ETV Bharat / state

ಅಂಬಾ ವಿಲಾಸ ಅರಮನೆ, 9 ದೇಗುಲಗಳ ದರ್ಶನಕ್ಕೆ ಭಕ್ತರಿಗೆ ಸಮಯ ನಿಗದಿ - ಬೊಂಬೆ ತೊಟ್ಟಿಲು

ಮೈಸೂರಿನ ಅಂಬಾ ವಿಲಾಸ ಅರಮನೆ ಹಾಗು ಆವರಣದ ದೇವಾಲಯಗಳ ಪ್ರವೇಶಕ್ಕೆ ಭಕ್ತರಿಗೆ ಸಮಯ ನಿಗದಿ ಮಾಡಲಾಗಿದೆ.

Amba Vilas Palace Precinct
ಅಂಬಾ ವಿಲಾಸ ಅರಮನೆ ಆವರಣ
author img

By

Published : Feb 10, 2023, 10:01 PM IST

ಮೈಸೂರು: ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯ ಆವರಣದಲ್ಲಿರುವ 9 ದೇವಾಲಯಗಳ ದರ್ಶನಕ್ಕೆ ಪ್ರತಿದಿನ ಬೆಳಗ್ಗೆ 6.30 ರಿಂದ 10 ಗಂಟೆ, ಸಂಜೆ 6 ರಿಂದ 8.30 ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಯಾವ ಯಾವ ದ್ವಾರಗಳ ಮೂಲಕ ಭಕ್ತರು ಪ್ರವೇಶಿಸಬೇಕು ಎನ್ನುವುದನ್ನೂ ತಿಳಿಸಲಾಗಿದೆ. ಈ ಬಗ್ಗೆ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಭಕ್ತರ ಗಮನಕ್ಕೆ..: ಭಕ್ತರು ಕಾಲ್ನಡಿಗೆ ಮೂಲಕ ಮಹಾನಗರ ಪಾಲಿಕೆಯ ಮುಂಭಾಗದ ಅರಮನೆಯ ಕರಿಕಲ್ಲು ತೊಟ್ಟಿ ದ್ವಾರದ ಮೂಲಕ ಪ್ರವೇಶ ಪಡೆದು, ಪ್ರಸನ್ನ ಕೃಷ್ಣ ಸ್ವಾಮಿ ದೇವಾಲಯ, ಖಿಲ್ಲೆ ವೆಂಕಟರಮಣ ಸ್ವಾಮಿ ದೇವಾಲಯ ಹಾಗೂ ಲಕ್ಷ್ಮೀ ರಮಣ ಸ್ವಾಮಿ ದೇವಾಲಯಗಳ ದರ್ಶನ ಪಡೆಯಬಹುದು. ವರಾಹ ದ್ವಾರದ ಮೂಲಕ ಶ್ವೇತ ವರಾಹ ಸ್ವಾಮಿ ದೇವಾಲಯಕ್ಕೆ ದರ್ಶನ ಪಡೆಯಲು ತೆರಳಬಹುದು. ಭುವನೇಶ್ವರಿ ದೇವಾಲಯಕ್ಕೆ ಜಯರಾಮ, ಬಲರಾಮ ದ್ವಾರದ ಮೂಲಕ ತೆರಳಬಹುದು. ಜಯ ಮಾರ್ತಾಂಡ ದ್ವಾರದ ಮೂಲಕ ಗಾಯತ್ರಿ ದೇವಾಲಯ, ತ್ರಿನೇಶ್ವರ ಸ್ವಾಮಿ ದೇವಾಲಯ, ಕೋಡಿ ಸೋಮೇಶ್ವರ ಸ್ವಾಮಿ ದೇವಾಲಯ ಹಾಗೂ ಕೋಡಿ ಕಾಲ ಭೈರವೇಶ್ವರ ಸ್ವಾಮಿ ದೇವಾಲಯಗಳ ದರ್ಶನ ಪಡೆಯಬಹುದು.

