ಮೈಸೂರು ದಸರಾ ಮಹೋತ್ಸವ
author img

By

Published : Sep 29, 2019, 5:24 PM IST

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗುತ್ತಿದ್ದಂತೆ ನಗರದ ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್‌ಗೆ ಚಾಲನೆ ನೀಡಲಾಗಿದೆ.

ರಾಜವಂಶಸ್ಥ ಯದುವೀರ್ ಅವರಿಂದ ಖಾಸಗಿ ದರ್ಬಾರ್
ಇಂದು ಬೆಳಿಗ್ಗೆ ಖಾಸಗಿ ದರ್ಬಾರ್‌ನಲ್ಲಿ ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ, ಮಲೈ ಮಹದೇಶ್ವರ ದೇವಸ್ಥಾನ, ಚಾಮುಂಡಿ ಬೆಟ್ಟದ ದೇವಸ್ಥಾನ ಸೇರಿದಂತೆ ಪ್ರಮುಖ ಏಳು ದೇವಸ್ಥಾನಗಳ ತೀರ್ಥ ಪ್ರಸಾದ ಸ್ವೀಕರಿಸಿದ್ರು. ದೇಶದ ಸಪ್ತ ನದಿಗಳ ತೀರ್ಥ ಸ್ವೀಕರಿಸಿ ಸಿಂಹಾಸನಕ್ಕೆ ಪ್ರೋಕ್ಷಣೆ ಮಾಡಿ ರತ್ನಖಚಿತ ಸಿಂಹಾಸವನ್ನೇರಿದ್ರು.

ಯದುವೀರ್ ಒಡಯರ್‌ ಸಿಂಹಾಸವೇರುತ್ತಿದ್ದಂತೆ ಜೈಕಾರಗಳು ಮೊಳಗಿದ್ವು. ಈ ವೇಳೆ ನಾಡಿನಲ್ಲಿ ಸಮೃದ್ಧ ಮಳೆ, ಬೆಳೆಯನ್ನು ತಾಯಿ ಚಾಮುಂಡೇಶ್ವರಿ ಕರುಣಿಸಲೆಂದು ಅವರು ಪ್ರಾರ್ಥಿಸಿದ್ರು.

ರಾಜವಂಶಸ್ಥರು ಅರಮನೆಯ ತಮ್ಮ ಖಾಸಗಿ ನಿವಾಸದಲ್ಲಿ ದರ್ಬಾರ್‌ ನಡೆಸುವ ಪದ್ದತಿ ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ.

Intro:ದಸರಾBody:29.9.2019

ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗುತ್ತಿದ್ದಂತೆ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲೂ ಸಹ ಧಾರ್ಮಿಕ ಪೂಜಾ ಕೈಂಕರ್ಯ ಹಾಗೂ ದರ್ಬಾರ್ಗೂ ಚಾಲನೆ ನೀಡಲಾಗಿದೆ

ಇಂದು ಬೆಳಿಗ್ಗೆ ಖಾಸಗಿ ದರ್ಬಾರ್ ನಲ್ಲಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರು ಚಾಮರಾಜನಗರ ಮೈಸೂರು ಸೇರಿದಂತೆ ವಿವಿಧ ಪ್ರಮುಖ ದೇವಾಲಯಗಳ ತೀರ್ಥ ಪ್ರಸಾದ ಸ್ವೀಕರಿಸಿ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ, ಮಲೈ ಮಹದೇಶ್ವರ ದೇವಸ್ಥಾನ, ಚಾಮುಂಡಿ ಬೆಟ್ಟದ ದೇವಸ್ಥಾನ ಸೇರಿದಂತೆ ಪ್ರಮುಖ ಏಳು ದೇವಸ್ಥಾನ ಗಳ ತೀರ್ಥ ಪ್ರಸಾದ ಸ್ವೀಕರಿಸಿದ ಯದುವೀರ್.ದೇಶದ ಸಪ್ತ ನದಿಗಳ ತೀರ್ಥ ಸ್ವೀಕರಿಸಿ ಸಿಂಹಾಸನಕ್ಕೆ ಪ್ರೋಕ್ಷಣೆ ಮಾಡಿ ಸಿಂಹಾಸನವೇರಿದರು
ಬಳಿಕ ಜೈಕಾರದ ಘೋಷಣೆ ಮೊಳಗಿತು ನಾಡಿನ ಜನತೆಗೆ ಮಳೆ ಬೆಳೆ ಸಮೃದ್ಧಿ ಯನ್ನ ಆ ತಾಯಿ ಚಾಮುಂಡೇಶ್ವರಿ ತಂದುಕೊಡಲೆಂದು ಪ್ರಾರ್ಥನೆ ಮಾಡಿ ವಿಕ್ರಮಾದಿತ್ಯ ಸಿಂಹಾಸನವೇರಿ ನಾಡಿನ ಜನತೆಗೆ ಶುಭ ಕೋರಿದರು
ನಾಡಿನ ಕಲೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಖಾಸಗಿ ದರ್ಬಾರ್ ಗತಕಾಲದ ವೈಭವತೆ ಮರುಕಳಿಸುವಂತಿತ್ತುConclusion:ದಸರಾ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.