ETV Bharat / state

ಪೊಲೀಸ್​ ಇಲಾಖೆ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು: ಆತಂಕದಲ್ಲಿ ಕುಟುಂಬಗಳು

ಬುಧವಾರ ಮೈಸೂರಿನಲ್ಲಿ 51 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 21 ಮಂದಿ ಕೆಎಸ್​ಆರ್​ಪಿ ಪೊಲೀಸರು ಎಂಬ ಸುದ್ದಿ ಈಗ ಪೊಲೀಸರು ಹಾಗೂ ಅವರ ಕುಟುಂಬಸ್ಥರಿಗೆ ಆತಂಕ ಉಂಟು ಮಾಡಿದೆ.

corona Increasing  in police Staff
ಪೊಲೀಸ್​ ಸಿಬ್ಬಂದಿಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು: ಆತಂಕದಲ್ಲಿ ಕುಟುಂಬಗಳು
author img

By

Published : Jul 2, 2020, 12:18 PM IST

ಮೈಸೂರು: ಕೊರೊನಾ ವಾರಿಯರ್ಸ್​ ಆಗಿರುವ ಪೊಲೀಸರಿಗೆ ಕೊರೊನಾ ಸೋಂಕು ವಕ್ಕರಿಸುತ್ತಿದೆ. ಪ್ರತಿದಿನ ಒಂದೊಂದು ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗುತ್ತಿರುವುದು ಸಿಬ್ಬಂದಿಯಲ್ಲಿ ಭಯ ಉಂಟು ಮಾಡಿದೆ.

