ಮೈಸೂರು: ಹಾಡಹಗಲೇ ಚಿರತೆ ದಾಳಿಗೆ ಕರು ಬಲಿಯಾಗಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ನೇರಳೆ ಹೊಸೂರು ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ನೇರಳೆ ಹೊಸೂರು ಗ್ರಾಮದ ರೈತ ಮಹೇಶ್ ಎಂಬುವರಿಗೆ ಸೇರಿದ ಕರು ಹೊಲದಲ್ಲಿ ಮೇಯುತ್ತಿರುವಾಗ ಹಾಡಹಗಲೇ ದಾಳಿ ಮಾಡಿದ ಚಿರತೆ ಕರುವನ್ನು ಬಲಿ ಪಡೆದಿದೆ. ಕಾಡಂಚಿನ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಬಳಿಕ ಚಿರತೆ ಸೆರೆಗೆ ಬೋನ್ ಇಡಲು ತೀರ್ಮಾನಿಸಿದ್ದಾರೆ.