ಅಂಗವಿಕಲರು ಹಾಗೂ ವೃದ್ದರು ಈ ಸಮಯಗಳಲ್ಲಿ ತಮ್ಮ ವಾಹನಗಳ ಮೂಲಕ ನೇರವಾಗಿ ಪ್ರವೇಶ ಪಡೆಯಬಹುದು. ದೇವಸ್ಥಾನಗಳ ಪ್ರವೇಶಕ್ಕೆ ಬರುವವರು ತಮ್ಮ‌ ವಾಹನಗಳನ್ನು ಕರಿಕಲ್ಲು ತೊಟ್ಟಿ ದ್ವಾರ, ವರಾಹ ದ್ವಾರ, ದೊಡ್ಡ ಕೆರೆ ಮೈದಾನ ಹಾಗೂ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿಲುಗಡೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಅಂಬಾವಿಲಾಸ ಅರಮನೆ ಬಗ್ಗೆ..: ಅಂಬಾವಿಲಾಸ ಅರಮನೆಯ ನಿರ್ಮಾಣ ಕೆಲಸ 1897 ರಲ್ಲಿ ಶುರುವಾಗಿದ್ದು 1912ರಲ್ಲಿ ಮುಕ್ತಾಯಗೊಳಿಸಲಾಗಿತ್ತು. ಇಂಡೋ ಸಾರ್ಸೆನಿಕ್‌ ಶೈಲಿಯ ಗುಮ್ಮಟಗಳು, ಕಮಾನುಗಳು, ಗೋಪುರಗಳನ್ನು ನಿರ್ಮಿಸಲಾಗಿದೆ. ಹೊರಭಾಗದಲ್ಲಿ ನಾನಾ ಪಕ್ಷಿಗಳು, ಪ್ರಾಣಿಗಳ ಚಿತ್ರ ಹಾಗೂ ಇತರೆ ಚಿತ್ರಗಳನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದೆ.

ಒಳಭಾಗದ ಮುಚ್ಚಿಗೆಯಲ್ಲಿ ಆಕರ್ಷಕ ಕೆತ್ತನೆಗಳಿವೆ. ಅರಮನೆಯ ಆವರಣದಲ್ಲಿ ಒಂಬತ್ತು ದೇವಾಲಯಗಳಿವೆ. ಅರಮನೆಯ ಪ್ರವೇಶ ಮಾಡುತ್ತಿದ್ದಂತೆ ಬೊಂಬೆ ತೊಟ್ಟಿಲು ಭಕ್ತರನ್ನು ಆಕರ್ಷಿಸಲಿದ್ದು, ಇದರಲ್ಲಿ 19 ಮತ್ತು 20ನೇ ಶತಮಾನದ ಪಾರಂಪರಿಕ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಸುಂದರ ಕೆತ್ತನೆಯ ಕಂಬಗಳಿಂದ ಆವರಿಸಿರುವ ವಿಶಾಲವಾದ ಹಾಲ್‌ಗಳು, ದರ್ಬಾರ್‌ ಹಾಲ್‌, ಕಲ್ಯಾಣ ಮಂಟಪಗಳು, ಆಯುಧಾಗಾರಗಳಿವೆ.

ವಿವಿಧ ಹಬ್ಬ, ರಜಾ ದಿನಗಳಲ್ಲಿ ಅರಮನೆಯೂ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುತ್ತದೆ. ಅಂಬಾವಿಲಾಸ ಅರಮನೆಗೆ ನಾಲ್ಕು ಪ್ರವೇಶದ್ವಾರಗಳಿವೆ. ಮುಖ್ಯ ದ್ವಾರ ಪೂರ್ವಕ್ಕೆ ಜಯಾ ಮಾರ್ಥಂಡ, ಉತ್ತರದಲ್ಲಿ ಜಯರಾಮಾ, ದಕ್ಷಿಣಕ್ಕೆ ಬಲರಾಮ ಮತ್ತು ಪಶ್ಚಿಮದಲ್ಲಿ ವರಾಹ ಎಂಬ ಪ್ರವೇಶ ದ್ವಾರವಿದೆ.

ಇದನ್ನೂಓದಿ: ಕೆಂಗಲ್ ಸ್ಮಾರಕ ಸ್ಮೃತಿ ಉದ್ಯಾನವನವಾಗಿ ಅಭಿವೃದ್ಧಿ, ಇದೇ ವರ್ಷ ಕೆಂಗಲ್ ಜೀವನಚರಿತ್ರೆ ಗ್ರಂಥ ಬಿಡುಗಡೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.