ETV Bharat / state

ಬಿಜೆಪಿ ತತ್ವ ಸಿದ್ಧಾಂತ ಪಥ್ಯ ಆಗಲಿಲ್ಲವೆಂದರೆ ಪಕ್ಷ ಬಿಟ್ಟು ಹೋಗಲಿ: ಹಳ್ಳಿಹಕ್ಕಿಗೆ ಕುಟುಕಿದ ಪ್ರತಾಪಸಿಂಹ - ಬಿಜೆಪಿ

ಸಂಸದ ವಿ ಶ್ರೀನಿವಾಸ್ ಪ್ರಸಾದ್ ಮತ್ತು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಅವರ ಕಿತ್ತಾಟದ ಕುರಿತಾಗಿ ಸಂಸದ ಪ್ರತಾಪಸಿಂಹ ಪ್ರತಿಕ್ರಿಯೆ.

Railway Stable Line Work Inspection MP Prathapsimha
ರೈಲ್ವೆ ಸ್ಟೇಬಲ್ ಲೈನ್ ಕಾಮಗಾರಿ ಪರಿಶೀಲನೆ ಸಂಸದ ಪ್ರತಾಪಸಿಂಹ
author img

By

Published : Dec 17, 2022, 1:12 PM IST

ಮೈಸೂರು: ಹೆಚ್​ ವಿಶ್ವನಾಥ್ ಅವರೇ ನಿಮಗೆ ಬಿಜೆಪಿ ತತ್ವ ಸಿದ್ಧಾಂತಗಳು ಪಥ್ಯ ಆಗಲಿಲ್ಲ ಅಂದರೆ ಯಾಕೆ ಬಿಜೆಪಿಯಲ್ಲಿದ್ದೀರಿ ಎಂದು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ.

ಅಶೋಕಪುರಂ ರೈಲ್ವೆ ನಿಲ್ದಾಣದ ಸ್ಟೇಬಲ್ ಲೈನ್ ಕಾಮಗಾರಿ ಪರಿಶೀಲನೆ ನಂತರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಸಂಸದ ವಿ ಶ್ರೀನಿವಾಸ್ ಪ್ರಸಾದ್ ಮತ್ತು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಅವರ ಕಿತ್ತಾಟದ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರು ಬೇರೆ ಕಡೆ ಹೋಗಬಹುದಲ್ಲ ಎಂದು ಸಲಹೆ ನೀಡಿದ್ದಾರೆ.

ಪಕ್ಷದಲ್ಲಿದ್ದುಕೊಂಡು ಅವರಿವರನ್ನು ಯಾಕೆ ಪ್ರತಿದಿನ ಚುಚ್ಚೋದು, ತಿವಿಯೋದು ಮಾಡುತ್ತೀರಾ? ಈಗಾಗಲೇ ಜನ ಬೇಸತ್ತು ನಿಮಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ಆದರೂ ನೀವು ಬುದ್ಧಿ ಕಲಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಶ್ನಾತೀತ ನಾಯಕ: ಶ್ರೀನಿವಾಸ್ ಪ್ರಸಾದ್ ಮೈಸೂರು ಭಾಗದಲ್ಲಿ ಒಬ್ಬ ಪ್ರಶ್ನಾತೀತ ನಾಯಕ. ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಸಾರ್ವಜನಿಕ ವಲಯದಲ್ಲಿ ಅವರ ಏನೇ ಮಾತಾಡಿದರೂ ತೂಕವಿರುತ್ತೆ. ಅವರ ಬಗ್ಗೆ ಯಾರೇ ಏನೇ ಮಾತನಾಡಿದರೂ ನನಗೆ ವೈಯಕ್ತಿಕವಾಗಿ ನೋವಾಗುತ್ತದೆ ಎಂದು ಹೇಳಿದರು.

ಇದನ್ನೂಓದಿ:ನಾಯಿ ಬಾಲ ಯಾವತ್ತಿದ್ದರೂ ಡೊಂಕು.. ಪ್ರಧಾನಿ ಮೋದಿಯನ್ನು ಟೀಕಿಸಿದ ಪಾಕ್ ಸಚಿವರ ವಿರುದ್ಧ ಯಡಿಯೂರಪ್ಪ ಕಿಡಿ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.