ಮೈಸೂರು: ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ಅರಣ್ಯ ಪ್ರದೇಶದಲ್ಲಿ ಸೆರೆ ಸಿಕ್ಕ ಟಿ-23 ಹುಲಿಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಈ ಬಗ್ಗೆ ಮದುಮಲೈ ಅರಣ್ಯ ಇಲಾಖೆ ವಿಡಿಯೋ ರಿಲೀಸ್ ಮಾಡಿದೆ.
ಈಗ ಸೆರೆ ಸಿಕ್ಕಿರುವ ಹುಲಿಯೂ ಸಣಗುಡಿ ಕಾಡಿನಲ್ಲಿ ನಾಲ್ವರನ್ನು ಬಲಿ ಪಡೆದು, 40ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದುಹಾಕಿದ್ದ 10 ವರ್ಷದ ಗಂಡು ಹುಲಿಯನ್ನು ಸತತ ಮೂವತ್ತು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಅರಿವಳಿಕೆ ಮದ್ದು ನೀಡಿ ಅಕ್ಟೋಬರ್ 14ರಂದು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಈ ವೇಳೆ, ಹುಲಿ ಗಂಭೀರವಾಗಿ ಗಾಯಗೊಂಡಿತ್ತು. ಹೀಗಾಗಿ ಮೈಸೂರು ಮೃಗಾಲಯ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಕಳೆದ 38 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣಿತ್ತಿದೆ ಎಂದು ತಿಳಿದು ಬಂದಿದೆ.
ಸೆರೆ ಹಿಡಿದಿರುವ ಹುಲಿಯನ್ನು ವಾಪಸ್ ಕರೆ ತಂದು ಚೆನ್ನೈ ಮೃಗಾಲಯದಲ್ಲಿ ಚಿಕಿತ್ಸೆ ನೀಡಬೇಕೆಂದು ಪ್ರಾಣಿ ಪ್ರೀಯರು ಅಭಿಯಾನ ಆರಂಭಿಸಿದ್ದರು. ಇದಕ್ಕೆ ಮಣಿದು ಮದುಮಲೈ ಅರಣ್ಯ ಇಲಾಖಾ ಸಿಬ್ಬಂದಿ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಬಂದು ಹುಲಿಯ ಆರೋಗ್ಯದ ಕುರಿತಂತೆ ಮಾಹಿತಿ ಪಡೆದಿದ್ದು, ಹುಲಿ ಚೇತರಿಸಿಕೊಳ್ಳಲು ಮತ್ತಷ್ಟು ದಿನ ಇಲ್ಲಿಯೇ ಇದ್ದರೆ ಒಳ್ಳೆಯದು ಎಂದು ತಿಳಿದು ವಾಪಸ್ ಆಗಿದ್ದಾರೆ. ಹಾಗೆಯೇ ಹುಲಿ ಚೇತರಿಸಿಕೊಳ್ಳುತ್ತಿರುವ ಕುರಿತಾದ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಪ್ರೀತಿ, ಮದುವೆ ಮತ್ತು ವಯಸ್ಸು.. ವಿಧಾನಸಭೆಯಲ್ಲಿ ಹಾಸ್ಯ ಪ್ರಸಂಗ