ಮೈಸೂರು : ಪಾಲಿಕೆ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಲು 'ಮೈ ಕ್ಲೀನ್ ಸಿಟಿ' ಆ್ಯಪ್‌ನ ಮೇಯರ್ ತಸ್ನೀಂ ಅವರು ಬಿಡುಗಡೆ ಮಾಡಿದರು.
ಈ ಆ್ಯಪ್‌ನಲ್ಲೇನಿದೆ!?: ಗುಂಡಿ ಬಿದ್ದಿರುವ ರಸ್ತೆ, ಘನತ್ಯಾಜ್ಯ ವಿಲೇವಾರಿ, ಬೀದಿ ದೀಪ ಸಮಸ್ಯೆ, ಯುಜಿಡಿ, ಕುಡಿಯುವ ನೀರಿನ ಪೈಪ್ಲೈನ್ ದುರಸ್ಥಿ, ಫುಟ್‌ಪಾತ್ ಅಥವಾ ಪಾಲಿಕೆ ಆಸ್ತಿ ವಿವಾದ, ಒತ್ತುವರಿ, ಪ್ರಾಣಿಗಳ ಹಾವಳಿ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತು ದೂರುಗಳಿದ್ರೆ, ಸಾರ್ವಜನಿಕರು ತಾವಿದ್ದ ಸ್ಥಳದಲ್ಲಿಯೇ ಆ್ಯಪ್ಗೆ ಸ್ಕ್ಯಾನ್ ಮಾಡಿದರೆ ಮಾಹಿತಿ ತೋರಿಸಲಿದೆ. ಅದರಲ್ಲಿ ಸಮಸ್ಯೆಗಳನ್ನು ಹಾಕಿದ 6 ಗಂಟೆಯೊಳಗೆ ಪರಿಹಾರ ಸಿಗಲಿದೆ.
ಮೈ ಕ್ಲೀನ್ ಸಿಟಿ ಆ್ಯಪ್ನಲ್ಲಿ ನಾಗರಿಕರು ದಾಖಲಿಸುವ ದೂರನ್ನು ಸಂಬಂಧಿಸಿದ ಇಲಾಖೆ, ವಿಭಾಗದ ಅಧಿಕಾರಿಗಳು ಪರಿಶೀಲಿಸಿ ನಂತರ ವಾಡ್೯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು. ಆದರೆ, ಈಗ ನೇರವಾಗಿ ವಾಡ್೯ ಅಧಿಕಾರಿಗೆ ಸಮಸ್ಯೆಗಳು ತಲುಪಲಿವೆ. ನಗರ ಪಾಲಿಕೆಯ 9 ವಲಯಗಳ ವ್ಯಾಪ್ತಿಯ 65 ವಾಡ್೯ಗಳಲ್ಲಿ ಗಡಿ ಗುರುತಿಸಲಾಗಿದೆ. ಯಾವ ವಾಡ್೯ನಿಂದ ದೂರು ಬಂದಿದೆ ಎಂಬುದು ನಿಖರವಾಗಿ ತೋರಿಸಲಿದೆ. ಸ್ವಯಂ ಚಾಲಿತ ವರ್ಚುವಲ್ ಕಂಟ್ರೋಲ್ ರೂಂ ಮಾದರಿಯಲ್ಲಿ ಈ ಆ್ಯಪ್ ಕೆಲಸ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.