ETV Bharat / state

ಚಾಮುಂಡಿ ಬೆಟ್ಟ ಹುಂಡಿ ಹಣದಿಂದ ಸಿ ಕೆಟಗರಿ ದೇಗುಲಗಳ ಅಭಿವೃದ್ಧಿಗೆ ಚಿಂತನೆ: ಪ್ರತಾಪ್ ಸಿಂಹ

ಚಾಮುಂಡಿ ಬೆಟ್ಟದ ಹುಂಡಿ ಹಣದಿಂದ ಪಾಳು ಬಿದ್ದ ದೇವಾಲಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
author img

By ETV Bharat Karnataka Team

Published : Jan 15, 2024, 6:58 AM IST

ಸಂಸದ ಪ್ರತಾಪ್ ಸಿಂಹ ಹೇಳಿಕೆ

ಮೈಸೂರು: ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಎಂ.ಜಿ.ರಸ್ತೆಯಲ್ಲಿರುವ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಭಾನುವಾರ ಸ್ವಚ್ಛತಾ ಕಾರ್ಯ ನಡೆಯಿತು. ಬಿಜೆಪಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಸೇರಿದಂತೆ ಹಲವರು ಸ್ವಚ್ಛತಾ ಕಾರ್ಯದಲ್ಲಿ ನಿರತರಾದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್‌ ಸಿಂಹ, "ಜನವರಿ 22ರಂದು ರಾಮಜನ್ಮಭೂಮಿಯಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜ.14ನೇ ತಾರೀಖಿನಂದು ದೇಶದ ರಾಮಮಂದಿರಗಳು ಹಾಗೂ ದೇವಸ್ಥಾನಗಳ ಸ್ವಚ್ಛತಾ ಕಾರ್ಯ ನಡೆಸಬೇಕೆಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು. ಅದಕ್ಕನುಗುಣವಾಗಿ ನಮ್ಮ ಕೃಷ್ಣರಾಜ ಕ್ಷೇತ್ರದ ಅಗ್ರಹಾರದ ಎಂ.ಜಿ.ರಸ್ತೆಯಲ್ಲಿ ಇರುವ ನಾಲ್ಕುನೂರು ವರ್ಷಗಳಷ್ಟು ಹಳೆಯ ಕೋದಂಡರಾಮ ದೇವಸ್ಥಾನವನ್ನು ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯ ಶಾಸಕರು ಎಲ್ಲ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದರು. ನಾವೆಲ್ಲಾ ಇಲ್ಲಿ ಬಂದು ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ದೇಗುಲದ ಅಭಿವೃದ್ಧಿಯನ್ನು ಶಾಸಕರ ನೇತೃತ್ವದಲ್ಲಿ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.

"ಚಾಮುಂಡಿ ಬೆಟ್ಟದ ಹುಂಡಿ ಹಣದಿಂದ ಸಿ ಕೆಟಗರಿ ದೇವಾಲಯಗಳ ಅಭಿವೃದ್ದಿಗೆ ಚಿಂತನೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಮೈಸೂರಿನಲ್ಲಿ ಸಾಕಷ್ಟು ಐತಿಹಾಸಿಕ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ದುಃಸ್ಥಿತಿಯಲ್ಲಿದ್ದು, ಪಾಳು ಬಿದ್ದಿವೆ" ಎಂದರು.

"ದೇವಾಲಯಗಳ ಅಭಿವೃದ್ದಿಗೆ ಸರ್ಕಾರದ ಅನುದಾನಕ್ಕೆ ಕಾಯಬೇಕಿಲ್ಲ. ಹೆಚ್ಚು ಆದಾಯಗಳಿರುವ ದೇವಸ್ಥಾನಗಳು ಕಡಿಮೆ ಆದಾಯವಿರುವ ದೇವಾಲಯಗಳನ್ನು ದತ್ತು ಪಡೆದರೆ ಸಾಕು. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಚಾಮುಂಡಿ ಬೆಟ್ಟದ ಹುಂಡಿ ಹಣ ಸುಮಾರು 130 ಕೋಟಿ ರೂ ಇದೆ. ಚಾಮುಂಡಿ ದೇವಿಯ ಕೃಪೆಯಿಂದ ಎಲ್ಲಾ ದೇವಾಲಯಗಳು ಅಭಿವೃದ್ದಿಯಾಗಲಿ ಎಂಬ ಉದ್ದೇಶವಿದೆ" ಎಂದು ಹೇಳಿದರು.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ: ಪ್ರತಾಪ್ ಸಿಂಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.