ETV Bharat / state

ಆಟೋ ಹರಿಸಿ ವ್ಯಕ್ತಿ ಕೊಲೆ ಮಾಡಿದ್ದ ಇಬ್ಬರ ಬಂಧನ - mysore murder case

ವ್ಯಕ್ತಿ ಮೇಲೆ ಆಟೋ ಹರಿಸಿ ಆತನ ಸಾವಿಗೆ ಕಾರಣರಾದ ಶ್ರೀಧರ್, ಗೋವಿಂದರಾಜು ಎಂಬುವವರನ್ನು ಎನ್.ಆರ್. ಠಾಣೆ ಪೊಲೀಸರು ಬಂಧಿಸಿದ್ದಾರೆ.

murder case of mysore: 2 arrested
ಆಟೋ ಹರಿಸಿ ವ್ಯಕ್ತಿ ಕೊಲೆ ಮಾಡಿದ್ದ ಇಬ್ಬರ ಬಂಧನ
author img

By

Published : Jan 14, 2021, 10:29 AM IST

Updated : Jan 14, 2021, 10:57 AM IST

ಮೈಸೂರು: ವ್ಯಕ್ತಿ ಮೇಲೆ ಆಟೋ ಹರಿಸಿ ಆತನ ಸಾವಿಗೆ ಕಾರಣರಾದ ಇಬ್ಬರನ್ನು ಎನ್.ಆರ್. ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಬಿ.ಎಂ.ಶ್ರೀ ನಗರದ ಶ್ರೀಧರ್, ಗೋವಿಂದರಾಜು ಬಂಧಿತರು. ರಸ್ತೆ ಬದಿ ನಿಂತಿದ್ದ ವ್ಯಕ್ತಿ ಮಲ್ಲಿಕಾರ್ಜುನನ ಮೇಲೆ ಆಟೋ ಹತ್ತಿಸಲಾಗಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಕೂಡಾ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಎನ್.ಆರ್ ಠಾಣೆಯ ಇನ್ಸ್​​ಪೆಕ್ಟರ್​​ ಅಜರುದ್ದೀನ್ ಮತ್ತು ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ವ್ಯಕ್ತಿ ಮೇಲೆ ಆಟೋ ಹರಿಸಿದ ದೃಶ್ಯ

ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರವಾಗಿ ಆಟೋ ಚಾಲಕ ಮಲ್ಲಿಕಾರ್ಜುನ ಮತ್ತು ಆತನ ಸ್ನೇಹಿತ ಶ್ರೀಧರ್ ( ಈತ ಕೂಡ ಆಟೋ ಚಾಲಕ ) ಇಬ್ಬರೂ ಜಗಳವಾಡಿದ್ದರು ಈ ದ್ವೇಷದಿಂದ ಶ್ರೀಧರ್ ಮತ್ತೋರ್ವ ಸ್ನೇಹಿತ ಗೋವಿಂದರಾಜುನನ್ನು ಕರೆಸಿ ಮಲ್ಲಿಕಾರ್ಜುನನನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: 'ನಾನೇನು ರೆಡಿಮೇಡ್ ಎಂಟಿಆರ್ ಫುಡ್ಸ್ ಅಲ್ಲ, ಹೋರಾಟದ ಮೂಲಕ ಶಾಸಕನಾದವನು: ರೇಣುಕಾ ಗರಂ

ಪ್ರಕರಣ ದಾಖಲಿಸಿಕೊಂಡಿರುವ ಎನ್.ಆರ್. ಠಾಣೆ ಪೊಲೀಸರು ಬಂಧಿತರನ್ನು ವಿಚಾರಣೆಗೊಳಪಡಿಸಿದ್ದಾರೆ.

Last Updated : Jan 14, 2021, 10:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.