ETV Bharat / state

ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಯಾದರೆ ಉತ್ತಮ: ವಿ.ಶ್ರೀನಿವಾಸ್ ಪ್ರಸಾದ್ - ಸಂಸದ‌ ವಿ.ಶ್ರೀನಿವಾಸ್ ಪ್ರಸಾದ್

ಬಿಜೆಪಿಗೆ ನಾವು ಹೊಸಬರು. ಪಕ್ಷ ಕಟ್ಟುವುದರಲ್ಲಿ ಯಡಿಯೂರಪ್ಪನವರ ಅಪಾರ ಶ್ರಮವಿದೆ. ನಾವು ಬಿಜೆಪಿಗೆ ಬಂದಿದ್ದರಿಂದ ಪಕ್ಷಕ್ಕೆ ಸಾಕಷ್ಟು ಶಕ್ತಿ ಬಂದಿದೆ. ನೆಲೆಯೇ ಇಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ ಶಕ್ತಿ ವೃದ್ಧಿಯಾಗಿದೆ ಎಂದು ಸಂಸದ‌ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

MP V. Srinivas Prasad Statement in mysore
ಮೈಸೂರಿನಲ್ಲಿ ಸಂಸದ‌ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ
author img

By

Published : Jul 4, 2021, 6:43 PM IST

Updated : Jul 4, 2021, 6:53 PM IST

ಮೈಸೂರು: ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಯಾದರೆ ಉತ್ತಮ. ರಾಜ್ಯದ ನಾಲ್ವರು ಸಂಸದರು ಸಚಿವರಾಗಲಿ ಎಂದು‌ ಸಂಸದ‌ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಅನಾರೋಗ್ಯವಿದ್ದು ಸಚಿವನಾಗಲ್ಲ. ಆದರೆ ಉಳಿದವರು ಸಚಿವರಾಗಲಿ. ರಾಜ್ಯದಲ್ಲಿ ನಾಲ್ಕು ಸಂಸದರ ಹೆಸರು ಕೇಳಿಬರುತ್ತಿದೆ. ಈ ಪೈಕಿ ಸಂಸದ ಉಮೇಶ್ ಜಾಧವ್ ಹೆಸರೂ ಇದೆ. ಜಾಧವ್‌ಗೆ ಸ್ಥಾನ ನೀಡಬೇಕು. ಅದರಂತೆ ರಾಜ್ಯದಲ್ಲಿ ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆಗೂ ಸಚಿವ ಸ್ಥಾನ ನೀಡಲಿ ಎಂದರು.

ಮೈಸೂರಿನಲ್ಲಿ ಸಂಸದ‌ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ

ಬಿಜೆಪಿ ನಾಯಕತ್ವ ಬದಲಾವಣೆ ವಿಚಾರ ಮುಗಿದ ಅಧ್ಯಾಯ. ಅರುಣ್ ಸಿಂಗ್ ಕರ್ನಾಟಕಕ್ಕೆ ಬಂದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ತಿಳಿಸಿದ್ದಾರೆ. ಹೈಕಮಾಂಡ್ ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳುವುದೋ ನೋಡಬೇಕು. ಯಡಿಯೂರಪ್ಪ ಕೂಡ ಹೈಕಮಾಂಡ್ ನಿರ್ಧಾರಕ್ಕೆ ಬದ್ದನಿದ್ದೇನೆ ಎಂದಿದ್ದಾರೆ ಎಂದು ತಿಳಿಸಿದರು.

ಬಿಜೆಪಿಗೆ ನಾವು ಹೊಸಬರು. ಪಕ್ಷ ಕಟ್ಟುವುದರಲ್ಲಿ ಯಡಿಯೂರಪ್ಪನವರ ಅಪಾರ ಶ್ರಮವಿದೆ. ನಾವು ಬಿಜೆಪಿಗೆ ಬಂದಿದ್ದರಿಂದ ಪಕ್ಷಕ್ಕೆ ಸಾಕಷ್ಟು ಶಕ್ತಿ ಬಂದಿದೆ. ನೆಲೆಯೇ ಇಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ ಶಕ್ತಿ ವೃದ್ಧಿಯಾಗಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 3 ಲಕ್ಷ ಮತಗಳ ಅಂತರದಿಂದ ಗೆಲ್ಲುವ ಸಾಮರ್ಥ್ಯವಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದರು.

ಇದನ್ನೂ ಓದಿ: ಅಪ್ಪ ಅಂಬಾರಿ ಹೊತ್ತ ಅಂತ ಮರಿ ಆನೆಗೆ ಹೊರಿಸೋಕೆ ‌ಆಗಲ್ಲ: ಸಿ‌‌.ಪಿ.ಯೋಗೇಶ್ವರ್

ಹಿಂದೆ ಸಿದ್ದರಾಮಯ್ಯ ಅವರನ್ನು ಸೋಲಿಸೋಕೆ ನಮ್ಮ ಮನೆಯಲ್ಲೇ ಕಾರ್ಯ ತಂತ್ರ ನಡೆದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಂದು ಈಗಲೂ ನಮ್ಮ ಮನೆಯಲ್ಲೇ ಎಲ್ಲಾ ಕಾರ್ಯತಂತ್ರ ನಡೆಯುತ್ತೆ ಅನ್ನೋದನ್ನ ಒಪ್ಪಲಾರೆ ಎಂದರು.

ರಮೇಶ್ ಜಾರಕಿಹೊಳಿ ಪ್ರಕರಣವನ್ನು ಎಸ್.ಐ.ಟಿ ತನಿಖೆ ನಡೆಸುತ್ತಿದೆ. ತನಿಖಾ ವರದಿ ನಂತರ ಅವರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂದರು.

Last Updated : Jul 4, 2021, 6:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.