ಪೊಲೀಸ್​ ಸಿಬ್ಬಂದಿಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು: ಆತಂಕದಲ್ಲಿ ಕುಟುಂಬಗಳು
ಬುಧವಾರ ಒಂದೇ ದಿನ ಮೈಸರು ಜಿಲ್ಲೆಯಲ್ಲಿ 51 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 21 ಮಂದಿ ಕೆಎಸ್​ಆರ್​ಪಿ ಪೊಲೀಸರು ಎಂಬ ಸುದ್ದಿ ಈಗ ಪೊಲೀಸರು ಹಾಗೂ ಅವರ ಕುಟುಂಬದವರಿಗೆ ಆತಂಕವನ್ನುಂಟು ಮಾಡಿದೆ. ಮೈಸೂರಿನ 75 ಜನ ಕೆಎಸ್​ಆರ್​ಪಿ ಪೊಲೀಸರು ಬೆಂಗಳೂರಿನ ಪಾದರಾಯನಪುರಕ್ಕೆ ಕರ್ತವ್ಯ ನಿರ್ವಹಿಸಲು ಹೋಗಿದ್ದಾಗ ಈ ಸೋಂಕು ಹರಡಿದೆ. ಕಳೆದ ವಾರ 17 ಜನ ಕೆಎಸ್​ಆರ್​ಪಿ ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು, ಬುಧವಾರ 21 ಜನರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ವಾಸವಿರುವ ಪೊಲೀಸ್​ ಕ್ವಾಟ್ರಸ್​ಗಳ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ.
ಪೊಲೀಸ್​ ಠಾಣೆಗಳೇ ಸೀಲ್ ಡೌನ್: ಜಿಲ್ಲೆಯಲ್ಲಿ ಮೈಸೂರು ನಗರವನ್ನು ಬಿಟ್ಟರೆ ತಾಲೂಕು ಕೇಂದ್ರಗಳಲ್ಲಿರುವ ನಂಜನಗೂಡಿನ ಡಿವೈಎಸ್​ಪಿ ಕಚೇರಿ, ಗ್ರಾಮಾಂತರ ಪೊಲೀಸ್​ ಠಾಣೆ, ತಿ.ನರಸೀಪುರದ ಪೊಲೀಸ್​ ಠಾಣೆ, ನಿನ್ನೆ ರಾತ್ರಿ ಹೆಚ್.ಡಿ. ಕೋಟೆಯ ಸರ್ಕಲ್ ಇನ್ಸ್‌ಪೆಕ್ಟರ್​ಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಠಾಣೆಯನ್ನೇ ಸೀಲ್ ಡೌನ್ ಮಾಡಲಾಗಿದೆ. ಪೊಲೀಸ್ ​ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀರಿಗೆ ಈಗ ಭಯ ಶುರುವಾಗಿದ್ದು, ಕುಟುಂಬದವರಿಗೂ ಸಹ ಆ ಆತಂಕ ಕಾಡುತ್ತಿದೆ. ಪ್ರತಿ ಠಾಣೆಯಲ್ಲೂ ಮುನ್ನೆಚ್ಚರಿಕೆ ವಹಿಸಿದ್ದರೂ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ ಕರೆತರಲು ಸಹ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. 55 ವರ್ಷ ಮೇಲ್ಪಟ್ಟ ಪೊಲೀಸರಿಗೆ ಠಾಣೆಗಳಲ್ಲೇ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ.
ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದೆ: ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 51 ಮಂದಿಗೆ ಸೋಂಕು ದೃಢಪಟ್ಟಿದ್ದು, ಕಳೆದ 3 ತಿಂಗಳಿನಿಂದ ಬರುತ್ತಿರುವ ಪ್ರಕರಣಗಳಲ್ಲೇ ಹೆಚ್ಚು ಕೇಸ್​ಗಳು ಕಂಡುಬಂತಾಗಿ ಎನ್ನಲಾಗಿದೆ. ನಿನ್ನೆಯವರೆಗೆ 3 ಜನ ಸೋಂಕಿನಿಂದ ಮೃತಪಟ್ಟಿದ್ದರೆ, ಇಂದು ಮತ್ತೊಬ್ಬ ಮೃತಪಟ್ಟಿರುವುದು ವರದಿಯಾಗಿದೆ. ಅಧಿಕೃತವಾಗಿ ಜಿಲ್ಲಾಧಿಕಾರಿಗಳು ಘೋಷಣೆ ಮಾಡುವುದಷ್ಟೇ ಬಾಕಿಯಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 321 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 191 ಮಂದಿ ಗುಣಮುಖರಾಗಿದ್ದು, 127 ಸಕ್ರಿಯ ಪ್ರಕರಣಗಳಿವೆ.
ಒಟ್ಟು 2,772 ಮಂದಿಯನ್ನು14 ದಿನಗಳ ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, 121 ಮಂದಿಯನ್ನು 7 ದಿನಗಳ ಫೆಸಿಲಿಟಿ ಕ್ವಾರಂಟೈನ್ ಮಾಡಲಾಗಿದೆ‌. ಇದರ ಜೊತೆಗೆ ಬೆಂಗಳೂರು ಹಾಗೂ ಮಹಾರಾಷ್ಟ್ರ, ತಮಿಳುನಾಡು ಭಾಗದಿಂದ ಬಂದ ಜನರಿಂದ ಸೋಂಕು ಹರಡುತ್ತಿದೆ. ಇದರಿಂದ ಗ್ರಾಮಾಂತರ ಪ್ರದೇಶಗಳಿಗೂ ಕೊರೊನಾ ಸೋಂಕು ಹರಡುತ್ತಿರುವುದು ಗ್ರಾಮೀಣ ಜನರ ನಿದದ್ದೆಗೆಡಿಸಿದೆ.

ಈ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ನಗರ ಪ್ರದೇಶದಲ್ಲಿ ಮಾಸ್ಕ್ ಇಲ್ಲದವರಿಗೆ 200 ರೂಪಾಯಿ ದಂಡ, ಗ್ರಾಮಾಂತರ ಪ್ರದೇಶಗಳಲ್ಲಿ ಮಾಸ್ಕ್ ಇಲ್ಲದವರಿಗೆ 100 ದಂಡ ವಿಧಿಸಲು ತೀರ್ಮಾನಿಸಲಾಗಿದೆ. ನಾಳೆಯಿಂದ ಜಿಲ್ಲೆಯಲ್ಲಿ 6 ಗಂಟೆಗೆ ಎಲ್ಲಾ ವ್ಯವಹಾರವನ್ನು ಬಂದ್ ಮಾಡಲು ಆದೇಶಿಸಿದ್ದು, ಸಂಜೆ 6 ಗಂಟೆಯಿಂದಲೇ ನಿರ್ಬಂಧ ವಿಧಿಸಲಾಗುತ್ತಿದೆ.
ಒಟ್ಟಾರೆ ಜಿಲ್ಲೆಯಲ್ಲಿ 2ನೇ ಹಂತದ ಕೊಕೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಜನಸಾಮಾನ್ಯರ ಜೊತೆಗೆ ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರಿಗೂ ಹರಡುತ್ತಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.